Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

'ಬಹುರೂಪಿ'ಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ

04:33 PM Apr 02, 2024 IST | suddionenews
Advertisement

ಬೆಂಗಳೂರು, ಏಪ್ರಿಲ್.02 : 'ಬಹುರೂಪಿ' ಪ್ರಕಟಿಸಿದ 'ಕೆರೆ-ದಡ' ಕೃತಿ ಪ್ರಕಾಶನ ರಂಗದ ಪ್ರತಿಷ್ಟಿತ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ.

Advertisement

'ಪಬ್ಲಿಷಿಂಗ್ ನೆಕ್ಸ್ಟ್' ಹಮ್ಮಿಕೊಂಡಿದ್ದ ಈ ಸ್ಪರ್ಧೆಯಲ್ಲಿ ಹಿರಿಯ ಕಲಾವಿದ ಸುಧಾಕರ ದರ್ಬೆ ರೂಪಿಸಿದ ಮುಖಪುಟ ಮೊದಲ ಸ್ಥಾನ ಪಡೆದಿದೆ.

ಪ್ರತೀ ವರ್ಷ ಪ್ರಕಾಶನ ರಂಗದ ವಿವಿಧ ವಿಭಾಗಗಳಲ್ಲಿ 'ಪಬ್ಲಿಷಿಂಗ್ ನೆಕ್ಸ್ಟ್' ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದ್ದು ಇದೇ ಮೊದಲ ಬಾರಿಗೆ ಕನ್ನಡದ ಕೃತಿಯೊಂದು ತನ್ನ ಮುಖಪುಟ ವಿನ್ಯಾಸಕ್ಕಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನು ಗಳಿಸಿದೆ.

Advertisement

ಭಾರತದ ಎಲ್ಲಾ ಭಾಷೆಗಳನ್ನು ಒಳಗೊಂಡು ಜರುಗಿದ ಈ ಮುಖಪುಟ ಸ್ಪರ್ಧೆಯಲ್ಲಿ ಅನೇಕ ಪ್ರತಿಷ್ಟಿತ ಪ್ರಕಾಶನ ಸಂಸ್ಥೆಗಳು ಭಾಗವಹಿಸಿದ್ದವು. ಈ ಹಿಂದೆ ಬಹುರೂಪಿಯ 'ದುಪ್ಪಟ್ಟು' 'ಛೂಮಂತ್ರಯ್ಯನ ಕಥೆಗಳು' ಹಾಗೂ 'ಅಕ್ಕಯ್' ಕೃತಿಗಳು ರನ್ನರ್ ಅಪ್ ಆಗಿದ್ದವು

ಪತ್ರಿಕಾ ವಿನ್ಯಾಸಕಾರರಾದ ಸುಧಾಕರ ದರ್ಬೆ ಅವರು ಪುತ್ತೂರು ಮೂಲದ ದರ್ಬೆ ಗ್ರಾಮದವರು. ಅನೇಕ ಕೃತಿಗಳಿಗೆ ಇವರು ರಚಿಸಿರುವ ಮುಖಪುಟ ಹಾಗೂ ಚಿತ್ರಗಳು ಎಲ್ಲರ ಗಮನ ಸೆಳೆದಿವೆ.

Advertisement
Tags :
BahurupibengaluruchitradurgaNational awardsuddionesuddione newsಗರಿಚಿತ್ರದುರ್ಗಬಹುರೂಪಿಬೆಂಗಳೂರುರಾಷ್ಟ್ರೀಯ ಪ್ರಶಸ್ತಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article