For the best experience, open
https://m.suddione.com
on your mobile browser.
Advertisement

ಆಗಸ್ಟ್ 17ರಂದು ಎಚ್ಚರ : ಭೂಮಿಗೆ ಹತ್ತಿರವಾಗುವ ಕ್ಷುದ್ರಗ್ರಹದ ಬಗ್ಗೆ ನಾಸಾ ಹೇಳಿದ್ದೇನು..?

05:50 PM Aug 15, 2024 IST | suddionenews
ಆಗಸ್ಟ್ 17ರಂದು ಎಚ್ಚರ   ಭೂಮಿಗೆ ಹತ್ತಿರವಾಗುವ ಕ್ಷುದ್ರಗ್ರಹದ ಬಗ್ಗೆ ನಾಸಾ ಹೇಳಿದ್ದೇನು
Advertisement

Advertisement
Advertisement

ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಜನರಿಗೆ ಕ್ಷುದ್ರಗ್ರಹದ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಆಗಸ್ಟ್ 17 ರಂದು ಕ್ಷುದ್ರಗ್ರಹ ಭೂಮಿಗೆ ಹತ್ತಿರವಾಗಲಿದ್ದು, ಅದನ್ನು ತಡೆಯುವ ಸಿದ್ಧತೆಗಳಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದೆ. ಈ ಗ್ರಹ ಭೂಮಿಗೆ ಅಪ್ಪಳಿಸುವ ಶೇ72 ರಷ್ಟು ಸಾಧ್ಯತೆಯನ್ನು ಹೊಂದಿದೆ. ಈ ಕ್ಷುದ್ರ ಗ್ರಹವನ್ನು ವಿಮಾನದ ಗಾತ್ರಕ್ಕೆ ಹೋಲಿಕೆ ಮಾಡಲಾಗಿದೆ. ನಾಸಾ ಹೇಳಿರುವಂತೆ 110 ಅಡಿ ವ್ಯಾಸವನ್ನು ಹೊಂದಿರುವ ಕ್ಷುದ್ರಗ್ರಹ 2024 OY2 ಇದಾಗಿದೆ.

Advertisement

ಇನ್ನು ನಾಸಾ ಹೆಸರಿಸಿರುವಂತೆ ಕ್ಷುದ್ರಗ್ರಹ 2024 OY2 ಸೂರ್ಯನನ್ನು ಸುತ್ತುವ ಮತ್ತು ಭೂಮಿಯ ಕಕ್ಷೆಗೆ ಸಮೀಪವಿರುವ ವಸ್ತುಗಳ ಗುಂಪಿಗೆ ಸೇರಿದೆ. ಇದು ಅಸಾಮಾನ್ಯವಾಗಿದ್ದು, ವಿಜ್ಞಾನಿಗಳಿಗೆ ಇದರ ಡೇಟಾ ಸಂಗ್ರಹಿಸುವುದೇ ಬಹುಮುಖ್ಯ ಕೆಲಸವಾಗಿದೆ. ಕ್ಷುದ್ರಗ್ರಹ 2024 OY2 ಭೂಮಿಯ ಸಮೀಪವಾಗಿ ಸರಿ ಸುಮಾರು 1.02 ಮಿಲಿಯನ್ ಮೈಲುಗಳ ದೂರದಲ್ಲಿ ಹಾರಲಿದೆ ಎಂಬ ನಿರೀಕ್ಷೆ ಇದೆ.

Advertisement

ಆದರೆ ಖಗೋಳದ ಭಾಷೆಯಲ್ಲಿ ಭೂಮಿಯ ಸಮೀಪವಾಗಿ ಹಾದು ಹೋದಂತೆ ಕಾಣಲಿದೆ. ಅಂದ ಹಾಗೆಯೇ ಇದು ಪ್ರತಿ ಗಂಟೆಗೆ ಸುಮಾರು 32 ಸಾವಿರ ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ ಎಂದು ನಾಸಾ‌ ಲೆಕ್ಕಚಾರ ಮಾಡಿದೆ. ಕ್ಷುದ್ರ ಗ್ರಹ 2024 OY2 ಭೂಮಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನಾಸಾ ಭರವಸೆ ನೀಡಿದೆ. ಆದರೂ ಈ ಬಗ್ಗೆ ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ. ಇನ್ನು ಕ್ಷುದ್ರಗ್ರಹ 2024 OY2 ಹಾದಿಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡರು ಭವಿಷ್ಯದಲ್ಲಿ ವಿಭಿನ್ನ ಫಲಿತಾಂಶ ನೀಡಬಹುದು. ಹೀಗಾಗಿ ನಾಸಾ ಕ್ಷುದ್ರಗ್ರಹದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

Tags :
Advertisement