For the best experience, open
https://m.suddione.com
on your mobile browser.
Advertisement

ಮಾರುಕಟ್ಟೆಗೆ ಬಂತು ನ್ಯಾನೋ ಎಲೆಕ್ಟ್ರಾನಿಕ್ ಕಾರು : ಏನಿಲ್ಲಾ ವಿಶೇಷತೆ ಇದೆ ಗೊತ್ತಾ..?

12:59 PM May 16, 2024 IST | suddionenews
ಮಾರುಕಟ್ಟೆಗೆ ಬಂತು ನ್ಯಾನೋ ಎಲೆಕ್ಟ್ರಾನಿಕ್ ಕಾರು   ಏನಿಲ್ಲಾ ವಿಶೇಷತೆ ಇದೆ ಗೊತ್ತಾ
Advertisement

ಎಲೆಕ್ಟ್ರಾನಿಕ್ ಬೈಕ್, ಕಾರುಗಳಿಗೆ ಭಾರತದಲ್ಲಿ ಸಿಕ್ಕಪಟ್ಟೆ ಡಿಮ್ಯಾಂಡ್ ಇದೆ. ಪೆಟ್ರೋಲ್ ದರ ಏರಿಕೆಯಾದ ಬೆನ್ನಲ್ಲೇ ಜನ ಎಲೆಕ್ಟ್ರಾನಿಕ್ ಮೊರೆ ಹೋಗುತ್ತಿದ್ದಾರೆ‌.‌ಇದೇ ಕಾರಣಕ್ಕಾಗಿಯೇ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯೂ ಹೆಚ್ಚಳವಾಗುತ್ತಿದೆ. ಇದೀಗ ಭಾರತಕ್ಕೆ ನ್ಯಾನೋ ಎಲೆಕ್ಟ್ರಾನಿಕ್ ಕಾರು ಬಂದಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

Advertisement

ರತನ್ ಟಾಟಾ ಒಡೆತನದ ಟಾಟಾ ಕಂಪನಿ ಈ ಕಾರನ್ನು ಸಿದ್ಧಪಡಿಸಿದೆ. ಸದ್ಯ ಈ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಅವೈಲಬಲ್ ಇದೆ. ಈ ಕಾರು ಶಕ್ತಿಯುತವಾದಂತ ಬ್ಯಾಟರಿಯನ್ನು ಹೊಂದಿದೆ. ಇದನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 300 ಕಿ.ಮೀಟರ್ ದೂರದವರೆಗೂ ಸಾಗಬಹುದು.

ಇದು ಏಳು ಇಂಚಿನ ಟಚ್ ಸ್ಕ್ರೀನ್ ಹೊಂದಿದೆ‌. ಕಾರಿನಲ್ಲಿ ಆರು ಸ್ಪೀಕರ್ ಸೌಂಡ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಇಂಟರ್ನೆಟ್ ಸಂಪರ್ಕವೂ ಇದೆ.‌ ಪವರ್ ಸ್ಟಿರೀಂಗ್, ಒವರ್ ವಿಂಡೋಸ್, ಆಂಟಿ ಬ್ರೇಕಿಂಗ್ ಲಾಕಿಂಗ್ ಸಿಸ್ಟಂ, ಸ್ವಯಂ ಚಾಲಿತ ಎಸಿ ಸೌಲಭ್ಯ, ರಿಮೋಟ್ ಲಾಕಿಂಗ್ ಸಿಸ್ಟಂ ಸೇರಿದಂತೆ ಹಲವು ಸೌಲಭ್ಯಗಳು ಈ ಕಾರಿ‌ಲ್ಲಿ ಇದೆ.

Advertisement

ಲಾಂಗ್ ಡ್ರೈವ್ ಹೋಗಿವವರಿಗೂ ಕೂಡ ಸೂಕ್ತವಾಗಿದೆ. ಯಾವುದೇ ಸಮಸ್ಯೆ ಇಲ್ಲ. ಪುಟ್ಟ ಫ್ಯಾಮಿಲಿ ಜೊತೆಗೆ ಹೊರಗೆ ಹೋಗುವವರಿಗೂ ಹೇಳಿ ಮಾಡಿಸಿದಂತೆ ಇರುತ್ತದೆ. ಇನ್ನು ಈ ಕಾರಿನ ಬೆಲೆಯನ್ನು ಸಂಸ್ಥೆ, ಸಾಮಾನ್ಯ ಜನರನ್ನು ತಲೆಯಲ್ಲಿಟ್ಟುಕೊಂಡು ಫಿಕ್ಸ್ ಮಾಡಿದೆ ಎನ್ನಬಹುದೇನೋ.ಈ ಕಾರಿನ ಬೆಲೆ 3 ರಿಂದ 5 ಲಕ್ಷ ರೂಪಾಯಿ ಆಗಿದೆ. ಈಗಾಗಲೇ ಎಲೆಕ್ಟ್ರಾನಿಕ್ ನ್ಯಾನೋ ಕಾರು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಸಾಕಷ್ಟು ಜನ ಬುಕ್ಕಿಂಗ್ ಮಾಡಲು ತಯಾರಿದ್ದಾರೆ.

Tags :
Advertisement