For the best experience, open
https://m.suddione.com
on your mobile browser.
Advertisement

ನಂದಿನಿ ಹಾಲಿನ ದರ ಮತ್ತೆ ಏರಿಕೆ : ಪ್ರತಿ ಲೀ.2 ರೂ ಜಾಸ್ತಿ.. 50ML ಹಾಲು ಕೂಡ ಹೆಚ್ಚಳ

12:05 PM Jun 25, 2024 IST | suddionenews
ನಂದಿನಿ ಹಾಲಿನ ದರ ಮತ್ತೆ ಏರಿಕೆ   ಪ್ರತಿ ಲೀ 2 ರೂ ಜಾಸ್ತಿ   50ml ಹಾಲು ಕೂಡ ಹೆಚ್ಚಳ
Advertisement

Advertisement

ಬೆಂಗಳೂರು: ಈಗಾಗಲೇ ನಂದಿನಿ ಹಲಿನ ದರವನ್ನು ಹೆಚ್ಚಳ ಮಾಡಿಕೊಂಡಿದೆ. ಇದೀಗ ಮತ್ತೆ ಪ್ರತಿ ಲೀಟರ್ ಹಾಲಿನ ದರವನ್ನು 2 ರೂಪಾಯಿ ಹೆಚ್ಚಳ ಮಾಡಿದೆ. ಈ ಸಂಬಂಧ ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಹಾಲು ಮಂಡಳಿ ಹಾಲು ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನ. 98 ಲಕ್ಷ 17 ಸಾವಿರ ಲೀ ಸಂಗ್ರಹ ಆಗ್ತಿದೆ. ಸದ್ಯದಲ್ಲಿ ಒಂದು ಕೋಟಿ ಸಂಗ್ರಹ ಗುರಿ ಮುಟ್ಟಲಿದೆ. ಇದು ದಾಖಲೆ. ರಾಜ್ಯದ 27 ಲಕ್ಷಹಾಲು ಉತ್ಪಾದಕರು ಇದಕ್ಕೆ ಕಾರಣ. ಸದ್ಯದ ಶೇಖರಣೆಯಲ್ಲಿ 30 ಲಕ್ಷ ಪೌಡರ್ ಗೆ ಕಳುಹಿಸುತ್ತಿದ್ದೇವೆ. ಇದರಲ್ಲಿ ನಮ್ಮ ಬಂಡವಾಳ ಸ್ವಲ್ಪ ಡೆಡ್ ಆಗ್ತಿದೆ. 72 ಲಕ್ಷ ಹಾಲು ಉತ್ಪಾದಕರು ಗ್ರಾಹಕರಿಗೆ ತೊಂದರೆಯಾಗಬಾರದು.

Advertisement

ಇಬ್ಬರು ಕೂಡ ನಮಗೆ ಎರಡು ಕಣ್ಣಿದ್ದಾಗೆ. ಲೀ ಗೆ ಸದ್ಯ ಗ್ರಾಹಕರಿಗೆ 42 ರೂ ಇದೆ. ಪ್ರತೀ ಹಾಲಿನ ಪ್ಯಾಕೆಟ್ ನಲ್ಲು 50ml ಜಾಸ್ತಿ ಹಾಲು ಇರಲಿದೆ. ಈ ಮೂಲಕ ಅರ್ಧ ಲೀ ಹಾಲಿನ ಪ್ಯಾಕೆಟ್ ನಲ್ಲು 550 ml ಇರಲಿದೆ. ನಾಳೆಯಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಸಾವಿರ ಎಂಎಲ್ ಬರ್ತಿದ್ದ ಹಾಲು ಇನ್ಮೇಲೆ ಸಾವಿರದ ಐವತ್ತು ಎಂಎಲ್ ಗೆ ಏರಿಕೆಯಗಿದೆ.

ಹಾಲಿನ‌ ಹೊಸ ದರ ಇಂತಿದೆ:

ನೀಲಿ ಪ್ಯಾಕೆಟ್ ಹಾಲು 42 ರಿಂದ 44 ರೂ
ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 43 ರಿಂದ 45ರೂ
ಆರೆಂಜ್ ಪ್ಯಾಕೆಟ್ ಹಾಲು 46ರಿಂದ 48 ರೂ
ಆರೆಂಜ್ ಸ್ಪೆಷಲ್ ಹಾಲು 48 ರಿಂದ 50 ರೂ
ಶುಭಂ ಹಾಲು 48ರಿಂದ 50 ರೂ
ಸಮೃದ್ದಿ ಹಾಲು 51ರಿಂದ 53ರೂ
ಶುಭಂ (ಟೋನ್ಡ್ ಹಾಲು) 49ರಿಂದ 51ರೂ
ಸಂತೃಪ್ತಿ ಹಾಲು 55 ರಿಂದ 57 ರೂ
ಶುಭಂ ಗೋಲ್ಡ್ ಹಾಲು 49ರಿಂದ 51ರೂ
ಶುಭಂ ಡಬಲ್ ಟೋನ್ಡ್ ಹಾಲು 41 ರಿಂದ 43 ರೂ ಗೆ ಏರಿಕೆ

Tags :
Advertisement