ನಾಗಚೈತನ್ಯ-ಶೋಭಿತಾ ಮದುವೆ 50 ಕೋಟಿಗೆ ಮಾರಾಟ
ಇತ್ತೀಚಿನ ದಿನಗಳಲ್ಲಿ ಸೆಲೆಬ್ರೆಟಿಗಳ ಮದುವೆಯಲ್ಲಿ ಕಂಡಕಂಡವರು ವಿಡಿಯೋ ಮಾಡುವಂತಿಲ್ಲ, ಸಿಕ್ಕ ಸಿಕ್ಕವರು ಪ್ರಸಾರ ಮಾಡುವಂತೆಯೂ ಇಲ್ಲ. ಅದಕ್ಕೆ ಕಾರಣ ಆ ಮದುವೆಯನ್ನು ಸೆಲೆಬ್ರೆಟಿಗಳು ಕಮರ್ಷಿಯಲ್ ಆಗಿನೇ ನೋಡುತ್ತಾರೆ, ಕೋಟ್ಯಾಂತರ ರೂಪಾಯಿಗೆ ಮಾರಾಟ ಮಾಡುತ್ತಾರೆ. ಡಿಸೆಂಬರ್ 4 ರಂದು ನಾಗಚೈತನ್ಯ ಹಾಗೂ ಶೋಭಿತಾ ಮದುವೆ ನಡೆಯುತ್ತಿದೆ. ಅಕ್ಕಿನೇನಿ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆಯಲಿದೆ. ಈ ವಿವಾಹದ ವಿಡಿಯೋ ಪ್ರಸಾರದ ಹಕ್ಕನ್ನ ಇದೀಗ ನೆಟ್ ಫ್ಲಿಕ್ಸ್ 50 ಕೋಟಿಗೆ ತೆಗೆದುಕೊಂಡಿದೆ.
ನಾಗಚೈತನ್ಯಗೆ ಇದು ಎರಡನೇ ಮದುವೆಯಾಗಿದೆ. ಸಮಂತಾಗೆ ಡಿವೋರ್ಸ್ ನೀಡಿದ ವರ್ಷಗಳ ಬಳಿಕ ಶೋಭಿತಾ ಜೊತೆಗೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಮದುವೆಗೆ ಕೇವಲ ಕುಟುಂಬಸ್ಥರು, ಆಪ್ತರನ್ನು ಮಾತ್ರ ಆಹ್ವಾನ ಮಾಡಲಾಗಿದೆ. ಈಗಾಗಲೇ ವಿವಾಹ ಪೂರ್ವ ಕಾರ್ಯಕ್ರಮಗಳು ಕೂಡ ಆರಂಭವಾಗಿವೆ. ಶಾಸ್ತ್ರ, ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಎರಡು ಮನೆಯಲ್ಲೂ ಮದುವೆ ಶಾಸ್ತ್ರಗಳು ಆರಂಭವಾಗಿವೆ.
ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಹೇಗೆ ನಡೆಯಿತು ಎಂಬ ವಿಡಿಯೋ ಯಾರಿಗೂ ಮೊದಲೇ ಸಿಗುವುದೇ ಇಲ್ಲ. ಬದಲಿಗೆ ನೆಟ್ ಫ್ಲಿಕ್ಸ್ ಅದನ್ನು ಪ್ರಸಾರ ಮಾಡಲಿದೆ. ಅಷ್ಟೇ ಅಲ್ಲ ಆ ವಿಡಿಯೋಗಳನ್ನ ನೋಡಬೇಕು ಅಂದ್ರೆ ನೋಡುಗರು ಕೂಡ ಹಣ ಪಾವತಿಸಬೇಕಾಗಿದೆ. ಈ ರೀತಿ ಸೆಲೆಬ್ರೆಟಿಗಳು ತಮ್ಮ ಮದುವೆಯನ್ನು ಒಟಿಟಿ ಚಾನೆಲ್ ಗಳಿಗೆ ಮಾರಾಟ ಮಾಡಿಕೊಳ್ಳುವುದು ಕಾಮನ್ ಆಗಿ ಬಿಟ್ಟಿದೆ. ಈ ಹಿಂದೆ ಕಾಲಿವುಡ್ ನಟಿ ನಯನತಾರಾ ಹಾಗೂ ವಿಘ್ನೇಶ್ ಸೇರಿದಂತೆ ಹಲವರು ತಮ್ಮ ಮದುವೆ ವಿಡಿಯೋಗಳನ್ನ ಮಾರಾಟ ಮಾಡಿಕೊಂಡಿದ್ದಾರೆ. ಈಗ ಅಕ್ಕಿನೇನಿ ಕುಟುಂಬದ ಈ ಅದ್ದೂರಿ ಮದುವೆ ವಿಡಿಯೋ ಕೂಡ ಸೇಲ್ ಆಗಿದೆ ಎನ್ನಲಾಗಿದೆ.