ಕೇರಳದ ಗುಡ್ಡ ಕುಸಿತ | ಮೈಸೂರಿನ ಕುಟುಂಬ 11 ಮಂದಿ ನಾಪತ್ತೆ..!
ಬೆಂಗಳೂರು: ಕೇರಳ ಗುಡ್ಡ ಕುಸಿತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಈಗಾಗಲೇ 156ಕ್ಕೂ ಅಧಿಕ ಜನರ ಸಾವಾಗಿದೆ. ದಿನೇ ದಿನೇ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ. ಕಾರ್ಯಾಚರಣೆಯೂ ನಡೆಯುತ್ತಿದೆ. ಮುಂಡಕೈ ಗುಡ್ಡ ಕುಸಿತದಲ್ಲಿ ಇದೀಗ ಕರ್ನಾಟಕದ ಕುಟುಂಬವೊಂದು ನಾಪತ್ತೆಯಾಗಿದೆ.
ಸುಮಾರು 45 ವರ್ಷದಿಂದ ಮುಂಡಕೈನಲ್ಲಿ ವಾಸ ಮಾಡುತ್ತಿದ್ದರು. ಒಂದೇ ಕುಟುಂಬದ 11 ಮಂದಿ ನಾಪತ್ತೆಯಾಗಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಒಂದೇ ಕುಟುಂಬದವರು ನಾಪತ್ತೆಯಾಗಿದ್ದಾರೆ.
ಮುಂಡಕೈನಲ್ಲಿ ಪ್ರತಿ ಮನೆಯೂ ಕೊಚ್ಚಿ ಹೋಗಿದೆ. ಮನೆಯ ಮಣ್ಣಿನಿಂದ ಜನ ಕೊಚ್ಚಿಹೋಗಿದ್ದಾರೆ. ಈಗಾಗಲೇ ಕಾರ್ಯಾಚರಣೆ ನಡೆಯುತ್ತಿದೆ. ಮಣ್ಣಿನಲ್ಲಿ ಹೂತುಹೋದ ಜನರನ್ನು ರಕ್ಷಣೆ ಮಾಡುವ ಕೆಲಸ ಆಗುತ್ತಿದೆ. ಆದರೆ ರಕ್ಷಣೆ ಮಾಡುವುದಕ್ಕೆಂದು ಬಂದಂತ ಜೆಸಿಬಿ ಕೂಡ ಮಣ್ಣಿನಲ್ಲಿ ಹೂತುಕೊಂಡಿದೆ. ಬೇರೆಡೆಯಿಂದ ಕಾರುಗಳು ಕೂಡ ಕೊಚ್ಚಿಕೊಂಡು ಬರುತ್ತಿವೆ.
ಸಾವು ನೋವುಗಳು ಹೆಚ್ಚಾಗುತ್ತಿವೆ. 500ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ಇನ್ನು ಕೂಡ ಪತ್ತೆಯಾಗುತ್ತಿಲ್ಲ. ಕುಸಿದಿರುವ ಮನೆಗಳಲ್ಲಿ ಒಳಗೆ ಯಾರಾದರೂ ಸಿಲುಕಿದ್ದಾರಾ ಎಂಬುದನ್ನು ಕಾರ್ಯಾಚರಣೆ ಹುಡುಕುತ್ತಿದ್ದಾರೆ. ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಯುತ್ತಿದ್ದು, ಕಣ್ಣಿಗೆ ಕಂಡವರನ್ನು ಹೆಲಿಕಾಪ್ಟರ್ ಮೂಲಕವೇ ರಕ್ಷಣೆ ಮಾಡುತ್ತಿದ್ದಾರೆ.
ಚೂರಮಲ, ಮುಂಡಕೈ ಸೇರಿದಂತೆ ಹಲವೆಡೆ ಭಾರಿ ಅವಾಂತರ ಸೃಷ್ಟಿಯಾಗಿದೆ. ಕೆಸರಿನ ಒಳಗೆ ಸಾಕಷ್ಟು ಮಂದಿ ಸಿಲುಕಿರುವ ಅನುಮಾನ ವ್ಯಕ್ತವಾಗಿದೆ. ಮಣ್ಣಿನಲ್ಲಿಯೇ ಪ್ರಾಣ ಕಳೆದುಕೊಳ್ಳುತ್ತಿರುವವರೇ ಹೆಚ್ಚು. ಈಗ ಮೈಸೂರು ಮೂಲದ ಕುಟುಂಬವೂ ನಾಪತ್ತೆಯಾಗಿದೆ. ಕಳೆದ ನಾಲ್ಕು ದಶಕಗಳಿಂದಾನೂ ಅಲ್ಲಿಯೇ ಜೀವನ ಕಟ್ಟಿಕೊಂಡಿತ್ತು. ಈಗ ದಿಢೋರನೇ ನಾಪತ್ತೆಯಾಗಿರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಪ್ರವಾಹಕ್ಕೆ ಸಿಲುಕಿರುವ ಭಯ ಕಾಡುತ್ತಿದೆ.