ನನ್ನ ಪಾತ್ರವೇ ಇಲ್ಲ ಸಿದ್ದರಾಮಯ್ಯರ ಪಾತ್ರ ಹೇಗೆ ಬರುತ್ತದೆ..? ತನಿಖೆಯ ಅನುಭವ ಹಂಚಿಕೊಂಡ ನಾಗೇಂದ್ರ..!
ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರು ಜೈಲು ಸೇರಿದ್ದರು. ನಿನ್ನೆಯಷ್ಟೇ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಮಾತನಾಡಿದ್ದು, ತನಿಖೆಯ ವೇಳೆ ಆಗಿದ್ದನ್ನು ನೆನೆದಿದ್ದಾರೆ. ಷರತ್ತು ಬದ್ಧ ಜಾಮೀನು ಪಡೆದು ಈಗ ಹೊರ ಬಂದಿದ್ದಾರೆ.
ನಾಗೇಂದ್ರ ಅವರು ಮಾತನಾಡಿ, ಇಡಿ ಅಧಿಕಾರಿಗಳು ಸಂಚು ರೂಪಿಸಿ ನನ್ನನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳುವಂತೆ ಒತ್ತಾಯಿಸಿದರು. ಕಿರುಕುಳವನ್ನು ನೀಡಿದರು. ಅವರನ್ನು ಬಂಧನ ಮಾಡುವ ಸಲುವಾಗಿ ಈ ರೀತಿ ಮಾಡಲಾಗಿದೆ. ಅದರಲ್ಲಿ ನನ್ನ ಪಾತ್ರವೇ ಇಲ್ಲ. ಸಿದ್ದರಾಮಯ್ಯ ಅವರ ಪಾತ್ರ ಹೇಗೆ ಬರುತ್ತದೆ. ಮುಂದಿನ ದಿನಗಳಲ್ಲಿ ಈ ಕುರಿತು ಕಾನೂನು ಹೋರಾಟ ಮಾಡುತ್ತೇನೆ. ನ್ಯಾಯಾಲಯಕ್ಕೆ ನಾನು ಧನ್ಯವಾದ ಹೇಳುತ್ತೇನೆ.
ನ್ಯಾಯಾಲಯ ಸದ್ಯ ನನಗೆ ಜಾಮೀನು ಮಂಜೂರು ಮಾಡಿದೆ. ಇದಕ್ಕೆ ನಾನು ಧನ್ಯ. ಸಚಿವ ಸ್ಥಾನ ನೀಡುವುದು ಬಿಡುವುದು ಕಾಂಗ್ರೆಸ್ ಹೈಕಮಾಂಡ್ ಗೆ ಬಿಟ್ಟ ಬಿಟ್ಟ ವಿಚಾರ ಎಂದಿದ್ದಾರೆ. ಇನ್ನು ವಾಲ್ಮೀಕಿ ಹಗರಣ ಬೆಳಕಿಗೆ ಬಂದಾಗ ಇಡೀ ರಾಜ್ಯವೇ ಶಾಕ್ ಆಗಿತ್ತು. ನೂರಾರು ಕೋಟಿ ಹಗರಣ ಇದಾಗಿತ್ತು. ಇದರಲ್ಲಿ ಸಚಿವರಾಗಿದ್ದ ನಾಗೇಂದ್ರ ಅವರ ಪಾತ್ರವೂ ಇದೆ ಎನ್ನಲಾಗಿತ್ತು. ಆಗ ತಮ್ಮ ಸಚಿವ ಸ್ಥಾನಕ್ಕೆ ನಾಗೇಂದ್ರ ಅವರು ರಾಜೀನಾಮೆಯನ್ನು ನೀಡಿದ್ದರು. ಬಳಿಕ ರಾಜ್ಯ ಸರ್ಕಾರ ಲೋಕಾಯುಕ್ತರನ್ನು ನೇಮಿಸಲಾಗಿತ್ತು. ಬಳಿಕ ಇಡಿ ಕೂಡ ಇದರ ಮಧ್ಯ ಪ್ರವೇಶಿಸಿ, ತನಿಖೆ ಶುರು ಮಾಡಿತ್ತು. ಇಬ್ಬರು ಕೂಡ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಸದ್ಯ ನಾಗೇಂದ್ರ ಅವರು ಜಾಮೀನು ಪಡೆದು ಹೊರ ಬಂದಿದ್ದಾರೆ.