For the best experience, open
https://m.suddione.com
on your mobile browser.
Advertisement

ಮುತ್ತಪ್ಪ ರೈ ಆಸ್ತಿ ವಿವಾದ ಇತ್ಯರ್ಥ : ಎರಡನೇ ಪತ್ನಿಗೆ 100 ಕೋಟಿ ಆಸ್ತಿ

01:46 PM Oct 18, 2024 IST | suddionenews
ಮುತ್ತಪ್ಪ ರೈ ಆಸ್ತಿ ವಿವಾದ ಇತ್ಯರ್ಥ   ಎರಡನೇ ಪತ್ನಿಗೆ 100 ಕೋಟಿ ಆಸ್ತಿ
Advertisement

ಬೆಂಗಳೂರು :ಮಾಜಿ ಡಾನ್ ಮುತ್ತಪ್ಪ ರೈ ಸಾವನ್ನಪ್ಪಿದ ಬಳಿಕ ಅವರ ಆಸ್ತಿ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಅದರಲ್ಲೂ ಸಾವಿರಾರು ಕೋಟಿ ಆಸ್ತಿಯನ್ನು ಮುತ್ತಪ್ಪ ರೈ ಸಾಯುವುದಕ್ಕೂ ಮುನ್ನ ಮನೆಕೆಲಸದವರಿಗೂ ಸೇರಿ ಬರೆದಿದ್ದರು. 2019ರಲ್ಲಿ ವಕೀಲ ನಾರಾಯಣಸ್ವಾಮಿಯವರನ್ನು ವಿಲ್ ಎಕ್ಸಿಕ್ಯೂಟರ್ ಆಗಿ ನೇಮಿಸಿದ್ದರು. ಹಾಗೇ ಗೀತಾ ರಾಜ್ ಎಂಬುವವರಿಂದ ವಿಲ್ ಬರೆಸಲಾಗಿತ್ತು. 41 ಪುಟಗಳ ವಿಲ್ ಇದಾಗಿತ್ತು. ಇದರಲ್ಲಿ ಎರಡನೇ ಹೆಂಡತಿಗೂ ಆಸ್ತಿಯ ಬಗ್ಗೆ ಉಲ್ಲೇಖ ಮಾಡಲಾಗಿತ್ತು. ಇದೀಗ ಕೋರ್ಟ್ ಮುಖಾಂತರ ಮುತ್ತಪ್ಪ ರೈ ಎರಡನೇ ಹೆಂಡತಿ ಅನುರಾಧ ರೈ ಅವರಿಗೆ ಆಸ್ತಿ ಹಂಚಿಕೆಯಾಗಿದೆ.

Advertisement

ಮುತ್ತಪ್ಪ ರೈ ಮಕ್ಕಳಾದ ರಿಕ್ಕಿ ರೈ, ರಾಕಿ ರೈ ಅವರಿಂದ ಅನುರಾಧ ರೈ ಅವರಿಗೆ ಆಸ್ತಿ ಸಿಕ್ಕಿದೆ. ಮುತ್ತಪ್ಪ ರೈ ನಿಧನರಾದ ಬಳಿಕ ಅಂದರೆ 202ರಲ್ಲಿ ಆಸ್ತಿಗಾಗಿ ಅನುರಾಧ ರೈ ಕೋರ್ಟ್ ನಲ್ಲಿ ಧಾವೆ ಹೂಡಿದ್ದರು. ಕಾಂಪ್ರೂಮೈಸ್ ಪಿಟೀಷನ್ ಮೂಲಕ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ರೈ ಅವರಿಗೆ ಆಸ್ತಿ ನೀಡಲಾಗಿದೆ.

ರಿಕ್ಕಿ ರೈ ಹಾಗೂ ರಾಕಿ ರೈ ಹಾಗೂ ಅನುರಾಧ ರೈ ಮೂವರ ನಡುವೆ ಕಾಂಪ್ರೂಮೈಸ್ ಮೂಲಕ ಕೊಡೊಸಿರುವ ಆಸ್ತಿ ಸುಮಾರು 100 ಕೋಟಿ ಬೆಲೆ ಬಾಳುತ್ತೆ ಎನ್ನಲಾಗಿದೆ. ಏಳು ಕೋಟಿ ಹಣ, ಮಂಡ್ಯದ ಪಾಂಡವಪುರದಲ್ಲಿ 22 ಎಕರೆ ಜಮೀನು, ಮೈಸೂರಿನಲ್ಲಿ 4,800 ಚದುರಡಿ ನಿವೇಶನ ಹಾಗೂ ನಿವೇಶನದಲ್ಲಿರುವ ಮನೆ. ನಂದಿಬೆಟ್ಟದ ಬಳಿ ಇರುವ ಕೆಂಪತಿಮ್ಮನಹಳ್ಳಿ ಬಳಿ ಇರುವ ಐದೂವರೆ ಎಕರೆ ಜಮೀನನ್ನು ಅನುರಾಧ ರೈ ಅವರಿಗೆ ನೀಡಲಾಗಿದೆ.

Advertisement

Tags :
Advertisement