Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಎಸ್ಐಟಿಗೆ ಮುನಿರತ್ನ ಕೇಸ್ : ಒಕ್ಕಲಿಗರ ಸಮುದಾಯಕ್ಕೆ ಮಣಿದ ರಾಜ್ಯ ಸರ್ಕಾರ..!

08:57 PM Sep 21, 2024 IST | suddionenews
Advertisement

ಬೆಂಗಳೂರು: ಆರ್ ಆರ್ ನಗರದ ಶಾಸಕ ಮುನಿರತ್ನ ಜಾತಿ ನಿಂದನೆ ಹಾಗೂ ವಂಚನೆ ಕೇಸಲ್ಲಿ ಜಾಮೀನು ಪಡೆದಿದ್ದರು. ಆದರೆ ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಅರೆಸ್ಟ್ ಆದಂತ ಮುನಿರತ್ನ ವಿರುದ್ಧ ಕೆಲವು ಗಂಭೀರ ಆರೋಪಗಳು ಕೇಳಿ ಬಂದಿವೆ. ಇದೀಗ ಸಿಎಂ ಸಿದ್ದರಾಮಯ್ಯ ಸರ್ಕಾರ ಮುನಿರತ್ನ ಕೇಸನ್ನು ಎಸ್ಐಟಿಗೆ ವಹಿಸಿದೆ.

Advertisement

ಇತ್ತಿಚೆಗಷ್ಟೇ ಒಕ್ಕಲಿಗರ ಸಮುದಾಯದ ಮಂದಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಮುನಿರಯ್ನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಸರ್ಕಾರ ಒಕ್ಕಲಿಗರ ಮನವಿಗೆ ಸ್ಪಂದಿಸಿದ್ದು, ಎಸ್ಐಟಿ ತನಿಖೆಗೆ ವಹಿಸಿದೆ.

ಅತ್ಯಾಚಾರ ಪ್ರಕರಣ ಮಾತ್ರವಲ್ಲ ಮುನಿರತ್ನ ವಿರುದ್ಧ ಗಂಭೀರವಾದಂತ ಪ್ರಕರಣಗಳು ಕೇಳಿ ಬರುತ್ತಿವೆ. ಹೀಗಾಗಿ ಅವರ ವಿರುದ್ಧ ತನಿಖೆ ನಡೆಸಲು ಎಸ್ಐಟಿ ತಂಡ ರಚನೆ ಮಾಡಿದೆ. ವಿಶೇಷ ತಂಡ ಇದೀಗ ಮುನಿರತ್ನ ಮೇಲಿನ ತನಿಖೆಯನ್ನು ಚುರುಕುಗೊಳಿಸಲಿದೆ. ಹಿರಿಯ ಪೋಲಿಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಸಿಐಡಿ ಅಪರ ಪೋಲಿಸ್ ಮಹಾನಿರ್ದೇಶಕ ಬಿ.ಕೆ ಸಿಂಗ್ ನೇತೃತ್ವದಲ್ಲಿ ತನಿಖಾ ತಂಡ ರಚನೆಯಾಗಿದೆ. ತಂಡದಲ್ಲಿ ಸದಸ್ಯರಾಗಿ ಕೇಂದ್ರ ವಲಯ ಪೋಲಿಸ್ ಮಹಾನಿರೀಕ್ಷಕ ಲಭೂರಾಮ್, ರೈಲ್ವೇಸ್ ಪೋಲಿಸ್ ಅಧೀಕ್ಷಕಿ ಸೌಮ್ಯಲತಾ ಹಾಗೂ ಪೋಲಿಸ್ ಅಧೀಕ್ಷಕ ಸೈಮನ್ ಅವರು ಇದ್ದಾರೆ. ನಿನ್ನೆಯಷ್ಟೇ ಕಾಂಗ್ರೆಸ್​​ನ ಒಕ್ಕಲಿಗ ನಾಯಕರು ಎಸ್ಐಟಿ ರಚಿಸುವಂತೆ ಸಿಎಂಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಈಗ ಎಸ್​​ಐಟಿ ರಚನೆ ಮಾಡಲಾಗಿದೆ. ಈಗಾಗಲೇ ಮುನಿರತ್ನ ವಿರುದ್ಧ ದೂರುಗಳು ದಾಖಲಾಗಿವೆ. ಜೊತೆಗೆ ಹಳೆ ಕೇಸುಗಳು ರಿಓಪನ್ ಆಗಲಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

Advertisement
Tags :
bengaluruchitradurgaMuniratna's caseOkkaliga communitySITstate governmentsuddionesuddione newsಎಸ್ಐಟಿಒಕ್ಕಲಿಗರ ಸಮುದಾಯಚಿತ್ರದುರ್ಗಬೆಂಗಳೂರುಮುನಿರತ್ನ ಕೇಸ್ರಾಜ್ಯ ಸರ್ಕಾರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article