Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮುನಿರತ್ನಗೆ 14 ದಿನಗಳ ನ್ಯಾಯಾಂಗ ಬಂಧನ : ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್

05:04 PM Sep 17, 2024 IST | suddionenews
Advertisement

ಬೆಂಗಳೂರು: ಜಾತಿ ನಿಂದನೆ ಕೇಸಲ್ಲಿ ಶಾಸಕ ಮುನಿರತ್ನ ಇದೀಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇತ್ತಿಚೆಗೆ ಕಾಂಟ್ರಾಕ್ಟರ್ ಒಬ್ಬರ ಜೊತೆಗೆ ಮಾತನಾಡುವಾಗ ದಲಿತರ ಬಗ್ಗೆ ಮಾತನಾಡುದ್ದಲ್ಲದೆ, ಇನ್ನೊಬ್ಬರ ಹೆಂಡತಿಯ ಬಗ್ಗೆಯೂ ಕೀಳು ಮಟ್ಟದಲ್ಲಿ ಮಾತನಾಡಿದ್ದರು. ಈ ಆಡಿಯೋ ವೈರಲ್ ಆಗುತ್ತಿದ್ದಂತೆ, ಆಂದ್ರ ಕಡೆಗೆ ಹೊರಟಿದ್ದ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದರು.‌ ಪೊಲೀಸ್ ಕಸ್ಟಡಿಯಲ್ಲಿದ್ದ ಮುನಿರತ್ನ ಅವರ ಕಸ್ಟಡಿ ಇಂದಿಗೆ ಅಂತ್ಯವಾಗಿತ್ತು.

Advertisement

ಈ ಹಿನ್ನೆಲೆ ಮುನಿರತ್ನ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ವುಚಾರಣೆ ನಡೆಸಿದ ಕೋರ್ಟ್ ಮುನಿರತ್ನ ಅವರಿಗೆ ಪರಪ್ಪನ ಅಗ್ರಹಾರದ ದಾರಿ ತೋರಿಸಿದೆ. ಆದರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಕೀಸರು ರಿಮ್ಯಾಂಡ್ ಅರ್ಜಿಯಲ್ಲಿ ಮತ್ತೆ ಕಸ್ಟಡಿಗೇನು ಕೇಳಿರಲಿಲ್ಲ.

ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದಂತೆ, ಮುನಿರತ್ನಂ ಪರ ವಕೀಲರು ಕೋರ್ಟ್ ಗೆ ಹಾಜರಾದರು. ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಕೋರ್ಟ್ ಮುಂದೆ ವಾದ ಮಾಡಿದರು‌. ಆರೋಪಿಗೆ ನೋಟೀಸ್ ನೀಡುವ ಸಮಯದಲ್ಲಿಯೇ ಬಂಧಿಸಲಾಗಿದೆ. ಹೀಗಾಗಿ ಮಧ್ಯಂತರ ಜಾಮೀನು ನೀಡುವಂತೆ ಮುನಿರತ್ನ ಪರ ವಕೀಲರು, ಕೋರ್ಟ್ ಮುಂದೆ ಮನವಿ ಮಾಡಿದರು. ಆದರೆ ಕೋರ್ಟ್ ನಲ್ಲಿ ಸರ್ಕಾರಿ ಪರ ವಕೀಲರು ಮುನಿರತ್ನ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಮನವಿ ಪುರಸ್ಕರಿಸಿದ ಕೋರ್ಟ್ ನಾಳೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದೆ. ಜೊತೆಗೆ ಮುನಿರತ್ನ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ, ವಿಚಾರಣೆಯನ್ನು ಮುಂದೂಡಲಾಗಿದೆ. ಈ ಹಿನ್ನೆಲೆ ಸದ್ಯ ಮುನಿರತ್ನ ಅವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

Advertisement

Advertisement
Tags :
bengaluruchitradurgajudicial custodyMuniratnaParappa Agraharasuddionesuddione newsಚಿತ್ರದುರ್ಗನ್ಯಾಯಾಂಗ ಬಂಧನಪರಪ್ಪನ ಅಗ್ರಹಾರಬೆಂಗಳೂರುಮುನಿರತ್ನಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article