ಮೂಡಾ ಹಗರಣ: ಕೋರ್ಟ್ ನಿಂದ ಇಂದು ಆದೇಶ : ದೆಹಲಿಯಲ್ಲಿ ಡಿಕೆಶಿ ಮಹತ್ವದ ಸಭೆ..!
ಬೆಂಗಳೂರು: ಮೂಡಾ ಹಗರಣ ಸಾಕಷ್ಟು ಸದ್ದು ಮಾಡಿದೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿಯೇ ಮೈಸೂರು ತನಕ ಪಾದಯಾತ್ರೆ ಕೂಡ ಮಾಡಿದ್ದರು. ಇದೀಗ ಮೂಡಾ ಹಗರಣದ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾಗಿದ್ದ ಖಾಸಗಿ ದೂರಿನ ವಿಚಾರಣೆ ಇಂದು ಕೋರ್ಟ್ ನಲ್ಲಿ ನಡೆಯಲಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈ ವಿಚಾರಣೆ ನಡೆಯಲಿದೆ. ಕೋರ್ಟ್ ತೀರ್ಮಾನವನ್ನು ಆಧರಿಸಿಯೇ ಸಿಎಂ ಸಿದ್ದರಾಮಯ್ಯ ಅವರು ವುಚಾರಣೆ ಎದುರಿಸಲಿದ್ದಾರೆಯೇ ಇಲ್ಲವೇ ಎಂಬುದು ತಿಳಿಯಲಿದೆ. ಜಿತೆಗೆ ರಾಜ್ಯಪಾಲರು ಕೂಡ ತಮ್ಮ ಮುಂದಿನ ನಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಇನ್ನು ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ನಾಯಕರಿಂದ ಬುಲಾವ್ ಬಂದಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಂದ ಕರೆ ಬಂದಿದ್ದು, ದೆಹಲಿಗೆ ಹೋಗಿರುವ ಡಿಸಿಎಂ ಡಿಕೆ ಶಿವಕುಮಾರ್, ಇಂದು ಎಲ್ಲಾ ರಾಜ್ಯಗಳ ಪಿಸಿಸಿ ಅಧ್ಯಕ್ಷರುಗಳು ಹಾಗುಹ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಈ ಸಭೆಯಲ್ಲಿ ದೇಶಾದ್ಯಂತ ಪಕ್ಷ ಸಂಘಟನೆ ಕುರಿತ, ಎಐಸಿಸಿ ಪುನರ್ ರಚನೆ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆಮ ಹಾಗೇ ರಾಜ್ಯದ ಯಾವ ನಾಯಕರನ್ನು ಎಐಸಿಸಿ ಪರಿಗಣಿಸಬೇಕು ಎಂಬ ಅಭಿಪ್ರಾಯ ಸಂಗ್ರಹ, ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸುವ ರೂಪು ರೇಷೆಗಳು, ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿದರೆ ಹೇಗೆ ಎದುರಿಸಬೇಕು, ಜಾತಿ ಜನಗಣತಿ, ಒಳ ಮೀಸಲಾತಿ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಲಿವೆ. ಈ ಸಭೆಯಲ್ಲಿ ಕೆಪಿಸಿಸಿಯ ನೂತನ ಸಾರಥಿಯ ಬಗ್ಗೆ ಚರ್ಚೆಯಾಗಲಿದೆ. ಈಗಾಗಲೇ ಈಸದ್ವರ್ ಖಂಡ್ರೆ, ಬಿಕೆ ಹರಿಪ್ರಸಾದ್, ಸತೀಶ್ ಜಾರಕಿಹೊಳಿ, ಶರಣು ಪ್ರಕಾಶ್ ಪಾಟೀಲ್ ಹೆಸರು ಮುನ್ನೆಲೆಯಲ್ಲಿ ನಿಂತಿದೆ.