For the best experience, open
https://m.suddione.com
on your mobile browser.
Advertisement

ಮೂಡಾ ಹಗರಣ: 50:50 ಸೈಟ್ ಪಡೆದವರು 212 ಮಂದಿ : ಯಾವ ವರ್ಷದಲ್ಲಿ ನಡೆದ ಹಗರಣ ಗೊತ್ತಾ..?

02:41 PM Nov 09, 2024 IST | suddionenews
ಮೂಡಾ ಹಗರಣ  50 50 ಸೈಟ್ ಪಡೆದವರು 212 ಮಂದಿ   ಯಾವ ವರ್ಷದಲ್ಲಿ ನಡೆದ ಹಗರಣ ಗೊತ್ತಾ
Advertisement

ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಒಂದೊಂದು ವಿಚಾರ ಮಾಹಿತಿ ಬಹಿರಂಗವಾಗುತ್ತಿದೆ. ಇದೀಗ ಮೂಡಾ ಹಗರಣ ಸಂಬಂಧ ಈಗ ಮತ್ತೊಂದು ಸ್ಪೋಟಕ ವಿಚಾರ ಬಯಲಿಗೆ ಬಂದಿದೆ. 50:50 ಅನುಪಾತದಡಿಯಲ್ಲಿ ಹಂಚಿಕೆಯಾದ ಸೈಟ್ ಗಳ ಮಾಹಿತಿ ಬಹಿರಂಗವಾಗಿದೆ. 36 ಜನರಿಗೆ 212 ಸೈಟ್ ಗಳು ಹಂಚಿಕೆಯಾಗಿದೆ. 2020-2023ರ ಅವಧಿಯಲ್ಲಿ ಆಯುಕ್ತರ ನಿರ್ಧಾರದಂತೆ ಸೈಟ್ ಹಂಚಿಕೆಯಾಗಿದೆ. ಒಬ್ಬೊಬ್ಬರ ಹೆಸರಿನಲ್ಲೂ 20, 10 ಸೈಟ್ ಗಳು ಹಂಚಿಕೆಯಾಗಿರುವುದು ಶಾಕಿಂಗ್ ಸುದ್ದಿಯಾಗಿದೆ. ಯಾರಿಗೆಲ್ಲಾ ಸೈಟ್ ಗಳು ಹಂಚಿಕೆಯಾಗಿವೆ..? ಎಷ್ಟೆಷ್ಟು ಹಂಚಿಕೆಯಾಗಿವೆ ಎಂಬ ಕಂಪ್ಲೀಟ್ ಡಿಟೈಲ್ ಇಲ್ಲಿದೆ ನೋಡಿ.

Advertisement

ಅಬ್ದುಲ್ ವಾಜೀದ್ ಎಂಬ ವ್ಯಕ್ತಿಯ ಒಬ್ಬನ ಹೆಸರಿನಲ್ಲಿಯೇ 26 ಸೈಟ್ ಹಂಚಿಕೆಯಾಗಿದೆ. ಸೈಯದ್ ಯೂಸೂಫ್ ಎಂಬ ಇನ್ನೊಬ್ಬ ವ್ಯಕ್ತಿಗೆ 21 ಸೈಟ್ ನೀಡಲಾಗಿದೆ. ಮಲ್ಲಪ್ಪ ಎಂಬಾತನ ಹೆಸರಲ್ಲಿ 19 ಸೈಟ್, ದೇವಮ್ಮ ಎಂಬ ಮಹಿಳೆಯ ಹೆಸರಲ್ಲಿ 16 ಸೈಟ್, ಪಿ.ಮಹದೇವ ಹಾಗೂ ಗೀತಾ ಎಂಬುವವರ ಹೆಸರಲ್ಲಿ 12 ಸೈಟ್ ಗಳು ಇದಾವೆ. ಸುರೇಶಮ್ಮ ಎಂಬುವವರ ಹೆಸರಲ್ಲಿ 11 ಸೈಟ್ ಹಂಚಿಕೆಯಾಗಿದೆ. ಆಲನಹಳ್ಳಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಿಗೆ 13 ಸೈಟ್ ಹಂಚಿಕೆಯಾಗಿದೆ. ಕ್ಯಾಥಡ್ರಲ್ ಸೊಸೈಟಿ ಕಾರ್ಯದರ್ಶಿ ಅಲಮೇಡಾಗೆ 6 ಸೈಟ್,

Advertisement

50:50 ಅನುಪಾತದಲ್ಲಿ ನಿವೇಶನ ಪಡೆಯುವುದು ಕಾನೂನು ಬಾಹಿರ ಎಂಬ ಕಾರಣಕ್ಕೆ ಈಗಾಗಲೇ ಸಿದ್ದರಾಮಯ್ಯ ಅವರ ಧರ್ಮಪತ್ನಿ ಅವರು ಸೈಟ್ ಗಳನ್ನು ವಾಪಾಸ್ ಮಾಡಿದ್ದಾರೆ. ಈಗ 50:50 ಅನುಪಾತದಲ್ಲಿ ತೆಗೆದುಕೊಂಡಿರುವವರು ವಾಪಾಸ್ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Tags :
Advertisement