Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮೂಡಾ ದಾಖಲೆಗಳನ್ನು ಹೆಲಿಕಾಪ್ಟರ್ ನಲ್ಲಿ ಸಾಗಾಟ ಮಾಡಿದರಾ..? ಬಿಜೆಪಿ-ಜೆಡಿಎಸ್ ನಾಯಕರ ಆರೋಪಗಳೇನು..?

12:11 PM Oct 19, 2024 IST | suddionenews
Advertisement

 

Advertisement

ಬೆಂಗಳೂರು: ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಡಿ ತನಿಖೆ ಚುರುಕುಗೊಂಡಿದೆ. ಇದರ ನಡುವೆ ವಿಧಾನ ಪರಿಷತ್ ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದಾರೆ. ಮೂಡಾಗೆ ಸಂಬಂಧಿಸಿದ ದಾಖಲೆಗಳು ಹೆಲಿಕಾಪ್ಟರ್ ನಲ್ಲಿ ಹೋದವಾ ಎಂಬುದನ್ನು ತನಿಖೆ ನಡೆಸಿ, ಭೈರತಿ ಸುರೇಶ್ ಅವರನ್ನು ಬಂಧಿಸಿ ಎಂದಿದ್ದಾರೆ.

ಮೂರು ಬಾರಿ ಮೂಡಾ ಕಡತಗಳನ್ನು ಕೇಳಿದ್ದರು ಅಧಿಕಾರಿಗಳು ಸ್ಪಂದಿಸದಿರುವುದೇ ದಾಳಿಗೆ ಕಾರಣವಾಗಿದೆ. ಹಗರಣದಲ್ಲಿ ಸತ್ಯಾಂಶ ಹೊರಬರುವುದು ಸರ್ಕಾರಕ್ಕೆ ಬೇಕಿಲ್ಲ. ಆ ದಾಖಲೆಗಳೆಲ್ಲಾ ಬೆಂಗಳೂರಿನಲ್ಲಿ ಎಲ್ಲಿವೆ. ಹೆಲಿಕಾಪ್ಟರ್ ನಲ್ಲಿ ಮೂಡಾ ಕಡತಗಳನ್ನು ಹೊತ್ತೊಯ್ದ ಸಚಿವ ಭೈರತಿ ಸುರೇಶ್ ಹಾಗೂ ಸಿಎಂ ಅವರನ್ನು ಇಡಿ ಅಧಿಕಾರಿಗಳು ಬಂಧಿಸಲಿ ಬಳಿಕ ಎಲ್ಲಾ ವಿಚಾರಗಳು ಹೊರಗೆ ಬರಲಿವೆ ಎಂದಿದ್ದಾರೆ.

Advertisement

ಇನ್ನು ಮೂಡಾದಲ್ಲಿ ಬರೋಬ್ಬರಿ 5 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಅರಕಲಗೂಡು ಶಾಸಕ ಎ ಮಂಜು ಶಾಕಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಮೂಡಾ ಹಗರಣ ಸರಿಯಾಗಿ ತನಿಖೆಯಾಗಬೇಕು, ಮುಚ್ಚಿಟ್ಟ ವಿಚಾರಗಳೆಲ್ಲಾ ಹೊರಗೆ ಬರಬೇಕು. ಆಗ ಮಾತ್ರ ನ್ಯಾಯ ಸಿಗಲಿದೆ. ಸದ್ಯಕ್ಕೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಕೊಟ್ಟಿದ್ದಾರೆ, ಎಫ್ಐಆರ್ ಆಗಿದೆ ರಾಜೀನಾಮೆ ಕೊಡಬೇಕು ಅಲ್ವಾ ಎಂದು ಪ್ರಶ್ನಿಸಿದ್ದಾರೆ. ನಾನು ಲಾಯರ್ ನಂದು ಒಂದು ಕಾನೂನಿದೆ ಎನ್ನುತ್ತಿದ್ದವರು ಸಿದ್ದರಾಮಯ್ಯ ಅವರು. ಸಿದ್ದರಾಮಯ್ಯ ಅವರು ಮೊದಲು ರಾಜೀನಾಮೆ ಕೊಡಲಿ ತಪ್ಪಿಲ್ಲ ಎಂದು ಪದರೂವ್ ಆದರೆ ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಎ ಮಂಜು ಆಗ್ರಹಿಸಿದ್ದಾರೆ.

Advertisement
Tags :
allegationsbengaluruBjpchitradurgadocumentshelicopterjdsleadersmudasuddionesuddione newsಆರೋಪಚಿತ್ರದುರ್ಗಜೆಡಿಎಸ್ದಾಖಲೆನಾಯಕರುಬಿಜೆಪಿಬೆಂಗಳೂರುಮೂಡಾಸಾಗಾಟಸುದ್ದಿಒನ್ಸುದ್ದಿಒನ್ ನ್ಯೂಸ್ಹೆಲಿಕಾಪ್ಟರ್
Advertisement
Next Article