For the best experience, open
https://m.suddione.com
on your mobile browser.
Advertisement

Motivation : ಜೀವನವನ್ನು ಸಂತೋಷದಿಂದ ಕಳೆಯುವುದು ಹೇಗೆ?

05:57 AM Mar 17, 2024 IST | suddionenews
motivation   ಜೀವನವನ್ನು ಸಂತೋಷದಿಂದ ಕಳೆಯುವುದು ಹೇಗೆ
Advertisement

ಸುದ್ದಿಒನ್ : ನಿಮ್ಮ ಜೀವನವನ್ನು ನೀವೇ ಪ್ರೀತಿಸಬೇಕು. ಬೇರೆ ಯಾರೂ ಬಂದು ನಿಮ್ಮನ್ನು ಪ್ರೀತಿಸುವುದಿಲ್ಲ.  ಜೀವನವನ್ನು ಪ್ರೀತಿಸುವ ವ್ಯಕ್ತಿಯು ತುಂಬಾ ಸಂತೋಷವಾಗಿರುತ್ತಾನೆ ಎಂದು ಅನೇಕ ಅಧ್ಯಯನಗಳ ಮೂಲಕ ತಿಳಿದಿದೆ. ನಿತ್ಯವೂ ಬದುಕನ್ನು ಶಪಿಸುತ್ತಿರುವವರು ಎಲ್ಲದರಲ್ಲೂ ಅತೃಪ್ತರಾಗುತ್ತಾರೆ. 

Advertisement
Advertisement

ಆದ್ದರಿಂದ ಮೊದಲು ಜೀವನವನ್ನು ಪ್ರೀತಿಸುವುದನ್ನು ಕಲಿಯಿರಿ. ನಿಮ್ಮ ಎಲ್ಲಾ ತೊಂದರೆಗಳು, ಕಣ್ಣೀರು ಮತ್ತು ಸಮಸ್ಯೆಗಳುಮಾಯವಾಗುತ್ತವೆ.

Advertisement

ಪ್ರಪಂಚದಾದ್ಯಂತ ಅನೇಕ ಮಹಾನ್ ವ್ಯಕ್ತಿಗಳು ಮನುಷ್ಯನ ಜೀವನವನ್ನು ಸಂತೋಷಪಡಿಸಲು ಹಲವಾರು ಮಾರ್ಗಗಳನ್ನು ಕಂಡುಹಿಡಿದಿದ್ದಾರೆ. ಆಹಾರ, ವಿಹಾರ ಮತ್ತು ಜ್ಞಾನದ ವಿಷಯದಲ್ಲಿ ನೀವು ನಿಮ್ಮ ಜೀವನವನ್ನು ಸಂತೋಷದಿಂದ ಕಳೆಯಬಹುದು.
ಕೆಲವರು ತಮಗೆ ಇಷ್ಟವಾದ ಆಹಾರವನ್ನು ಸೇವಿಸುವುದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ, ಕೆಲವರು ಹೊಸ ಸ್ಥಳಗಳಿಗೆ ಪ್ರಯಾಣಿಸುವುದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ. ಕೆಲವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುವುದನ್ನು ಆನಂದಿಸುತ್ತಾರೆ. ನಿಮಗೆ ಇಷ್ಟವಾದದ್ದನ್ನು ನಿಮ್ಮ ಜೀವನದಲ್ಲಿ ಮಾಡಿ. ನಿಮಗೆ ಇಷ್ಟವಿಲ್ಲದ್ದನ್ನು ತಕ್ಷಣ ತ್ಯಜಿಸಿ. ಅದನ್ನು ಬಿಟ್ಟು ಬದುಕನ್ನು ಶಪಿಸುತ್ತಾ ಕೂರಬೇಡಿ.

Advertisement
Advertisement

ಜೀವನವು ಸೃಷ್ಟಿಯ ಅದ್ಭುತ ಕೊಡುಗೆಯಾಗಿದೆ. ಮಾನವ ಜನ್ಮ ನೀಡಿದ ದೇವರಿಗೆ ಧನ್ಯವಾದಗಳನ್ನು ಹೇಳಿ. ನೀವು ಇರುವೆ ಅಥವಾ ಹುಳುವಾಗಿ ಜನಿಸಿದರೆ ನಿಮ್ಮ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ನಾವು ನಮ್ಮ ಜೀವನದಲ್ಲಿ ಕಳೆಯುತ್ತಿರುವ ಪ್ರತಿ ದಿನವೂ ನಮ್ಮ ಜೀವನದ ಆಯುಷ್ಯ ಸ್ವಲ್ಪ ಸ್ವಲ್ಪವೇ ಕಡಿಮೆಯಾದಂತೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಿನ್ನೆ ನಮ್ಮೊಂದಿಗೆ ಇದ್ದ ಕೆಲವರು ಇಂದು ಜೀವಂತವಾಗಿಲ್ಲದಿರಬಹುದು. ಅಂತವರಿಗೆ ಹೋಲಿಕೆ ಮಾಡಿಕೊಂಡರೆ ನಾವೇ ಪುಣ್ಯವಂತರು ಅಲ್ಲವೇ ? ಎಷ್ಟೋ ಜನರಿಗೆ ಈ ಭೂಮಿ ಮೇಲೆ ಇವರು ಅವಕಾಶ ಮುಗಿದಿದ್ದರೂ ನಾವು ಇನ್ನೂ ಜೀವಂತವಾಗಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸಿ.

ಯಾವುದಾದರೂ ಆಸ್ಪತ್ರೆಗೆ ಒಮ್ಮೆ ಭೇಟಿ ನೀಡಿ. ಅಲ್ಲಿ
ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಅನೇಕ ರೋಗಿಗಳು ಇದ್ದಾರೆ. ಅವರೆಲ್ಲರೂ ದೇವರೇ ನಮ್ಮನ್ನು ಈ ರೋಗದಿಂದ ಪಾರುಮಾಡಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಡಾಕ್ಟ್ರೇ ಎಷ್ಟು ಹಣ ಬೇಕಾದರೂ ಖರ್ಚಾಗಲಿ ನಮ್ಮವರನ್ನು ಬದುಕಿಸಿ ಎಂದು ಕೇಳುವವರೂ ಇದ್ದಾರೆ. ಅವರಿಗೆ ಹೋಲಿಸಿದರೆ ನಾವು ಎಷ್ಟು ಅದೃಷ್ಟವಂತರು ಅಲ್ಲವೇ ? ಎಂದು ಯೋಚಿಸಿ. ಆದ್ದರಿಂದ ಈ ಕ್ಷಣದಿಂದಲೇ ಜೀವನದ ಪ್ರತಿ ಕ್ಷಣವನ್ನು ಆನಂದಿಸಲು ಪ್ರಾರಂಭಿಸಿ. ಇದೇ ಕೊನೆಯ ದಿನ ಎಂಬಂತೆ ಭಾವಿಸಿ ಪ್ರತಿಕ್ಷಣವನ್ನೂ ಸಂತೋಷದಿಂದ ಕಳೆಯಿರಿ.

ಸಂತೋಷದಿಂದ ಬದುಕಲು ಆರೋಗ್ಯವಾಗಿರಬೇಕು.  ಮೊದಲು ಆರೋಗ್ಯವನ್ನು ನೋಡಿಕೊಳ್ಳಿ. ಸುಖವಾಗಿ ಬಾಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸಮಸ್ಯೆಗಳು ಏನೆಂಬುದು ಗೊತ್ತಿಲ್ಲದ ಮಕ್ಕಳನ್ನು ನೋಡಿ ದಿನವೂ ನೆಮ್ಮದಿಯಿಂದ ಬದುಕುವುದನ್ನು ಕಲಿಯಿರಿ. ಅವರು ನಾಳೆಯ ಬಗ್ಗೆ ಚಿಂತಿಸುವುದಿಲ್ಲ. ಅವರಿಗೆ ತಿಳಿದಿರುವುದು ಆ ಕ್ಷಣವನ್ನು ಆನಂದಿಸುವುದು. ನಿಮ್ಮನ್ನು ಮುಗ್ಧ ಮಕ್ಕಳಿಗೆ ಹೋಲಿಸಿಕೊಂಡು ಜೀವನವನ್ನು ಅರ್ಥ ಪೂರ್ಣವಾಗಿ ಕಳೆಯಿರಿ, ಪ್ರತಿಕ್ಷಣವನ್ನೂ ಆನಂದಿಸಿ..

Advertisement
Tags :
Advertisement