Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಈ ಬಾರಿ ಎನ್‌ಡಿಎ ಮೈತ್ರಿಕೂಟಕ್ಕೆ 400 ಕ್ಕೂ ಹೆಚ್ಚು ಸ್ಥಾನಗಳು, ಅಧಿಕಾರಕ್ಕೆ ಬಂದ ನಂತರ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ : ಪ್ರಧಾನಿ ನರೇಂದ್ರ ಮೋದಿ

07:30 PM Feb 05, 2024 IST | suddionenews
Advertisement

ಸುದ್ದಿಒನ್ : ಸಂಸತ್ತಿನ ಬಜೆಟ್ ಅಧಿವೇಶನದ ಅಂಗವಾಗಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಸಭೆಯಲ್ಲಿ ಸುದೀರ್ಘ ಭಾಷಣ ಮಾಡಿದರು.

Advertisement

ಈ ಸಂದರ್ಭದಲ್ಲಿ ಅವರು ಹ್ಯಾಟ್ರಿಕ್ ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನೇಕ ಯೋಜನೆಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಮೂರನೇ ಬಾರಿ ಗೆದ್ದು ಅಧಿಕಾರಕ್ಕೆ ಬಂದ ನಂತರ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ, ಅದರಲ್ಲೂ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಇಂಡಿಯಾ ಮೈತ್ರಿಕೂಟ ವಿರೋಧ ಪಕ್ಷದಲ್ಲಿಯೇ ಉಳಿಯಲು ನಿರ್ಧರಿಸಿದೆ ಎಂದು ವ್ಯಂಗ್ಯವಾಡಿದರು.

Advertisement

ಶೀಘ್ರದಲ್ಲೇ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 400 ಸ್ಥಾನಗಳನ್ನು ಪಡೆಯಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಬ್ ಕಿ ಬಾರ್ ಮೋದಿಕಿ ಸರ್ಕಾರ ಎಂಬ ಘೋಷಣೆ ಕೂಗಿದರು.

ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡುವುದಾಗಿ ಹೇಳಿದರು. 2014ರಲ್ಲಿ ಅಧಿಕಾರಕ್ಕೆ ಬಂದಾಗ ವಿಶ್ವದ 11ನೇ ಸ್ಥಾನದಲ್ಲಿರುವ ಭಾರತದ ಆರ್ಥಿಕತೆಯನ್ನು ಈಗ 5 ನೇ ಸ್ಥಾನಕ್ಕೆ ತಂದಿದ್ದೇವೆ ಎಂದರು.

ಭಾರತೀಯರ ಸಾಮರ್ಥ್ಯದ ಮೇಲೆ ಕಾಂಗ್ರೆಸ್‌ಗೆ ಎಂದಿಗೂ ನಂಬಿಕೆ ಇಲ್ಲ. ಪ್ರಧಾನಿಯಾಗಿ ಮೊದಲ ಭಾಷಣ ಮಾಡಿದ ಜವಾಹರಲಾಲ್ ನೆಹರು ಅವರು ವಿದೇಶಿಯರಿಗೆ ಹೋಲಿಸಿದರೆ ಭಾರತೀಯರಿಗೆ ಕೌಶಲ್ಯದ ಕೊರತೆಯಿದೆ ಎಂದು ಹೇಳಿದ್ದರು ಎಂದು ಮೋದಿ ಸ್ಮರಿಸಿದರು. ಆಗ ನೆಹರೂ ಭಾರತೀಯರ ಶಕ್ತಿಯಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಲಿಲ್ಲ. ನೆಹರೂ ನಂತರ ಇಂದಿರಾ ಗಾಂಧಿ ಕೂಡ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು.ಅವರು ಭಾರತೀಯರ ಆತ್ಮಗೌರವವನ್ನು ಕಡಿಮೆ ಅಂದಾಜು ಮಾಡಿದ್ದಾರೆ ಎಂದು ಆರೋಪಿಸಿದರು. ಇಬ್ಬರಿಗೂ ಭಾರತೀಯರ ಶಕ್ತಿಯಲ್ಲಿ ನಂಬಿಕೆ ಇರಲಿಲ್ಲ ಎಂದು ಹೇಳಿದರು.

ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಒಬಿಸಿಗಳಿಗೆ ನ್ಯಾಯ ಒದಗಿಸಿಲ್ಲ ಎಂದು ಪ್ರಧಾನಿ ಮೋದಿ ಆರೋಪಿಸಿದರು. ಒಬಿಸಿ ನಾಯಕರನ್ನು ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆವು. ಆದರೆ ಅವರು ಸಿಎಂ ಆಗಿದ್ದಾಗ ಪಿತೂರಿ ಮಾಡಿ ಕರ್ಪೂರಿ ಠಾಕೂರ್ ಅವರನ್ನು ಪದಚ್ಯುತಗೊಳಿಸಿದರು ಎಂದು ಟೀಕೆ ಮಾಡಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಖಾದಿ ಮರೆತಿದ್ದರೂ ನಾವು ಖಾದಿಗೆ ಆದ್ಯತೆ ನೀಡಿದ್ದೇವೆ ಎಂದರು. 370ನೇ ವಿಧಿಯನ್ನು ರದ್ದುಪಡಿಸಿ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ನೀಡಲಾಗಿದೆ ಎಂದರು. ವಸಾಹತುಶಾಹಿ ಕಾಲದ ಕಾನೂನುಗಳನ್ನು ತೆಗೆದು ಭಾರತೀಯ ಕಾನೂನು ಸಂಹಿತೆ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾವಾಗಿದ್ದು, ಬಾಲರಾಮ ಸ್ವಂತ ಮನೆಗೆ ಮರಳಿದ್ದಾನೆ. ಇದರಿಂದ ದೇಶಕ್ಕೆ ಹೊಸ ಶಕ್ತಿ ಬಂದಿದೆ ಎಂದರು.

ಪ್ರಧಾನಿ ಮೋದಿ ಕೂಡ ಇಂಡಿಯಾ ಮೈತ್ರಿಯನ್ನು ಟೀಕಿಸಿದರು. ಇಂಡಿಯಾ ಮೈತ್ರಿಕೂಟದ ನಾಯಕರು ವಿರೋಧ ಪಕ್ಷದಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಅವರ ಆಸೆಯನ್ನು ದೇವರು ಈಡೇರಿಸುತ್ತಾನೆ ಎಂದರು. ಆದರೆ ಒಂದು ಪಕ್ಷಕ್ಕೆ ಇನ್ನೊಂದು ಪಕ್ಷದ ಮೇಲೆ ನಂಬಿಕೆ ಇಲ್ಲ. ಇಂತಹ ಸಮಯದಲ್ಲಿ ದೇಶದ ಜನತೆ ಅವರನ್ನು ಹೇಗೆ ನಂಬುತ್ತಾರೆ ? ಹಾಗಾಗಿಯೇ ಮೈತ್ರಿ ಕುಸಿಯುತ್ತಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗಲೆಲ್ಲಾ  ಜನರನ್ನು ಕೀಳಾಗಿ ಕಾಣುತ್ತಿದೆ ಎಂದು ಟೀಕಿಸಿದರು. ಕುಂಟುತ್ತಾ ಸಾಗುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಯಾರೂ ಪೈಪೋಟಿ ನೀಡಲು ಸಾಧ್ಯವಿಲ್ಲ ಎಂದರು.

Advertisement
Tags :
400 seats for NDA400 ಕ್ಕೂ ಹೆಚ್ಚು ಸ್ಥಾನಗಳುbreaking newscoming to powerimportant decisionsLatest newsNarendra modinew Delhipm narendra modiPrime Minister Narendra Modiಅಧಿಕಾರಎನ್‌ಡಿಎ ಮೈತ್ರಿಕೂಟನವದೆಹಲಿಪ್ರಧಾನಿ ನರೇಂದ್ರ ಮೋದಿ‌ಮಹತ್ವದ ನಿರ್ಧಾರ
Advertisement
Next Article