Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮೊರಾರ್ಜಿ ದೇಸಾಯಿ ಶಾಲೆ ಪ್ರಕರಣ :ಕೇಂದ್ರ ಸಚಿವ ನಾರಾಯಣ ಸ್ವಾಮಿ ಹೇಳಿದ್ದೇನು ?

01:24 PM Dec 18, 2023 IST | suddionenews
Advertisement

Advertisement

 

ಕೋಲಾರ : ಮೊರಾರ್ಜಿ ದೇಶಾಯಿ ಶಾಲೆಯಲ್ಲಿ ಮಲದ ಗುಂಡಿಯನ್ನು ಸ್ವಚ್ಛಗೊಳಿಸುವುದಕ್ಕೆ ಮಕ್ಕಳನ್ನೇ ಬಳಕೆ ಮಾಡಿಕೊಳ್ಳಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ವಿಡಿಯೋ ವೈರಲ್ ಆಗುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರ ಸರಿಯಾದ ಕ್ರಮ ಕೈಗೊಂಡಿಲ್ಲವೆಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

Advertisement

ಈ ಬಗ್ಗೆ ಮಾತನಾಡಿದ ಅವರು, ಅಧಿಕಾರಿಗಳು ಉತ್ತರ ಕೊಡುವುದಕ್ಕೆ ಎಲ್ಲಾ ದಾಖಲೆ ಇದೆ. ಯಾರು ಮಾಡಿದರು, ಪ್ರಾಂಶುಪಾಲರು ಎಲ್ಲಿದ್ದರು, ಯಾವ ಮಕ್ಕಳನ್ನು ಇಳಿಸಿದರು ಎಂಬುದೆಲ್ಲಾ ಮಾಹಿತಿ ಇದೆ. ಮಕ್ಕಳು ಕೂಡ ಎಲ್ಲಾ ಮಾಹಿತಿ ನೀಡುತ್ತಿದ್ದಾರೆ. ಇದನ್ನು ಯಾರು ಮುಚ್ಚಿಡುವುದಕ್ಕೆ ಆಗುವುದಿಲ್ಲ. ಬರೀ ಸಮಾಜ ಮಾತ್ರವಲ್ಲ, ಇಡೀ ಸರ್ಕಾರವೇ ತಲೆ ತಗ್ಗಿಸುವಂತ ಕೆಲಸ ಇದು.

ಮುಖ್ಯಮಂತ್ರಿಗಳು ಗಂಭೀರವಾಗಿ ಈ ಘಟನೆಯನ್ನು  ತೆಗೆದುಕೊಳ್ಳಬೇಕಾಗಿದೆ. ಕೇಂದ್ರ ಸರ್ಕಾರದಿಂದ ಒಂದು ತಂಡವನ್ನು ಕಳುಹಿಸುತ್ತೇವೆ. ಆ ತಂಡ ನಮಗೂ ಹಾಗೂ ರಾಜ್ಯ ಸರ್ಕಾರಕ್ಕೂ ವರದಿ ನೀಡುತ್ತದೆ ಎಂದು ತಿಳಿಸಿದ್ದಾರೆ.

Advertisement
Tags :
casekolaraMorarji Desai SchoolsuddioneUnion Minister A. Narayan Swamyಕೇಂದ್ರ ಸಚಿವ ನಾರಾಯಣ ಸ್ವಾಮಿಕೋಲಾರಪ್ರಕರಣಮೊರಾರ್ಜಿ ದೇಸಾಯಿ ಶಾಲೆಸುದ್ದಿಒನ್
Advertisement
Next Article