ಜುಲೈ 15ರಿಂದ ಆರಂಭವಾಗಲಿದೆ ಮುಂಗಾರು ಅಧಿವೇಶನ : ವಿಪಕ್ಷಗಳ ಫ್ಲ್ಯಾನ್ ಏನು..?
ಬೆಂಗಳೂರು: ಹತ್ತು ದಿನಗಳ ಕಾಲ ಮುಂಗಾರು ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಜುಲೈ 15 ರಿಂದ ಜುಲೈ 26ರ ತನಕ ಮುಂಗಾರು ಅಧಿವೇಶನ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರು ಅಧಿವೇಶನದ ದಿನಾಂಕವನ್ನು ಫೈನಲ್ ಮಾಡಿದ್ದಾರೆ. ಈ ಕುರಿತು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ.
ಮುಂಗಾರು ಅಧಿವೇಶನದಲ್ಲಿ ಆಡಳಿತ ಪಕ್ಷದ ಮೇಲೆ ಚಾಟಿ ಬೀಸಲು ಬಿಜೆಪಿ ಹಾಗೂ ಜೆಡಿಎಸ್ ಸಜ್ಜಾಗಿವೆ. ರಾಜ್ಯದಲ್ಲಿ ಬೆಲೆ ಏರಿಕೆಯ ವಿಚಾರವನ್ನೇ ಅಸ್ತ್ರ ಮಾಡಿಕೊಂಡಿದ್ದಾರೆ. ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ, ಹಾಲಿನ ದರ ಏರಿಕೆ, ಹಗರಣಗಳಿಗೆ ಸಂಬಂಧಪಟ್ಟಂತೆ ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆ ಇದೆ. ಹಗರಣಗಳಿಂದಾನೇ ಸರ್ಕಾರವನ್ನು ಕಟ್ಟಿ ಹಾಕುವ ಪ್ರಯತ್ನ ಮಾಡುವ ಪ್ಲ್ಯಾನ್ ಹಾಕಿಕೊಂಡಿದೆ.
ಈ ಬಾರಿಯ ಅಧಿವೇಶನ ಅರ್ಥಪೂರ್ಣ, ಪ್ರಯೋಜನಯುತವಾಗಿ ಚರ್ಚೆಯಾಗುತ್ತಾ ಎಂಬುದನ್ನು ನೋಡಬೇಕಿದೆ. ವಿಪಕ್ಷಗಳ ಗದ್ದಲದಿಂದ ಸರಿಯಾದ ಚರ್ಚೆಯಾಗದೆ ಉಳಿಯುತ್ತಾ ಅಥವಾ ವಿಪಕ್ಷಗಳು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದಲ್ಲಿ ಬೆಲೆ ಏರಿಕೆಯಿಂದಾಗಿ ಜನ ಸಾಕಷ್ಟು ನೊಂದಿದ್ದಾರೆ. ದಿನೇ ದಿನೇ ಒಂದಿಲ್ಲೊಂದು ವಸ್ತುವಿನ ಬೆಲೆ ಏರಿಕೆಯಾಗುತ್ತಲೇ ಇದೆ. ಪೆಟ್ರೋಲ್ ಡಿಸೇಲ್ ಬೆಕೆಯಲ್ಲಿ ಏರಿಕೆಯಾಗಿದ್ದರ ಜೊತೆಗೆ ಹಾಲನ್ನು ಹೆಚ್ಚಳ ಮಾಡಿ, ಎರಡು ರೂಪಾಯಿ ಏರಿಕೆ ಮಾಡಿದೆ. ಇದು ಕೂಡ ವಿಪಕ್ಷಗಳಿಗೆ ಅಸ್ತ್ರವಾಗಿದೆ. ಇನ್ನು ಹಗರಣಗಳ ವಿಚಾರದಲ್ಲು ಅಷ್ಟೇ ಸಾಕಷ್ಟು ಹಗರಣಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ಆದ ಹಗರಣದಿಂದ ಸಿಬ್ಬಂದಿ ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಮೈಸೂರು ಮೂಡಾ ಹಗರಣವೂ ಬೆಳಕಿಗೆ ಬಂದಿದೆ. ಹೀಗಾಗಿ ಆಡಳಿತ ಪಕ್ಷದ ಮೇಲೆ ಸವಾರಿ ಮಾಡಲು ವಿಪಕ್ಷ ಸಜ್ಜಾಗಿದೆ.