For the best experience, open
https://m.suddione.com
on your mobile browser.
Advertisement

ಸಿದ್ದಾಪುರದಲ್ಲಿ ಹೆಚ್ಚಿದ ಮಂಗನ ಕಾಯಿಲೆ : ಚಿಕಿತ್ಸೆ ಫಲಿಸದೆ ವೃದ್ದೇ ಸಾವು..!

05:39 PM Feb 26, 2024 IST | suddionenews
ಸಿದ್ದಾಪುರದಲ್ಲಿ ಹೆಚ್ಚಿದ ಮಂಗನ ಕಾಯಿಲೆ   ಚಿಕಿತ್ಸೆ ಫಲಿಸದೆ ವೃದ್ದೇ ಸಾವು
Advertisement

ಶಿರಸಿ: ಮಂಗನ ಕಾಯಿಲೆ ಮಲೆನಾಡು ಭಾಗದಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಸಿದ್ದಪುರ ಮಂಗನ ಕಾಯಿಲೆಯ ಹಾಟ್ ಸ್ಪಾಟ್ ಅಂತಾನೇ ಹೇಳಬಹುದು.‌ ದಿನೇ ದಿನೇ ಹೆಚ್ಚುತ್ತಿರುವ ಕಾಯಿಲೆಗೆ ಈಗಾಗಲೇ ಎರಡು ಬಲಿಯಾಗಿದೆ. ಇಂದು ಚಿಕಿತ್ಸೆ ಫಲಕಾರಿಯಾಗದೆ ವೃದ್ದೇಯೊಬ್ಬರು ಬಲಿಯಾಗಿದ್ದಾರೆ.

Advertisement

ಮಂಗನ ಕಾಯಿಲೆ ಉಲ್ಬಣವಾಗುತ್ತಿದ್ದು, ಈಗಾಗಲೇ 43 ಪ್ರಕರಣಗಳು ಚಾಲ್ತಿಯಲ್ಲಿವೆ. ಅಷ್ಟೂ ಪ್ರಕರಣಗಳು ಸಿದ್ದಾಪುರದಲ್ಲೇ ದಾಖಲಾಗಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಈಗ ಸಾವನ್ನಪ್ಪಿರುವ ವೃದ್ದೆಯನ್ನು ಕೂಡ ಆರಂಭದಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾತಿಯಾಗದೆ ಸಾವನ್ನಪ್ಪಿದ್ದಾರೆ.

Advertisement

ಮಂಗನ ಕಾಯಿಲೆಗೆ ಸರಿಯಾದ ಲಸಿಕೆ ಇಲ್ಲದೆ ಸಾವುಗಳಾಗುತ್ತಿವೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಅಧಿಕಾರಿಗಳು ಕೂಡ ಸರಿಯಾಗಿ ಗಮನ ಕೊಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರ ನಡುವೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Tags :
Advertisement