ಶುದ್ದ ಗಾಳಿಯ ಊರು ಎಂಬ ಪಟ್ಟ ಪಡೆದಿದೆ ಶಾಸಕ ಯತ್ನಾಳ್ ಜಿಲ್ಲೆ..!
ವಿಜಯಪುರ: ಜಿಲ್ಲೆಯನ್ನು ಹೆಚ್ಚಾಗಿ, ಧೂಳಿನ ನಗರ, ಬರಗಾಲದ ನಗರ ಎಂದೆಲ್ಲಾ ಹೆಸರು ಇದೆ. ಜನ ಕೆಲಸಕ್ಕಾಗಿ ಬೇರೆ ಕಡೆಗೆ ಹೋಗುತ್ತಿದ್ದಾರೆ. ಇಂಥ ನಗರ ಇದೀಗ ಶುದ್ಧ ಗಾಳಿಯ ನಗರವೆಂದು ಹೆಸರು ಬಂದಿದೆ. ಶುದ್ಧ ಗಾಳಿ ಇರುವ ನಗರದ ಪಟ್ಟಿಯಲ್ಲಿ ವಿಜಯಪುರ ಸ್ಥಾನ ಪಡೆದಿದೆ. ಕ್ಲೈಮೆಟ್ ಟ್ರೆಂಡ್ಸ್, ರೆಸ್ಪೈರರ್ ಲಿವಿಂಗ್ ಸೈನ್ಸ್ ಹಾಗೂ ರೆಸ್ಪೈರರ್ ವರದಿಯಲ್ಲಿ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ದೇಶದಲ್ಲಿ ವಿಜಯಪುರ ನಗರಕ್ಕೆ 6ನೇ ಸ್ಥಾನ ಪಡೆದಿದೆ.
ಈ ಬಗ್ಗೆ ಮಾತನಾಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ ಹಿಂದೆ ವಿಜಯಪುರವನ್ನು ಧೂಳಾಪುರ ಎನ್ನಲಾಗುತ್ತಿತ್ತು. ವಿವಿಧ ಅಭಿವೃದ್ಧಿಯಿಂದ ಇದೀಗ ವಿಜಯಪುರ ಅಭಿವೃದ್ಧಿ ನಗರವಾಗಿದೆ. ನಗರದಲ್ಲಿನ ಧೂಳಿನ ಪರಿಸ್ಥಿತಿಯಿಂದ ಜನ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದರು. ಈಗ ಜನರ ಕಾಯಿಲೆಗಳು ದೂರವಾಗಿವೆ. ಈಗ ಆರೋಗ್ಯವಂತ ನಗರವಾಗಿದೆ ಎಂದಿದ್ದಾರೆ.
ಇನ್ನು ಶಾಸಕರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಸ್ತೆಗಳೆಲ್ಲಾ ಅಭಿವೃದ್ಧಿ ಹೊಂದಿವೆ, ಎಲ್ಲೆಂದರಲ್ಲಿ ಬೀಳುತ್ತಿದ್ದ ಕಸಕ್ಕೆ ಮುಕ್ತಿ ಸಿಕ್ಕಿದೆ. ಮಾಲಿನ್ಯವೂ ಮಾಯವಾಗಿದೆ. ಹೀಗಾಗಿಯೇ ವಿಜಯಪುರದಲ್ಲಿ ಶುದ್ಧಗಾಳಿ ಸಿಗುತ್ತಿದೆ. ಈ ಬೆನ್ನಲ್ಲೇ ಶುದ್ಧಗಾಳಿಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.