ಕೊರಗಜ್ಜನ ಮೊರೆ ಹೋದ ಶಾಸಕ ವಿನಯ್ ಕುಲಕರ್ಣಿ : 48 ದಿನದ ಒಳಗೆ ಪರಿಹಾರದ ಭರವಸೆ
ಮಂಗಳೂರು: ಕೊರಗಜ್ಜನನ್ನು ನಂಬದ ವ್ಯಕ್ತಿಗಳಿಲ್ಲ. ಅದೆಷ್ಟೊ ಜನರಿಗೆ ತಮ್ಮ ಸಮಸ್ಯೆಗಳಿಹೆ ಕೊರಗಜ್ಜನ ಸನ್ನಿಧಿಯಲ್ಲಿ ಪರಿಹಾರ ಸಿಕ್ಕಿದೆ. ಇದೀಗ ಶಾಸಕ ವಿನಯ್ ಕುಲಕರ್ಣಿ ಕೂಡ ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿ, ಸಮಸ್ಯೆಗೆ ಪರಿಅಹರ ಕೇಳಿಕೊಂಡಿದ್ದಾರೆ.
ಶಾಸಕ ವಿನಯ್ ಕುಲಕರ್ಣಿ, ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದಾರೆ. ಅದಕ್ಕಿನ್ನು ಪರಿಹಾರ ಸಿಕ್ಕಿಲ್ಲ. ಧಾರಾವಾಡ ಕ್ಷೇತ್ರಕ್ಕೆ ಕಾಲಿಡದೆಯೇ ಗ್ರಾಮಾಂತರ ಕ್ಷೇತ್ರವನ್ನು ಗೆದ್ದಿದ್ದಾರೆ. ಶಾಸಕರಾಗಿಯೂ ಜನರ ಸಮಸ್ಯೆ ಕೇಳಲು ಕ್ಷೇತ್ರಕ್ಕೆ ಅನುಮತಿ ಇಲ್ಲ. ಕೋರ್ಟ್ ಧಾರವಾಡ ಕ್ಷೇತ್ರಕ್ಕೆ ಅನುಮತಿ ನಿರಾಕರಿಸಿದೆ. ಈ ಸಂಬಂಧ ಎಲ್ಲಾ ಸಮಸ್ಯೆಗಳಿಗೆ ಕೊರಗಜ್ಜನ ಮೊರೆ ಹೋಗಿರುವ ವಿನಯ್ ಕುಲಕರ್ಣಿ ಕೋಲ ಸೇವೆ ನೀಡಿದ್ದಾರೆ. ಕುಟುಂಬಸ್ಥರ ಜೊತೆಗೆ ಹೋಗಿ ಇಂದು ಮಂಗಳೂರಿನ ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಕೊರಗಜ್ಜನಿಗೆ ಹರಕೆ ತೀರಿಸಿ ಬಂದಿದ್ದಾರೆ.
ಈ ವೇಳೆ ಕೊರಗಜ್ಜನಿಂದ ಭರವಸೆಯೂ ಸಿಕ್ಕಿದೆ. 48 ದಿನದ ಒಳಗೆ ಎಲ್ಲಾ ಸಮಸ್ಯೆ ಬಗೆ ಹರಿಸುವುದಾಗಿ ತಿಳಿಸಿದೆ. ಧಾರಾವಾಡ ಕ್ಷೇತ್ರದ ಪ್ರವೇಶ ನಿರ್ಬಂಧದ ಬಗ್ಗೆ ದೈವ ನುಡಿದಿದೆ. ಜೊತೆಗೆ ಮುಂದಿನ ಮೂರು ವರ್ಷಗಳ ಕಾಲ ತುಂಬಾ ಸೂಕ್ಷ್ಮವಾಗಿ ಇರುವಂತೆ ಎಚ್ಚರಿಕೆಯನ್ನು ನೀಡಿದೆ. 'ಹೆಣ್ಣಿನ ಕಾರಣದಿಂದಾನೇ ಈ ಎಲ್ಲಾ ಸಮಸ್ಯೆಗಳು ಶುರುವಾಗಿದ್ದು, ಅಧರ್ಮದಲ್ಲಿ ಹೋದವರನ್ನು ನಾನು ನೋಡಿಕೊಳ್ಳುತ್ತೇನೆ' ಎಂದು ಭರವಸೆ ನೀಡಿದ್ದಾರೆ. ಕೊರಗಜ್ಜ ನೀಡಿದ ಭರವಸೆಗೆ ವಿನಯ್ ಕುಲಕರ್ಣಿ ಫುಲ್ ಖುಷಿಯಾಗಿದ್ದು, ಸಂತಸದಿಂದ ಕೋಲ ನಡೆಸಿಕೊಟ್ಟಿದ್ದಾರೆ. 'ಚುನಾವಣಾ ಪೂರ್ವದಲ್ಲಿಯೇ ಕೋಲ ಬಗ್ಗೆ ಕಾಂಗ್ರೆಸ್ ನಾಯಕರು ಹಾಗೂ ಸ್ನೇಹಿತರು ಹೇಳಿದ್ದರು. ಆದರೆ ಈಗ ಕಾಲ ಕೂಡಿ ಬಂದಿದೆ' ಎಂದು ವಿನಯ್ ಕುಲಕರ್ಣಿ ಹೇಳಿದ್ದಾರೆ.