For the best experience, open
https://m.suddione.com
on your mobile browser.
Advertisement

ಶಾಸಕ ಪ್ರದೀಪ್ ಈಶ್ವರ್ ಈಗ ಬಿಗ್ ಬಾಸ್ ಸ್ಪರ್ಧಿ : ಜನರು ಗೆಲ್ಲಿಸಿರುವುದು ಸೇವೆ ಮಾಡುವುದಕ್ಕೋ ? ಬಿಗ್ ಬಾಸ್ ಮನೆಯಲ್ಲಿ ಕುಣಿಯುವುದಕ್ಕೋ ?

07:45 PM Oct 09, 2023 IST | suddionenews
ಶಾಸಕ ಪ್ರದೀಪ್ ಈಶ್ವರ್ ಈಗ ಬಿಗ್ ಬಾಸ್ ಸ್ಪರ್ಧಿ   ಜನರು ಗೆಲ್ಲಿಸಿರುವುದು ಸೇವೆ ಮಾಡುವುದಕ್ಕೋ   ಬಿಗ್ ಬಾಸ್ ಮನೆಯಲ್ಲಿ ಕುಣಿಯುವುದಕ್ಕೋ
Advertisement

ಸುದ್ದಿಒನ್, ಬೆಂಗಳೂರು, ಅಕ್ಟೋಬರ್.09  : ಬಿಗ್ ಬಾಸ್ ಶೋ‌ ಜಗತ್ತಿನ ಅತಿ ದೊಡ್ಡ ರಿಯಾಲಿಟಿ ಶೋ ಆಗಿದ್ದು, ಕೋಟ್ಯಂತರ ಜನರ ಪ್ರೀತಿಗೆ ಪಾತ್ರವಾಗಿದೆ. ಈ ಬಿಗ್ ಬಾಸ್ ಶೋನಲ್ಲಿ ಸೆಲೆಬ್ರಿಟಿಗಳು, ಸಿನಿಮಾ ಹಿನ್ನೆಲೆ ಇರುವ, ವಿವಿಧ ಕ್ಷೇತ್ರಗಳಲ್ಲಿ ಜನರಲ್ಲಿ ಜನಪ್ರಿಯರಾಗಿರುವರನ್ನು ಮತ್ತು ಸಾಮಾನ್ಯ ಜನರನ್ನು ಸ್ಪರ್ಧಿಗಳಾಗಿ ಅವಕಾಶಗಳನ್ನು ಒದಗಿಸುತ್ತಾರೆ. 

Advertisement
Advertisement

ಈ ಬಿಗ್ ಬಾಸ್ ಶೋ ಪ್ರಸ್ತುತ ನಮ್ಮ ದೇಶದ ಹಲವು ಭಾಷೆಗಳಲ್ಲಿ ಸೀಸನ್ ನಂತರ ಸೀಸನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಕಲರ್ಸ್ ಕನ್ನಡ ಚಾನಲ್ ನಲ್ಲಿ ಈ ಬಿಗ್ ಬಾಸ್ ಶೋ ನಿನ್ನೆ(ಭಾನುವಾರದಿಂದ) ಪ್ರಸಾರವಾಗುತ್ತಿದೆ. ಅದರಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದ ಪ್ರದೀಪ್ ಈಶ್ವರ್ ಅವಯ ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಹೋಗಿದ್ದಾರೆ. ಇದೀಗ ಇದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಜನ ಮತ ನೀಡಿ ಗೆಲ್ಲಿಸಿ ಶಾಸಕರನ್ನಾಗಿ ಮಾಡಿದರೆ ಆ ಜನರತ್ತ ಗಮನ ಹರಿಸದೆ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಏನು ಪ್ರಯೋಜನ ಎಂದು ಟೀಕಿಸುತ್ತಿದ್ದಾರೆ.

Advertisement

ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ನೂರು ದಿನಗಳ ಕಾಲ ಹೊರಗಿನ ಪ್ರಪಂಚದ ಸಂಪರ್ಕವಿಲ್ಲದೆ ಕಳುಹಿಸಲಾಗುತ್ತದೆ.. ಅವರು ಅಲ್ಲಿರುವ ಸ್ಪರ್ಧಿಗಳೊಂದಿಗೆ ವಿವಿಧ ಟಾಸ್ಕ್ ಗಳನ್ನು ಆಡುತ್ತಾರೆ. ಆದರೆ ವಾರದಿಂದ ವಾರಕ್ಕೆ ಪ್ರೇಕ್ಷಕರು ನೀಡುವ ಮತದಾನದ ಮೇಲೆ ಕಡಿಮೆ ಮತ ಪಡೆದ ಕೆಲವರು ಎಲಿಮಿನೇಟ್ ಆಗುತ್ತಾರೆ. ಮತ್ತು ಯಾರು ಕಡಿಮೆ ಮತಗಳನ್ನು ಪಡೆಯುತ್ತಾರೆಯೋ ಅಂತವರನ್ನು ವಾಪಾಸು ಮನೆಗೆ ಕಳುಹಿಸುತ್ತಾರೆ. ಕೊನೆಯಲ್ಲಿ, ಹೆಚ್ಚು ಮತಗಳನ್ನು ಪಡೆದು ಗೆದ್ದವರಿಗೆ ಭಾರಿ ನಗದು ಬಹುಮಾನ ಮತ್ತು ವಿವಿಧ ಉಡುಗೊರೆಗಳನ್ನು ನೀಡಲಾಗುತ್ತದೆ. ಆದರೆ ಹಲವು ವಿವಾದಗಳ ಕೇಂದ್ರಬಿಂದುವಾಗಿರುವ ಬಿಗ್ ಬಾಸ್ ಶೋ ಜನರಿಂದ ಭಾರೀ ಜನಪ್ರಿಯತೆ ಗಳಿಸುತ್ತಿದೆ. ಇದರಿಂದಾಗಿ ಆಯಾ ವಾಹಿನಿಗಳು ಸೀಸನ್ ಮುಗಿದ ನಂತರ ಮತ್ತೊಂದು ಸೀಸನ್ ಆರಂಭಿಸುತ್ತಿವೆ.

Advertisement
Advertisement

https://x.com/ColorsKannada/status/1711229444965478414?s=20

ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಕನ್ನಡ ಮನೆಗೆ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10 ಭಾನುವಾರ ಆರಂಭವಾಗಿದೆ. ಆದರೆ ಸೋಮವಾರದ ಸಂಚಿಕೆಯ ಪ್ರೋಮೋವನ್ನು ಮುಂಜಾನೆಯೇ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಪ್ರದೀಪ್ ಈಶ್ವರ್ ಸ್ಪರ್ಧಿಯಾಗಿ ಇರುವುದನ್ನು ಕಂಡ ಕನ್ನಡಿಗರು ಬೆಚ್ಚಿಬಿದ್ದಿದ್ದಾರೆ.  ಈ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ಟೀಕಿಸಿದೆ. ಕೆಲ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಶೋಗೆ ಎಂಟ್ರಿ ಕೊಟ್ಟಿದ್ದು ಖುಷಿ ತಂದಿದೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಪ್ರದೀಪ್ ಈಶ್ವರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವು ನೆಟ್ಟಿಗರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಟ್ವೀಟ್ ಮಾಡುತ್ತಿದ್ದಾರೆ. ಜನಸೇವೆ ಮಾಡಲು ಆಯ್ಕೆಯಾದ ಶಾಸಕ ಬೇಜವಾಬ್ದಾರಿಯಿಂದ ರಿಯಾಲಿಟಿ ಶೋಗೆ ಕಾಲಿಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 38 ವರ್ಷದ ಪ್ರದೀಪ್ ಈಶ್ವರ್ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಗೆದ್ದಿದ್ದಾರೆ. ಪರಿಶ್ರಮ ನೀಟ್ ಅಕಾಡೆಮಿ ಕೋಚಿಂಗ್ ಸಂಸ್ಥೆ ನಡೆಸುತ್ತಿರುವ ಪ್ರದೀಪ್ ಈಶ್ವರ್ ಕರ್ನಾಟಕದ ಮಾಜಿ ಸಚಿವ ಕೆ.ಸುಧಾಕರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ಇದು ಅವರ ವೈಯಕ್ತಿಕ ನಿರ್ಣಯ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಪ್ರದೀಪ್ ಈಶ್ವರ್ ವಿರುದ್ಧ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಹೇಳಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಪ್ರದೀಪ್ ಈಶ್ವರ್ ಕಾರ್ಯಕ್ರಮದಿಂದ ಹೊರಬರಲಿದ್ದಾರೆ ಎಂದಿದ್ದಾರೆ. ಬಿಜೆಪಿಯೂ ತೀವ್ರವಾಗಿ ಟೀಕಿಸಿದೆ. ಜನರು ಪ್ರದೀಪ್ ಈಶ್ವರ್ ಅವರನ್ನು ಗೆಲ್ಲಿಸಿರುವುದು ಜನ ಸೇವೆ ಮಾಡುವುದಕ್ಕೋ ಅಥವಾ ಬಿಗ್ ಬಾಸ್ ಶೋನಲ್ಲಿ ಕುಣಿಯುವುದಕ್ಕೋ ಎಂದು ವ್ಯಂಗ್ಯವಾಡಿದೆ.

Advertisement
Tags :
Advertisement