ಗೃಹಲಕ್ಷ್ಮೀ ಯೋಜನೆಯ ಹಣ ವರ್ಗಾವಣೆಯಾಗದೆ ಇರುವುದಕ್ಕೆ ಕಾರಣ ತಿಳಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್..!
ಬೆಂಗಳೂರು: ಕಳೆದ ಎರಡ್ಮೂರು ತಿಂಗಳಿನಿಂದ ಗೃಹಲಕ್ಷ್ಮೀ ಹಣ ಸಂದಾಯವಾಗಿಲ್ಲ. ಇದು ಮಹಿಳೆಯರ ಬೇಸರಕ್ಕೆ ಕಾತಣವಾಗಿದೆ. ವರಮಹಾಲಕ್ಷ್ಮೀ ಹಬ್ಬ ಬೇರೆ ಹತ್ತಿರ ಬಂತು. ಹಬ್ಬಕ್ಕೆ ಸರ್ಕಾರದಿಂದ ಕೊಡುಗೆ ಎಂಬಂತೆ ಎಲ್ಲರಿಗೂ ಬಾಕಿ ಉಳಿದ ಗೃಹಲಕ್ಷ್ಮೀ ಹಣ ಸಂದಾಯವಾಗುತ್ತೆ ಎಂದೇ ಹೇಳಿದ್ದರು. ಆದರೆ ಆ ಹಣ ಇನ್ನು ಯಜಮಾನಿಯ ಅಕೌಂಟ್ ಗೆ ಕ್ರೆಡಿಟ್ ಆಗಿಲ್ಲ. ಯಾಕೆ ಎಂಬುದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಚುವ ಲಕ್ಷ್ಮೀ ಹೆಬ್ಬಾಳ್ಕರ್, ಗೃಹಲಕ್ಷ್ಮೀ ಯೋಜನೆಗೆ ಪ್ರತಿ ತಿಂಗಳು 2,400 ಕೋಟಿ ಹಣ ಖರ್ಚಾಗುತ್ತದೆ. ಮಂಡ್ಯದಲ್ಲಿ ಡಿಪಿಟಿಗೆ ಪುಷ್ ಮಾಡಿ ಮೂರು ದಿನಗಳಾಗಿವೆ. ಇನ್ನೂ ನಾಲ್ಕೈದು ಜಿಲ್ಲೆಗಳಿಗೆ ಯೋಜನೆಯ ಹಣ ಸಿಗಬೇಕಿದೆ. ಗೃಹಲಕ್ಷ್ಮೀ ಹಣವನ್ನು ಬ್ಯಾಂಕ್ ಗಳಿಗೆ ಕಳುಹಿಸಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಮನೆಯ ಯಜಮಾನಿಯರ ಖಾತೆಗೆ ಹಣ ವರ್ಹಾವಣೆಯಾಗಬೇಕು. ಹೀಗಾಗಿ ತಡವಾಗುತ್ತಿದೆ.
ಜೊತೆಗೆ ದೊಡ್ಡ ಮೊತ್ತವಾಗಿರುವ ಖಾತೆಗಳಿಗೆ ಜಮೆಯಾಗಲು ತಡವಾಗುತ್ತಿದೆ. ಜೂನ್ ತಿಂಗಳ ಹಣ ವರ್ಗಾವಣೆಯಾಗಿದೆ. ಜುಲೈ ತಿಂಗಳ ಹಣ ಇನ್ನೆರಡು ದಿನದಲ್ಲಿ ಖಾತೆಗಳಿಗೆ ಬರಲಿದೆ. ಆಗಸ್ಟ್ ತಿಂಗಳ ಹಣ ಕೂಡ ಯಜಮಾನಿಯರ ಖಾತೆಗೆ ವರ್ಗಾವಣೆ ಮಾಡುತ್ತೇವೆ. ವಿಳಂಬ ಆಗಬಾರದು ಎಂಬುದು ನಮ್ಮ ಚಿಂತನೆ. ದಿನಕ್ಕೆ ನನಗೆ 500 ಕರೆಗಳು ಬರಯತ್ತವೆ. ಮಂತ್ರಿಯಾಗಿ ಎಲ್ಲಾ ಕರೆಗಳಿಗೂ ನಾನು ಉತ್ತರ ನೀಡುತ್ತಿದ್ದೇನೆ. ಹಣ ವರ್ಗಾವಣೆಯಾಗುತ್ತೆ ಎಂದು ಸಮಾಧಾನ ಮಾಡುತ್ತಾ ಇರುತ್ತೇನೆ. ವಿಳಂಬವಾಗದಂತೆ ನೋಡಿಕೊಳ್ಳಲು ನಮ್ಮ ತಂಡ ಹಗಲು ರಾತ್ರಿ ಕೆಲಸ ಮಾಡುತ್ತಿದೆ ಎಂದಿದ್ದಾರೆ.