For the best experience, open
https://m.suddione.com
on your mobile browser.
Advertisement

ರೇಣುಕಾಸ್ವಾಮಿ ಮೃತದೇಹ ಸಾಗಿಸಲು ಲಕ್ಷಾಂತರ ಖರ್ಚು: ಹಣದ ಮೂಲದ ಹಿಂದೆ ಬಿದ್ದ ಐಟಿ ಅಧಿಕಾರಿಗಳು..!

01:28 PM Sep 25, 2024 IST | suddionenews
ರೇಣುಕಾಸ್ವಾಮಿ ಮೃತದೇಹ ಸಾಗಿಸಲು ಲಕ್ಷಾಂತರ ಖರ್ಚು  ಹಣದ ಮೂಲದ ಹಿಂದೆ ಬಿದ್ದ ಐಟಿ ಅಧಿಕಾರಿಗಳು
Advertisement

Advertisement
Advertisement

ಬಳ್ಳಾರಿ: ನಟ ದರ್ಶನ್ ರೇಣುಕಾಸ್ವಾಮಿ ಕೊಲೆಯಲ್ಲಿ ಬಳ್ಳಾರಿ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಜಾಮೀನಿಗೂ ಅರ್ಜಿ ಸಲ್ಲಿಕೆ ಮಾಡಿದ್ದು, ವಿಚಾರಣೆ ಕೂಡ ನಡೆಯುತ್ತಿದೆ. ಈ ಕೇಸಲ್ಲಿ ಈಗಾಗಲೇ ಮೂವರಿಗೆ ಜಾಮೀನು ಸಿಕ್ಕಿದೆ. ಆ ಮೂವರು ಕೊಲೆಯಲ್ಲಿ ಭಾಗಿಯಾದವರಲ್ಲ. ಮೃತದೇಹ ಸಾಗಿಸಲು ಹಣ ಪಡೆದು, ಸೆರಂಡರ್ ಆದವರು. ಹೀಗಾಗಿ ಆ ಮೂವರಿಗೆ ಜಾಮೀನು ನೀಡಲಾಗಿದೆ. ಇದೀಗ ಐಟಿ ಅಧಿಕಾರಿಗಳು ದರ್ಶನ್ ಹಣದ ಮೂಲದ ಹಿಂದೆ ಬಿದ್ದಿದ್ದಾರೆ.

ಅಂದ್ರೆ ರೇಣುಕಾಸ್ವಾಮಿ ಕೊಲೆಯ ಬಳಿಕ ಮೃತದೇಹ ಸಾಗಿಸುವುದಕ್ಕೇನೆ 30 ಲಕ್ಷ ಹಣ ನೀಡಿದ್ದರು. ಹೀಗಾಗಿ ಆ ಹಣವೆಲ್ಲಾ ಎಲ್ಲಿಂದ ಬಂತು ಎಂಬ ಮೂಲ ಕಂಡು ಹಿಡಿಯಲು ಹೊರಟಿದ್ದಾರೆ. ಹೀಗಾಗಿ ದರ್ಶನ್ ಅವರನ್ನು ಭೇಟಿಯಾಗಲು ಐಟಿ ಅಧಿಕಾರಿಗಳು ಜೈಲು ಅಧಿಕಾರಿಗಳಿಗೆ ಸಮಯವನ್ನು ಕೇಳಿದ್ದಾರೆ. ಸಮಯ ನೀಡಿದ ಬಳಿಕ ಐಟಿ ಅಧಿಕಾರಿಗಳು ಬಳ್ಳಾರಿ ಜೈಲಿಗೆ ಭೇಟಿ ನೀಡಲಿದ್ದಾರೆ.

Advertisement
Advertisement

ಜೈಲು ಅಧಿಕಾರಿಗಳಿಗೆ ಈ ಸಂಬಂಧ ಈಗಾಗಲೇ ಮೇಲ್ ಕೂಡ ಬಂದಿದೆ. ದರ್ಶನ್ ಅವರ ಭೇಟಿಗೆ ಸಮಯಾವಕಾಶ ನೀಡುವಂತೆ ಮನವಿ ಮಾಡಿ ಮೇಲ್ ಮಾಡಿದ್ದಾರೆ. ಯಾಕಂದ್ರೆ ರೇಣುಕಾಸ್ವಾಮಿ ಕೊಲೆಯ ಬಳಿಕ ಆ ಕೇಸನ್ನು ಇನ್ನೊಬ್ಬರ ಮೇಕೆ ಹಾಕುವ ಹುನ್ನಾರ ನಡೆದಿತ್ತು. ಹಣದ ಆಮಿಷವೊಡ್ಡಿ ಪೊಲೀಸರ ಮುಂದೆ ತಪ್ಪೊಪ್ಪಿಕೊಳ್ಳುವಂತೆ ಸೂಚನೆ ನೀಡಿದ್ದರು. ಅದಕ್ಕೆ ಸರಿಯಾಗಿ ಕೇಶವಮೂರ್ತಿ, ಕಾರ್ತಿಕ್, ನಿಖಿಲ್ ಆ ತಪ್ಪನ್ನು ಒಪ್ಪಿಕೊಂಡು ಪೊಲೀಸರ ಮುಂದೆ ಸೆರಂಡರ್ ಆಗಿದ್ದರು. ಆಮೇಲೆ ಪೊಲೀಸರ ತನಿಖೆಯ ಬಳಿಕ ಸತ್ಯ ಹೊರಗೆ ಬಂದಿದ್ದು, ದರ್ಶನ್ ಅಂಡ್ ಗ್ಯಾಂಗ್ ಸಿಕ್ಕಿಬಿದ್ದಿತ್ತು.

Advertisement
Tags :
Advertisement