Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

'ಸಾರಾಂಶ'ದ ಮೆಲೋಡೀಸ್ ಸಾಂಗ್ ರಿಲೀಸ್...!

09:44 AM Feb 09, 2024 IST | suddionenews
Advertisement

ಬೆಂಗಳೂರು : ಲವ್ ಸ್ಟೋರಿಗಳು ಎಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಸಣ್ಣ ಎಳೆಯನ್ನ ಚಂದವಾಗಿ ಎಣೆದಾಗ ಮನಸ್ಸಿಗೆ ಮುದ ನೀಡುವುದರಲ್ಲಿ ನೋ ಡೌಟ್. ಅಂಥ ಬ್ಯೂಟಿಫುಲ್ ಲವ್ ಸ್ಟೋರಿಯೊಂದು 'ಸಾರಾಂಶ'ವಾಗಿ ತೆರೆಗೆ ಬರುತ್ತಿದೆ. ಅದಕ್ಕೂ ಮುನ್ನ ಹಾಡುಗಳ ಮೂಲಕವೇ ಮೋಡಿ ಮಾಡುತ್ತಿದೆ.

Advertisement

 

Advertisement

ಸಾರಾಂಶ ಚಿತ್ರದ ಕಥೆ ಏನೆಂಬುದರ ಸುತ್ತ ಕುತೂಹಲವಂತು ಮೂಡಿದೆ. ಜೊತೆಗೆ ಅಲ್ಲೊಂದು ಚೆಂದದ ಪ್ರೇಮ ಕಥೆಯೂ ಇದೆ ಎಂಬುದರ ಸ್ಪಷ್ಟ ಸೂಚನೆ ಈ ಹಾಡಿನ ಮೂಲಕ ಸಿಕ್ಕಿದೆ.
ಇದುವರೆಗೂ ಧಾರಾವಾಹಿ, ಸಿನಿಮಾಗಳ ಮೂಲಕ ನಟರಾಗಿದ್ದ ಸೂರ್ಯ ವಸಿಷ್ಠ `ಸಾರಾಂಶ’ದ ಮೂಲಕ ನಿರ್ದೇಶಕರಾಗಿಯೂ ಬಂದಿದ್ದಾರೆ.

`ಸಾರಾಂಶ’ ಚಿತ್ರದ ಹಾಡುಗಳು ಈಗಾಗಲೇ ಗೆದ್ದಿವೆ. ಇಂಥಾ ಹಾಡಿನ ಮೂಲಕವೇ ಒಂದಿಡೀ ಸಿನಿಮಾದ ಆಂತರ್ಯದ ಬಗ್ಗೆ ಕುತೂಹಲವೂ ಮೂಡಿಕೊಂಡಿದೆ. ಮೆಲುವಾಗಿ ತೇಲಿ ಬಂದು ನಾನಾ ಭಾವನೆಗಳನ್ನು ಮೊಗೆದು ತಂದು ಮನಸಿಗೆ ತುಂಬುವ ಶೈಲಿಯಲ್ಲಿ ಸಂಗೀತ ನಿರ್ದೇಶಕ ಉದಿತ್ ಹರಿತಾಸ್ ಅಕ್ಷರಶಃ ಮೋಡಿ ಮಾಡಿದ್ದಾರೆ. ಇದೀಗ ನಿರ್ದೇಶಕ ಸೂರ್ಯ ವಸಿಷ್ಠ ಹಾಗೂ ಉದಿತ್ ಸಹಯೋಗದ ಮತ್ತೊಂದು ಮೆಲೋಡಿಯಸ್ ಹಾಡು ಬಿಡುಗಡೆಗೊಂಡಿದೆ.

ತೀರದಾಚೆಗೆ ಹಾರಿ ಹೋಗುವಾಸೆ ಅಂತ ಶುರುವಾಗುವ ಈ ಹಾಡು ಸಾಹಿತ್ಯ ಸಂಗೀತದ ಹದವಾದ ಸಂಯೋಗದೊಂದಿಗೆ ಹೊಸಾ ಅನುಭೂತಿಯೊಂದನ್ನು ಪಸರಿಸುವಂತೆ ಮೂಡಿ ಬಂದಿದೆ. ಬಿಡುಗಡೆಯಾಗಿರುವ ಹಾಡಿನಲ್ಲಿ ಸೂರ್ಯ ನಿಭಾಯಿಸಿರುವ ಪಾತ್ರದ ಚಹರೆಗಳು ನಿಚ್ಛಳವಾಗಿ ಕಾಣಿಸಿವೆ. ಸೂರ್ಯ ವಸಿಷ್ಠ ಹಾಗೂ ಶೃತಿ ಹರಿಹರನ್ ಕಾಂಬಿನೇಷನ್ನಿನ ಸದರಿ ಹಾಡು ಸಾರಾಂಶದ ದೃಷ್ಯಗಳ ಅಸಲೀ ಮೋಡಿಯ ಪರಿಚಯವನ್ನೂ ಮಾಡಿಸಿದೆ.

ನಿರ್ದೇಶಕ ಸೂರ್ಯ ವಸಿಷ್ಠ ಬರೆದಿರುವ ಸಾಹಿತ್ಯಕ್ಕೆ ಪಂಚಮ್ ಜೀವ ಧ್ವನಿಯಾಗಿದ್ದಾರೆ. ಹೀಗೆ ಹಾಡುಗಳೂ ಸೇರಿದಂತೆ ನಾನಾ ಬಗೆಯಲ್ಲಿ ಸುದ್ದಿಯಲ್ಲಿರುವ ಸಾರಾಂಶ ಇದೇ ಫೆಬ್ರವರಿ 15ರಂದು ತೆರೆಗಾಣಲಿದೆ. ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಉದಿತ್ ಹರಿತಾಸ್ ಸಂಗೀತ ನಿರ್ದೇಶನ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ಸಾರಾಂಶದ ಮೂಲಕ ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕ ಪರಿಚಯವಾಗುತ್ತಿದ್ದಾರೆ.

Advertisement
Tags :
#SaramshabengaluruSruthiHariharansuddionesuddione newsSuryaVasishtaTheeradacheSongOutNowಬೆಂಗಳೂರುವಿಡಿಯೋ ಸಾಂಗ್ಶೃತಿ ಹರಿಹರನ್ಶೌರ್ಯ ವಶಿಷ್ಠಸಂಸ್ಕಾರಸಾರಾಂಶಸುದ್ದಿಒನ್ಸುದ್ದಿಒನ್ ನ್ಯೂಸ್ಹಾಡು
Advertisement
Next Article