For the best experience, open
https://m.suddione.com
on your mobile browser.
Advertisement

ಏಪ್ರಿಲ್ ಮೊದಲ ವಾರದಲ್ಲೇ ರಂಜಿಸಲಿದೆ 'ಮ್ಯಾಟ್ನಿ'

05:59 PM Mar 11, 2024 IST | suddionenews
ಏಪ್ರಿಲ್ ಮೊದಲ ವಾರದಲ್ಲೇ ರಂಜಿಸಲಿದೆ  ಮ್ಯಾಟ್ನಿ
Advertisement

ಅಯೋಗ್ಯ ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲಿದ ಜೋಡಿ ಮತ್ತೆ ಒಂದಾಗಿದೆ. ಮ್ಯಾಟ್ನಿ ಮೂಲಕ ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಮತ್ತೆ ತೆರೆಮೇಲೆ ಬರುತ್ತಿದ್ದಾರೆ. ಏನಮ್ಮಿ ಏನಮ್ಮಿ ಅಂತ ಮೋಡಿ ಮಾಡಿದ್ದವರು, ಮ್ಯಾಟ್ನಿ ಮೂಲಕ ಅದೇ ರೀತಿಯ ಗುಂಗಲ್ಲಿ ತೇಲಿಸುವುದಕ್ಕೆ ರೆಡಿಯಾಗಿದ್ದಾರೆ. ಚಂದನವನದ ಬಹುನಿರೀಕ್ಷಿತ ಸಿನಿಮಾ ಮ್ಯಾಟ್ನಿ ಎಂದರೆ ತಪ್ಪಾಗಲಾರದು. ಸದ್ಯ ರಿಲೀಸ್ ಗೆ ರೆಡಿ ಇದ್ದು, ಏಪ್ರಿಲ್ ಮೊದಲ ವಾರದಲ್ಲಿ ಬರುವ ನಿರೀಕ್ಷೆ ಇದೆ.

Advertisement

Advertisement

ಗಾಂಧಿ ನಗರದಲ್ಲಿ ಸದ್ಯಕ್ಕೆ ಗುಲ್ಲೆದ್ದಿರುವ ವಿಚಾರಗಳನ್ನಾಧರಿಸಿ ಹೇಳೋದಾದರೆ, ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮ್ಯಾಟ್ನಿ ತೆರೆಗಾಣುವ ಸಾಧ್ಯತೆಗಳಿವೆ. ಮನೋಹರ್ ಕಾಂಪಲ್ಲಿ ನಿರ್ದೇಶನದಲ್ಲಿ, f3 ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಮೂಡಿ ಬಂದಿರುವ ಮ್ಯಾಟ್ನಿ ಆರಂಭದಿಂದ ಇಲ್ಲಿಯವರೆಗೂ ಪ್ರೇಕ್ಷಕರ ಆಸಕ್ತಿ ಸೆಳೆಯುತ್ತಾ ಸಾಗಿ ಬಂದಿದೆ. ಹಂತ ಹಂತವಾಗಿ ಒಂದಿಷ್ಟು ವಿಚಾರಗಳನ್ನು ತಲುಪಿಸುತ್ತಾ ಬಂದಿರುವ ಈ ಚಿತ್ರವೀಗ ಬಿಡುಗಡೆಯ ಅಂಚಿಗೆ ಬಂದು ನಿಂತಿದೆ. ಸದ್ದೇ ಇಲ್ಲದಂತೆ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿಸಿಕೊಂಡಿರುವ ಮ್ಯಾಟ್ನಿಯ ಪ್ರಚಾರ ಕಾರ್ಯವೂ ಚಾಲೂ ಆಗುವ ಲಕ್ಷಣಗಳು ಕಾಣಿಸುತ್ತಿವೆ.

Advertisement

Advertisement
Advertisement

ಇತ್ತೀಚಿನ ವರ್ಷಗಳಲ್ಲಿ ವಿಶೇಷವಾದ, ಒಂದಕ್ಕೊಂದು ಭಿನ್ನವಾದ ಪಾತ್ರಗಳನ್ನೇ ನೀನಾಸಂ ಸತೀಶ್ ಒಪ್ಪಿಕೊಳ್ಳುತ್ತಾ ಬರುತ್ತಿದ್ದಾರೆ. ಅದರ ಭಾಗವೆಂಬಂತೆ ಕಾಣಿಸುತ್ತಿರುವ ಮ್ಯಾಟ್ನಿ ಮನಮೋಹಕ ಕಥೆಯ ಹೂರಣದೊಂದಿಗೆ ರೂಪಿಸಲ್ಪಟ್ಟಿದೆ ಎಂಬ ವಿಚಾರ ಕೂಡಾ ಈಗಾಗಲೇ ನಿಕ್ಕಿಯಾಗಿದೆ. ಒಂದು ಯಶಸ್ವೀ ಜೋಡಿ ಮತ್ತೊಂದು ಸಿನಿಮಾದಲ್ಲಿಯೂ ಜೊತೆಯಾದಾಗ ಸಹಜವಾಗಿಯೇ ಅದರತ್ತ ಒಂದಷ್ಟು ಕುತೂಹಲ ಮೂಡಿಕೊಳ್ಳುತ್ತೆ. ಅದರ ಜೊತೆ ಜೊತೆಗೇ ಮ್ಯಾಟ್ನಿ ತೆರೆಗಾಣೋದು ಯಾವಾಗ ಅಂತೊಂದು ಪ್ರಶ್ನೆ ಮೂಡಿಕೊಂಡಿತ್ತು. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಮೇಲ್ಕಂಡ ಸುದ್ದಿ ಅದಕ್ಕೆ ಉತ್ತರವೆಂಬಂತಿದೆ!

Tags :
Advertisement