Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಹಿಷಾ ದಸರಾಗೆ ಭಾರೀ ವಿರೋಧ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

06:42 PM Oct 07, 2023 IST | suddionenews
Advertisement

 

Advertisement

ಮೈಸೂರು: ನಾಡಹಬ್ಬ ದಸರಾಕ್ಕೆ ಈಗಿನಿಂದಾನೇ ತಯಾರಿ ಶುರುವಾಗಿದೆ. ಇದರ‌ ನಡುವೆ ಮಹಿಷಾ‌ ದಸರಾ ಬಗ್ಗೆ ಚರ್ಚೆ ಶುರುವಾಗಿದೆ. ಅದರಲ್ಲೂ ಮಹಿಷಾ ದಸರಾಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ನಾವೂ ಈ ಹಿಂದೆಯೂ ಮಹಿಷಾ ದಸರಾ ಮಾಡಿಲ್ಲ, ಈಗಲೂ ಸರ್ಕಾರದಿಂದ ಆಯೋಜನೆ‌ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿಎಂ, ಯಾರೋ ಒಂದಿಷ್ಟು ಮಂದಿ ಹಿಂದಿನಿಂದಾನೂ ಮಹಿಷಾ ದಸರಾವನ್ನು ಮಾಡುತ್ತಿದ್ದಾರೆ. ಆದರೆ ಚಾಮುಂಡಿ ಬೆಟ್ಟದಲ್ಲಿ ಯಾವತ್ತು ಮಾಡಿಲ್ಲ. ಈ ವಿಚಾರದಲ್ಲಿ ಜಿಲ್ಲಾಡಳಿತವೇ ತೀರ್ಮಾನ ತೆಗೆದುಕೊಳ್ಳಬೇಕು‌ ಎಂದಿದ್ದಾರೆ. ಇತ್ತಿಚೆಗಷ್ಟೇ ಈ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಕೂಡ ಹೌಹಾರಿದ್ದರು. ಒಂದು ರೌಂಡ್ ಮೈಸೂರು ತಿರುಗಿ ನೋಡಿ, ಮಹಿಷಾಸುರನನ್ನು ಪೂಜಿಸುತ್ತಿದ್ದವರು, ಈಗ ಚಾಮುಂಡಿಯನ್ನು ಪೂಜಿಸುತ್ತಿದ್ದಾರೆ ಎಂದಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಕೂಡ ಸ್ಪಷ್ಟಪಡಿಸಿದ್ದಾರೆ.

Advertisement

ಇನ್ನು ಇದೇ ವೇಳೆ ಬಾರ್ ಲೈಸೆನ್ಸ್ ಬಗ್ಗೆಯೂ ಮಾತನಾಡಿದ್ದು, ಡಿಕೆ ಶಿವಕುಮಾರ್ ಅವರು ಎಲ್ಲಿಯೂ ಹೊಸ ಲೈಸೆನ್ಸ್ ಕೊಡುವ ಬಗ್ಗೆ ಹೇಳಿಲ್ಲ. ಸದ್ಯಕ್ಕೆ ಅದರ ಚರ್ಚೆಗಳು ಬೇಡ. ಜನರ ಭಾವನೆಗಳನ್ನು ಕೇಳಬೇಕು. ಗೌರವಿಸಬೇಕು ಕೂಡ. ನಾನು ಸ್ಪಷ್ಟವಾಗಿ ಹೇಳುತ್ತೇನೆ. ಹೊಸ ಲೈಸೆನ್ಸ್ ಗಳನ್ನು ನೀಡುತ್ತಿಲ್ಲ ಎಂದೇ ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ.

Advertisement
Tags :
bengaluruCM SiddaramaiahfeaturedMahisha Dussehramysurusuddioneಬೆಂಗಳೂರುಮಹಿಷಾ ದಸರಾಮೈಸೂರುವಿರೋಧಸಿಎಂ ಸಿದ್ದರಾಮಯ್ಯಸುದ್ದಿಒನ್
Advertisement
Next Article