Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಇಂದು ಮಂಡ್ಯ, ಕೆರಗೋಡು ಬಂದ್ : ಬಿಗಿ ಪೊಲೀಸ್ ಭದ್ರತೆ

12:27 PM Feb 09, 2024 IST | suddionenews
Advertisement

ಮಂಡ್ಯ: ಹನುಮ ದ್ವಜ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಇಂದು ಮಂಡ್ಯ ಹಾಗೂ ಕೆರಗೋಡು ಗ್ರಾಮವನ್ನು ಬಂದ್ ಮಾಡಲಾಗಿದೆ. ನೂರಾರು ಹಿಂದೂಪರ ಕಾರ್ಯಕರ್ತರಿಂದ ಬೈಕ್ ರ್ಯಾಲಿಯೂ ನಡೆಯಲಿದೆ. ಗ್ರಾಮದ ಆಂಜನೇಯ ದೇವಸ್ಥಾದಿಂದ ಬೈಕ್ ರ್ಯಾಲಿ ನಡೆಯಲಿದೆ.

Advertisement

 

ಕೆರಗೋಡು, ಹುಲಿವಾಹನ, ಸಾತನೂರು, ಚಿಕ್ಕಮಂಡ್ಯ ಮೂಲಕ ರ್ಯಾಲಿ ನಡೆಯಲಿದೆ. ಆಂಜನೇಯ ಸ್ವಾಮಿ ದೇವಾಲಯದ ತನಕ ರ್ಯಾಲಿ ನಡೆಯಲಿದ್ದು, ಬಳಿಕ ಡಿಸಿ ಕಚೇರುಗೆ ಪಾದಯಾತ್ರೆ ಸಾಗಲಿದೆ. ಪಾದಯಾತ್ರೆಯಲ್ಲಿ ಹಿಂದೂಪರ ಸಂಘಟನೆಗಳು, ಕಾರ್ಯಕರ್ತರು, ಬಿಜೆಪಿ ನಾಯಕರು, ಮುಖಂಡರು ಕೂಡ ಭಾಗಿಯಾಗಲಿದ್ದಾರೆ.

Advertisement

ಗ್ರಾಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಬಾರದು ಎಂಬ ಕಾರಣಕ್ಕೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಎಲ್ಲಾ ಕಡೆ ಪೊಲೀಸರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ವಾತಾವರಣ ಶಾಂತವಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ರ್ಯಾಲಿ ಶುರುವಾಗಲಿದೆ. ಹನುಮ ಧ್ವಜ ತೆರವುಗೊಳಿಸಿದ ಪ್ರಕರಣ ಇನ್ನು ತಿಳಿಯಾದಂತೆ ಕಾಣುತ್ತಿಲ್ಲ.

Advertisement
Tags :
keragodu bandhmandyatight police securityಕೆರಗೋಡು ಬಂದ್ಪೊಲೀಸ್ ಭದ್ರತೆಮಂಡ್ಯ
Advertisement
Next Article