ಮಧ್ಯಪ್ರದೇಶ ಎಕ್ಸಿಟ್ ಪೋಲ್ 2023 : ಮತದಾರರ ಒಲವು ಯಾರ ಪರ ?
ಸುದ್ದಿಒನ್, ಭೋಪಾಲ್: ದೇಶದ ಐದು ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಈ ತಿಂಗಳು (ನವೆಂಬರ್‌ನಲ್ಲಿ) ವಿವಿಧ ಹಂತಗಳಲ್ಲಿ ಮತದಾನ ಮುಗಿದಿದೆ. ಎಲ್ಲ ರಾಜ್ಯಗಳ ಮತದಾನದ ನಂತರ ಯಾವ ರಾಜ್ಯದಲ್ಲಿ ಯಾವ ಪಕ್ಷ ಗೆಲುವು ಸಾಧಿಸಲಿದೆ ಎಂಬ ಕುತೂಹಲ ಮೂಡಿದೆ.
ಈ ನಿಟ್ಟಿನಲ್ಲಿ ಎಲ್ಲರ ಕಣ್ಣುಗಳು ಎಕ್ಸಿಟ್ ಪೋಲ್‌ಗಳತ್ತ ನೆಟ್ಟಿದೆ. ಚುನಾವಣಾ ಫಲಿತಾಂಶಗಳನ್ನು ಊಹಿಸಲು ಸಮೀಕ್ಷೆ ಏಜೆನ್ಸಿಗಳು ಎಕ್ಸಿಟ್ ಪೋಲ್‌ಗಳನ್ನು ನಡೆಸುತ್ತವೆ.
ಆದರೆ ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ಒಂದೇ ಹಂತದಲ್ಲಿ 230 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿತ್ತು. ಸದ್ಯ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿಗೆ ಕಾಂಗ್ರೆಸ್ ಪ್ರಮುಖ ಪ್ರತಿಸ್ಪರ್ಧಿ. ಇವುಗಳ ಜೊತೆಗೆ ಆಮ್ ಆದ್ಮಿ ಪಕ್ಷ (ಎಎಪಿ), ಸಮಾಜವಾದಿ ಪಕ್ಷ (ಎಸ್‌ಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಗೊಂಡ್ವಾನಾ ಗಂತಂತ್ರ ಪಕ್ಷ (ಜಿಜಿಪಿ) ಸ್ಪರ್ಧೆಯಲ್ಲಿವೆ.
ಮಧ್ಯಪ್ರದೇಶ ಚುನಾವಣೆ ಬಗ್ಗೆ ಎಕ್ಸಿಟ್ ಪೋಲ್‌ಗಳು ಏನು ಹೇಳುತ್ತಿವೆ ?
ಚುನಾವಣೋತ್ತರ ಸಮೀಕ್ಷೆಯಿಂದ ನಿಖರವಾದ ಫಲಿತಾಂಶವಲ್ಲದೇ ಇದ್ದರೂ ಅಂದಾಜು ಉದ್ದೇಶಗಳಿಗಾಗಿ ಮಾತ್ರ ನಿರ್ವಹಿಸಲಾಗುತ್ತದೆ. ಏಕೆಂದರೆ ನಿಜವಾದ ಅಂಕಿಅಂಶಗಳು ಅಂದಾಜು ಮಾಡಿದ ಅಂಕಿಗಳಿಗಿಂತ ತುಂಬಾ ಭಿನ್ನವಾಗಿರಬಹುದು.
ಸಮೀಕ್ಷೆ ಏಜೆನ್ಸಿ ಕೇಳಿದಾಗ ಮತದಾರನು ಮತ ಹಾಕಿದ ಅಭ್ಯರ್ಥಿಯ ಹೆಸರನ್ನು ಬಹಿರಂಗಪಡಿಸದಿರಬಹುದು. ಬೇರೆ ಹೆಸರನ್ನು ನೀಡಬಹುದು. ವಿವಿಧ ಏಜೆನ್ಸಿಗಳು ವಿಭಿನ್ನ ಉತ್ತರಗಳನ್ನು ನೀಡಬಹುದು.
ಒಟ್ಟು ಸ್ಥಾನಗಳು -230
ಪೀಪಲ್ಸ್ ಪಲ್ಸ್ ಸಮೀಕ್ಷೆ
ಕಾಂಗ್ರೆಸ್- 117 ರಿಂದ 139
ಬಿಜೆಪಿ -91 ರಿಂದ 113
ಇತರೆ - 0 ರಿಂದ 8
ನ್ಯೂಸ್ 18 ಸಮೀಕ್ಷೆ
ಬಿಜೆಪಿ -112
ಕಾಂಗ್ರೆಸ್ - 113
ಇತರೆ - 5
CNN ಸಮೀಕ್ಷೆ
ಬಿಜೆಪಿ-116
ಕಾಂಗ್ರೆಸ್-111
ಇತರೆ-3
ಜನ್ ಕಿ ಬಾತ್ ಸಮೀಕ್ಷೆ
ಬಿಜೆಪಿ - 100-123
ಕಾಂಗ್ರೆಸ್ - 102-125
ಇತರೆ- 05
ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್
ಬಿಜೆಪಿ- 118-130
ಕಾಂಗ್ರೆಸ್- 97-107
ಇತರೆ -0-2
ಪೋಲ್ ಸ್ಟಾರ್ಸ್
ಬಿಜೆಪಿ - 106-116
ಕಾಂಗ್ರೆಸ್ - 111-121
ಇತರೆ - 0-6
ದೈನಿಕ್ ಭಾಸ್ಕರ್
ಬಿಜೆಪಿ- 95-115
ಕಾಂಗ್ರೆಸ್ -105-120
ನ್ಯೂಸ್ 24-ಟುಡೇಸ್ ಚಾಣಕ್ಯ
ಬಿಜೆಪಿ -151
ಕಾಂಗ್ರೆಸ್ -74