ಅರ್ಜುನನ ಸಾವಿಗೆ ಕಂಬನಿಮಿಡಿದ ಚಿತ್ರದುರ್ಗದ ಮದಕರಿ ಬಳಗ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಡಿ.05
ನಿನ್ನೆ ನಿಧನವಾದ ಅರ್ಜನ (ಆನೆ)ಗೆ ಸಂತಾಪವನ್ನು ಸೂಚಿಸುವ ಕಾರ್ಯಕ್ರಮವೊಂದು ಚಿತ್ರದುರ್ಗ ನಗರದ ಮದಕರಿ ಬಳಗದವತಿಯಿಂದ ನಗರದ ಓನಕೆ ಒಬವ್ವ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರು ಸಹಾ ಅರ್ಜನ್ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವುದರ ಮೂಲಕ ಶ್ರದ್ದಾಂಜಲಿಯನ್ನು ಅರ್ಪಿಸಿ ಸಂತಾಪವನ್ನು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆಯ ಮಾಜಿ ಅಧ್ಯಕ್ಷರು, ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷರಾದ ಬಿ.ಕಾಂತರಾಜ್ ಅರ್ಜನನ್ನು ಕಳೆದುಕೊಂಡಿದ್ದು ನಮಗೆ ಆಪಾರವಾದ ದುಃಖವಾಗಿದೆ. ಸುಮಾರು 64 ವರ್ಷಗಳ ಕಾಲ ಬದುಕಿದ್ದು ಈ ಸಮಯದಲ್ಲಿ ಹಲವಾರು ಭಾರಿ ಮೈಸೂರಿನ ಅಂಬಾರಿಯನ್ನು ಹೊರುವುದರ ಮೂಲಕ ಧಾಖಲೆಯನ್ನು ಮಾಡಿ ನಾಡಿನ ವ್ಥಭವವನ್ನು ಮೆರಗುವನ್ನು ಗೂಳಿಸಿತ್ತು ಇನ್ನೂ ಹಲವಾರು ವರ್ಷ ಅದು ಬಾಳುತ್ತಿತು ಆದರೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಜನ್ ಸಾವನ್ನಪ್ಪಿದೆ ಎಂದರು.
ಈ ಹಿಂದೆ ಪುನೀತ್ ರಾಜಕುಮಾರ್‍ರವರ ಸಾವನ್ನು ಯಾವ ರೀತಿ ಕರ್ನಾಟಕದ ಜನತೆ ಮೌನವಾಗಿ ನುಂಗಿಕೊಂಡಿದ್ದಾರೂ ಅದೇ ರೀತಿ ಅರ್ಜನ್ ಆನೆ ಸಾವನ್ನು ಸಹಾ ಕರ್ನಾಟಕ ಜನತೆ ಮೌನವಾಗಿಯೇ ನುಂಗಿಕೊಂಡು ಸಂತಾಪವನ್ನು ಸೂಚಿಸಿದ್ದಾರೆ.
ಅರ್ಜನ ಕರ್ನಾಟಕದ ಅತ್ಯಂತ ಪ್ರೀತಿಗೆ ಪಾತ್ರವಾದ ಪ್ರಾಣಿಯಾಗಿತ್ತು. ಇದನ್ನು ಕಳೆದು ಕೊಂಡಿರುವುದು ದುಃಖಕರವಾದ ಸಂಗತಿಯಾಗಿದೆ ಅದು ಶತಾಯಿಷಿಯಾಗುವ ಹಂತದಲ್ಲಿತ್ತು ಆದರೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಜನ್ ಸಾವನ್ನಪ್ಪಿದೆ ಮೆಲೋಟಕ್ಕೆ ಗೂತ್ತಾಗುತ್ತದೆ ಎಂದ ಅವರು, 64 ವರ್ಷದ ಆರ್ಜನನ್ನು 18 ವರ್ಷದ ಆನೆಯ ಜೊತೆಗೆ ಸೆಣಸಾಟದ ಜೊತೆಗೆ ಬಿಟ್ಟಿದ್ದು ಇದರ ಸಾವಿಗೆ ಕಾರಣವಾಗಿದೆ. ಇದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಇದನ್ನು ಕಳೆದಕೊಂಡಿರುವ ಎಲ್ಲರಿಗೂ ಸಹಾ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಅದೇ ರೀತಿ ಅರ್ಜನನ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದರು.
ಕಾರ್ಯಕ್ರಮದಲ್ಲಿ ಮದಕರಿ ಬಳಗದ ಗೋಪಾಲಸ್ವಾಮಿ ನಾಯಕ್, ಕಾಂಗ್ರೆಸ್ ಮುಖಂಡರಾದ ಅಂಜಿನಪ್ಪ, ನಗರಸಭಾ ಸದಸ್ಯರಾದ ದೀಪು, ಮಾಜಿ ಸದಸ್ಯರಾದ ತಿಪ್ಪೇಸ್ವಾಮಿ, ಪರಮೇಶ್ವರಪ್ಪ, ಈಶ್ವರ್, ಕೇಶವ, ಅನಿಲ್ ಕುಮಾರ್, ಆರುಣ್, ಹರೀಶ್ ಕುಮಾರ್, ನಾಗರಾಜ್, ಚೇತನ ಪವನ ಕುಮಾರ್, ಸತೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.