For the best experience, open
https://m.suddione.com
on your mobile browser.
Advertisement

ಲೋಕಸಭಾ ಚುನಾವಣೆ : ಏ‌2ಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ನಿರ್ಧಾರ

06:49 PM Mar 27, 2024 IST | suddionenews
ಲೋಕಸಭಾ ಚುನಾವಣೆ   ಏ‌2ಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ನಿರ್ಧಾರ
Advertisement

ಹುಬ್ಬಳ್ಳಿ: ಧಾರಾವಾಡ ಕ್ಷೇತ್ರದಿಂದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನು ಬದಲಾವಣೆ ಮಾಡಿ ಎಂಬ ಒತ್ತಾಯ ಕೇಳಿ ಬರುತ್ತಿದೆ. ಉತ್ತರ ಪ್ರದೇಶದ ಮಾದರಿಯಂತೆ ಧಾರವಾಡದಲ್ಲಿ ಶಿರಹಟ್ಟಿ ಮಠದ ಪಕೀರ ದಿಂಗಾಲೇಶ್ವರ ಸ್ವಾಮೀಜಿಯನ್ನು ಕಣಕ್ಕಿಳಿಸುವಂತೆ ಮನವಿ ಕೂಡ ಮಾಡಲಾಗಿದೆ. ಈ ಸಂಬಂ್ದ ಇಂದು 80ಕ್ಕೂ ಹೆಚ್ಚು ಮಾಠಾಧೀಶರ ಸಮ್ಮುಖದಲ್ಲು ಮಹತ್ವದ ಸಭೆಯನ್ನು ಮೂರು ಸಾವುರ ಮಠದಲ್ಲಿ ನಡೆಸಲಾಗಿದೆ.

Advertisement
Advertisement

ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಿವೆ. ಅದರಲ್ಲಿಧಾರವಾಡ ಲಿಂಗಾಯತ ಮತ ವಿಭಜನೆ, ಧಾರ್ಮಿಕವಾಗಿ ವೀರಶೈವ ಲಿಂಗಾಯತರ ಅವನತಿ ಆಗುತ್ತಿರುವ ಬಗ್ಗೆ ಹಲವು ವಿಚಾರಗಳು ಕುರಿತು ಶ್ರೀಗಳು ಚರ್ಚೆ ನಡೆಸಿದ್ದಾರೆ. ಈ ವೇಳೆ ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕೆಂದು ಒತ್ತಡ ಕೇಳಿ ಬಂದುದೆ. ಮಾರ್ಚ್31ರ ಒಳಗೆ ಧಾರವಾಡ ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕು. ಈ ಬಗ್ಗೆ ಬಿಜೆಪಿ ಮನವಿ ಮಾಡಲಾಗುವುದು. ಒಂದು ವೇಳೆ ಮಾಡದಿದ್ದರೆ ಏಪ್ರಿಲ್ 2ರಂದು ದಿಂಗಾಲೇಶ್ವರ ಶ್ರೀಗಳ ಕಣಕ್ಕಿಳಿಸುವ ಕುರಿತು ನಿರ್ಧಾರ ಮಾಡಲಾಗುತ್ತದೆ ಎಂಬುದಾಗಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

Advertisement

ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಕಣಕ್ಕೆ ಇಳಿಸಬೇಕೋ ಬೇಡವೋ ಎಂಬುದರ ಬಗ್ಗೆ ಮಠಾಧೀಶರಿಂದ ಸಲಹೆ ಪಡೆಯಲಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ ಪ್ರಹ್ಲಾದ್ ಜೋಶಿ ವಿರುದ್ಧ ಕಣಕ್ಕೆ ಇಳಿಸುವುದು, ಲಿಂಗಾಯತ ಮತ ವಿಭಜನೆಯಿಂದ ಆಗುವ ಹಾನಿ ಲಾಭ ಕುರಿತು ಮಠಾಧೀಶರು ಚರ್ಚೆ ನಡೆಸಿದ್ದಾರೆ.

Advertisement
Advertisement

Advertisement
Tags :
Advertisement