Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಲೋಕಸಭಾ ಚುನಾವಣೆ: ಯದುವೀರ್ ಅವರನ್ನು ಟೀಕಿಸದಂತೆ ಸಿಎಂ ಕಿವಿಮಾತು

02:09 PM Mar 16, 2024 IST | suddionenews
Advertisement

ಮೈಸೂರು: ಲೋಕಸಭಾ ಚುನಾವಣೆಗೆ ಇಂದು ದಿನಾಂಕ ಅನೌನ್ಸ್ ಆಗಲಿದೆ. ಅದಕ್ಕೂ ಮುನ್ನ ಕಾಂಗ್ರೆಸ್ - ಬಿಜೆಪಿ ಕೆಲವು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಅದರಲ್ಲೂ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಕಾಂಗ್ರೆಸ್ ಪಕ್ಷದಿಂದ ಇನ್ನು ಅಭ್ಯರ್ಥಿಯ ಘೋಷಣೆಯಾಗಿಲ್ಲ.

Advertisement

ಚುನಾವಣೆ ಎಂದಾಗ ಯಾವುದೇ ಪಕ್ಷವಾಗಲಿ ಎದುರಾಳಿಗೆ ಮಾತಿನ ಮೂಲಕ ಚಾಟಿ ಬೀಸುತ್ತಾರೆ. ಆದರೆ ಈಗ ಸಿಎಂ ಸಿದ್ದರಾಮಯ್ಯ ಅವರು ಯದುವೀರ್ ಅವರ ವಿಚಾರವಾಗಿ ಒಂದು ಕಿವಿ ಮಾತು ಹೇಳಿದ್ದಾರೆ. ತಮ್ಮ ಪಕ್ಷದವರಿಗೆ ಈ ಬಗ್ಗೆ ತಿಳಿಸಿ ಹೇಳಿದ್ದಾರೆ. ಯಾವುದರೆ ಕಾರಣಕ್ಕೂ ಯದುವೀರ್ ಅವರನ್ನು ನಿಂದಿಸಬಾರದು ಎಂದಿದ್ದಾರೆ.

'ಬಿಜೆಪಿ ವಿರುದ್ಧ ಮಾತನಾಡಿ. ಆದರೆ ಯದುವೀರ್ ಅವರ ವಿರುದ್ಧ ಮಾತನಾಡಬೇಡಿ. ಯದುವಂಶದ ಬಗ್ಗೆ ಮೈಸೂರು ಭಾಗದಲ್ಲಿ ಭಾವನಾತ್ಮಕ ಸಂಬಂಧವಿದೆ. ಅವರ ಬಗ್ಗೆ ಮಾತನಾಡಿದರೆ ನಮ್ಮ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ಸರ್ಕಾರದ ಗ್ಯಾರಂಟಿಗಳು, ಬಿಜೆಪಿ ಹೇಳಿರುವ ಸುಳ್ಳುಗಳ ಮೇಲೆ ಪ್ರಚಾರ ಮಾಡಿ. ಯದುವೀರ್ ವಿಚಾರಕ್ಕೆ ಅಪ್ಪಿತಪ್ಪಿಯೂ ಹೋಗಬೇಡಿ. ಯದುವೀರ್ ವಿಚಾರದಲ್ಲಿ ಟೀಕೆ ಮಾಡಿದರೆ ಅದರ ಎಫೆಕ್ಟ್ ಮೈಸೂರು ಮಾತ್ರವಲ್ಲ ಬೇರೆ ಕ್ಷೇತ್ರದ ಮೇಲೂ ಆಗುತ್ತೆ ಎಚ್ಚರ ಇರಲಿ ಎಂದು ತಮ್ಮ ಪಕ್ಷದವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Advertisement

ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡುವಾಗ ಬಿಜೆಪಿಯನ್ನು ಟೀಕಿಸುವ ಬರದಲ್ಲಿ ಅಲ್ಲಿನ ಅಭ್ಯರ್ಥಿಯನ್ನು ಟೀಕಿಸಿ ಬಿಡುತ್ತಾರೆ. ಹೀಗಾಗಿ ಮೊದಲೇ ಅಲರ್ಟ್ ಆದ ಸಿಎಂ ಸಿದ್ದರಾಮಯ್ಯ ಅವರು ಯದುವಂಶದ ಬಗ್ಗೆ ಯಾವುದೇ ರೀತಿಯ ಮಾತುಗಳನ್ನು ಆಡಬೇಡಿ ಎಂದೇ ಸೂಚನೆ ನೀಡಿದ್ದಾರೆ.

Advertisement
Tags :
2024 Lok Sabha electionsCM Siddaramaiahmysoreyaduveer krishnadattaಮೈಸೂರುಯದುವೀರ್ಲೋಕಸಭಾ ಚುನಾವಣೆಸಿಎಂ ಕಿವಿಮಾತು
Advertisement
Next Article