Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬೆಂಗಳೂರಿನಲ್ಲಿ ಸೆರೆ ಸಿಕ್ಕ ಚಿರತೆ ; ನಿಟ್ಟುಸಿರು ಬಿಟ್ಟ ಜನತೆ

06:45 PM Nov 01, 2023 IST | suddionenews
Advertisement

ಬೆಂಗಳೂರು : ಕಳೆದ ಮೂರು ದಿನಗಳಿಂದ ಚಿರತೆಯೊಂದು ಬೆಂಗಳೂರಿನ ಜನಕ್ಕೆ ಆತಂಕವನ್ನೆ ತಂದೊಡ್ಡಿತ್ತು. ಜನ ಓಡಾಡುವುದಕ್ಕೂ ಭಯ ಪಡುತ್ತಿದ್ದರು. ಇದೀಗ ಆ ಭಯಕ್ಕೆ ಮುಕ್ತಿ ಸಿಕ್ಕಿದೆ. ಮೂರು ದಿನಗಳ ಬಳಿಕ ಚಿರತೆ ಸೆರೆಯಾಗಿದೆ. ಅರಣ್ಯಾಧಿಕಾರಿಗಳು ಚಿರತೆ ಹಿಡಿಯುವಲ್ಲಿ ಸಕ್ಸಸ್ ಆಗಿದ್ದಾರೆ.

Advertisement

 

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹೊರವಲಯದಲ್ಲಿ ಕಂಡ ಕೂಡಲೇ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಶುರು ಮಾಡಿದರು. ಸೂಕ್ಷ್ಮವಾಗಿ ಚಿರತೆಯನ್ನು ಕಂಡು ಹಿಡಿಯುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಆ ಚಿರತೆ ಕೂಡ ಅಷ್ಟು ಸುಲಭವಾಗಿ ಸಿಗಲಿಲ್ಲ. ಬೋನುಗಳನ್ನು ಹಾಕಿ ಚಿರತೆಗಾಗಿ ಅಧಿಕಾರಿಗಳು ಕಾದಿದ್ದರು‌. ಇದೀಗ ಚಿರತೆ ಸೆರೆಯಾಗಿದೆ.

Advertisement

 

ಬೋನ್ ಗಳು, ಬಲೆಗಳು ಸೇರಿದಂತೆ ಸಿಸಿಟಿವಿ ಕ್ಯಾಮಾರ ಕಣ್ಗಾವಲಲ್ಲಿ ಚಿರತೆಯ ಹುಡುಕಾಟ ಶುರು ಮಾಡಿದರು. ಡ್ರೋನ್ ಕ್ಯಾಮಾರ ಬಳಸಿದ್ದರು. ತಂತ್ರಜ್ಞಾನ ಬಳಕೆ ಸೇರಿದಂತೆ 30 ಸಿಬ್ಬಂದಿಗಳೊಂದಿಗೆ ಚಿರತೆಯ ಕಾರ್ಯಾಚರಣೆ ನಡೆದಿತ್ತು. ಸತತ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದರು.

ಕಡೆಗೂ ಇಂದು ಚಿರತೆ ಸೆರೆಯಾಗಿದೆ. ಚಿರತೆ ಹಿಡಿಯುವುದಕ್ಕೂ ಮುನ್ನ ಅರವಳಿಕೆ ಕೊಡುವುದಕ್ಕೆ ಪ್ರಯತ್ನ ನಡೆಸಲಾಗಿತ್ತು. ಆದರೆ ಆ ಸಮಯದಲ್ಲಿ ಅರವಳಿಕೆ ತಜ್ಞರಿಗೇನೆ ಚಿರತೆ ದಾಳಿ ನಡೆಸಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಎಲ್ಲಾ ರಿಸ್ಕ್ ಗಳ ನಡುವೆ ಕಡೆಗೂ ಸೆರೆ ಹಿಡಿದಿದ್ದಾರೆ. ಚಿರತೆ ಬೋನಿಗೆ ಬಿದ್ದ ಕಾರಣ, ಜನ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Advertisement
Tags :
bangalorebengalurucapturedfeaturedleopardpeoplesuddioneಚಿರತೆಜನತೆಬೆಂಗಳೂರುಸುದ್ದಿಒನ್ಸೆರೆ
Advertisement
Next Article