ಮಂಡ್ಯದಲ್ಲಿ ಕುಮಾರಸ್ವಾಮಿಗೆ ಗೆಲುವು.. ಹಾಸನದಲ್ಲಿ ಪ್ರಜ್ವಲ್ ಸೋಲು..!
ಮಂಡ್ಯ ರಣಕಣದಲ್ಲಿ ಕಳೆದ ವರ್ಷ ಸುಮಲತಾ ವಿರುದ್ಧ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದರು. ಈ ಬಾರಿ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ನಿಂದ ಸ್ಟಾರ್ ಚಂದ್ರು ನಿಂತಿದ್ದರು. ಇದೀಗ ಬಾರೀ ಮತದ ಅಂತರದಿಂದ ಕುಮಾರಸ್ವಾಮಿ ಗೆಲುವು ಕಂಡಿದ್ದಾರೆ. ಎರಡು ಲಕ್ಷ ಹಂತದ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
ಇನ್ನು ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಹೀನಾಯವಾಗಿ ಸೋಲು ಕಂಡಿದ್ದು, 25 ವರ್ಷಗಳ ಬಳಿಕ ಹಾಸನ ಕೈ ತೆಕ್ಕೆಗೆ ಸಿಕ್ಕಿದೆ. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಚುನಾವಣೆಗೂ ಎರಡು ದಿನ ಮುನ್ನ ಈ ಸುದ್ದಿ ಎಲ್ಲೆಡೆ ಹಬ್ಬಿತ್ತು. ಪ್ರಜ್ಚಲ್ ರೇವಣ್ಣ ಮತ ಹಾಕಿ ವಿದೇಶಕ್ಕೆ ಹಾರಿದ್ದರು. ರಿಸಲ್ಟ್ ಗೆ ಇನ್ನೈದು ದಿನ ಇರುವಾಗ ಬಂದು ಎಸ್ಐಟಿಗೆ ಸೆರಂಡರ್ ಆಗಿದ್ದರು. ಆದರೂ ಜನ ಪ್ರಜ್ವಲ್ ರೇವಣ್ಣ ಅವರಿಗೆ ಸೋಲು ನೀಡಿದ್ದಾರೆ.
ಆರಂಭದ ಮತ ಎಣಿಕೆ ವೇಳೆ ಪ್ರಜ್ವಲ್ ರೇವಣ್ಣ ಮುನ್ನಡೆ ಸಾಧಿಸಿದ್ದರು. ಕಾಂಗ್ರೆಸ್ ನ ಶ್ರೇಯಸ್ ಪಾಟೀಲ್ ಹಿನ್ನಡೆಯಲ್ಲಿದ್ದರು. ಆದರೆ ಇದೀಗ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಾಟೀಲ್ ಭರ್ಜರಿ ಮತದೊಂದಿಗೆ ಗೆಲುವಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಪೆನ್ ಡ್ರೈವ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ಸೇವ್ ಮಾಡಿ, ಹೆಣ್ಣುಮಕ್ಕಳ ಮರ್ಯಾದೆ ಕಳೆದ ಪ್ರಜ್ವಲ್ ರೇವಣ್ಣ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಸದ್ಯ ಪ್ರಜ್ವಲ್ ರೇವಣ್ಣ ಎಸ್ಐಟಿ ವಶದಲ್ಲಿದ್ದಾರೆ.