Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಸಿರು ಬಿಟ್ಟು ಕೇಸರಿ ಶಾಲು ಹಾಕಿದ ಕುಮಾರಸ್ವಾಮಿ.. ದೇವೇಗೌಡರು ಏನಂದ್ರು..?

06:04 PM Feb 02, 2024 IST | suddionenews
Advertisement

ಬೆಂಗಳೂರು: ಲೋಕಸಭಾ ಚುನಾವಣೆಗಾಗಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಕುಮಾರಸ್ವಾಮಿ ಅವರು ಹಿಂದುತ್ವ ಸೇರಿದಂತೆ ಬಿಜೆಪಿಗೆ ಸಂಬಂಧಪಟ್ಟ ವಿಚಾರಗಳನ್ನು ಮಾತನಾಡಿ ಸುದ್ದಿಯಾಗಿದ್ದಾರೆ. ಇದೀಗ ಕೇಸರಿ ಶಾಲು ಹಾಕಿ ಹೈಲೇಟ್ ಆಗಿದ್ದಾರೆ. ಆದರೆ ಈ ರೀತಿ ಕೇಸರಿ ಶಾಲು ಹಾಕಿದ್ದನ್ನು ಮಾಜಿ ಪ್ರಧಾನಿ ದೇವೇಗೌಡರು ವಿರೋಧಿಸಿದ್ದಾರೆ.

Advertisement

ಮಂಡ್ಯದ ಕೆರಗೋಡು ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಹನುಮ ಧ್ವಜದ ವಿಚಾರ ಇನ್ನು ತಣ್ಣಗಾಗಿಲ್ಲ. ಪ್ರತಿ ದಿನ ಪ್ರತಿಭಟನೆಗಳು ನಡೆಯುತ್ತಲೆ ಇದೆ. ಸ್ಥಳೀಯರು ಮತ್ತು ಪೊಲೀಸರ ನಡುವೆ ತಿಕ್ಕಾಟವೇ ಆಗುತ್ತಿದೆ. ಕೆರಗೋಡು ಗ್ರಾಮಕ್ಕೆ‌ ಮಾಜಿ ಸಿಎಂ ಕುಮಾರಸ್ವಾಮಿ ಅವರು ಭೇಟಿ ನೀಡಿದ್ದರು. ಬಿಜೆಪಿ ಪ್ರತಿಭಟನೆ ವೇಳೆ ಕುಮಾರಸ್ವಾಮಿ ಅವರು ಕೂಡ ಕೇಸರಿ ಶಾಲು ಧರಿಸಿದ್ದರು. ಈ ಸನ್ನಿವೇಶಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ.

ಇಂದು ಆ ಬಗ್ಗೆ ಮಾತನಾಡಿರುವ ದೇವೇಗೌಡರು, ಕುಮಾರಸ್ವಾಮಿ ಕೇಸರಿ ಶಾಲು ಹಾಕಬಾರದಿತ್ತು. ನಮ್ಮ ಪಕ್ಷದ ಶಾಲು ಹಾಕಬಹುದಿತ್ತು. ನಾಳೆ ನರೇಂದ್ರ ಮೋದಿ ಜೊತೆಗೆ ಹೋದಾಗಲುಹ ನನ್ನ ಪಕ್ಷದ ಶಾಲು ಹಾಕುತ್ತೇನೆ. ನಾನು ಖಂಡಿತವಾಗಿಯೂ ಕೇಸರಿ ಶಾಲು ಹಾಕುವುದಿಲ್ಲ ಎಂದರು. ಬಳಿಕ ಯಾರೋ ಬಂದು ಶಾಲು ಹಾಕಿರಬಹುದು. ಆಯಾ ಸಂದರ್ಭಕ್ಕೆ ಹಾಕಿರುತ್ತರೆ ಅಷ್ಟೇ. ಬೇರೆ ವ್ಯಾಖ್ಯಾನ ನೀಡುವ ಅಗತ್ಯವೂ ಇಲ್ಲ ಎಂದು ಸಮರ್ಥನೆ ಮಾಡಿದ್ದರು.

Advertisement

ಕೇಸೆಉ ಶಾಲಿನ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ತಿರುಗೇಟು ನೀಡಿದ್ದರು. ನಾನು ಕೇಸರಿ‌ ಶಾಲು ಹಾಕಿಕೊಂಡಿದ್ದು ಮಹಾ ಅಪರಾಧವಾ..? ನಮ್ಮ ರಾಷ್ಟ್ರ ಧ್ವಜದಲ್ಲಿ ಯಾವ ಬಣ್ಣವಿದೆ ಎಂದು ಕಾಂಗ್ರೆಸ್ ನವರಿಗೆ ತಿಳಿದಿಲ್ಲವಾ ಎಂದು ಪ್ರಶ್ನಿಸಿದ್ದರು.

Advertisement
Tags :
bangaloreg t devegowdahd‌ kumaraswamyಕುಮಾರಸ್ವಾಮಿಕೇಸರಿ ಶಾಲುದೇವೇಗೌಡರುಬೆಂಗಳೂರುಹಸಿರು
Advertisement
Next Article