ಕುಮಾರ ಬಂಗಾರಪ್ಪ ಕ್ಷಮೆ ಕೇಳಬೇಕು : ಶಿವಣ್ಣ ಅಭಿಮಾನಿಗಳಿಂದ ಮನೆಗೆ ಮುತ್ತಿಗೆ..!
ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿವೈ ರಾಘವೇಂದ್ರ ಎದುರು ನಿಂತು ಗೀತಾ ಶಿವರಾಜ್ ಕುಮಾರ್ ಸೋಲು ಕಂಡಿದ್ದಾರೆ. ಈ ಸೋಲಿನ ಬಳಿಕ ಗೀತಾ ಹಾಗೂ ಸಿವರಾಜ್ ಕುಮಾರ್ ಅವರನ್ನು ಗೇಲಿ ಮಾಡಿದ್ದರು. ಗೀತಾ ಅವರಿಗೆ ಇನ್ನ್ಯಾವತ್ತು ವಾಪಸ್ ಬರಬೇಡ ಎಂದರೆ, ಶಿವಣ್ಣ ಅವರಿಗೆ ನಮ್ಮೂರ ಜಾತ್ರೆಯಲ್ಲಿ ಕುಣಿಯುವುದಕ್ಕೆ ಅರ್ಜಿ ಹಾಕಿ ಎಂದಿದ್ದರು. ಈ ಮಾತುಗಳು ಇದೀಗ ಅಭಿಮಾನಿಗಳನ್ನು ಕೆರಳಿಸಿವೆ. ಕುಮಾರ ಬಂಗಾರಪ್ಪ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಸದಾಶಿವ ನಗರದ ನಿವಾಸಕ್ಕೆ ಹೋದ ಶಿವಣ್ಣ ಅಭಿಮಾನಿಗಳು, ಗೇಟ್ ತೆಗೆದು ಒಳಗೆ ಹೋಗಿದ್ದಾರೆ. ಕುಮಾರ ಬಂಗಾರಪ್ಪ ಅವರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಗಲಾಟೆ ತಾರಕಕ್ಕೇರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಭಾಯಿಸಲು ಪ್ರಯತ್ನ ಪಟ್ಟಿದ್ದಾರೆ. ಈ ವೇಳೆ ಅಭಿಮಾನಿಗಳು ಹಾಗೂ ಪೊಲೀಸರ ನಡುವೆಯೂ ಮಾತಿನ ಚಕಮಕಿ ನಡೆದಿದೆ. ಅಲ್ಲಿಂದ ಹೊರ ಹೋಗುವಂತೆ ಪೊಲೀಸರು ಎಚ್ಚರಿಕೆಯನ್ನು ನೀಡಿದ್ದಾರೆ. ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ, ಗೀತಾ ಸೋಲುತ್ತಿದ್ದಂತೆ ಕುಮಾರ ಬಂಗಾರಪ್ಪ ಟ್ವೀಟ್ ಮಾಡಿದ್ದಾರೆ. ನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ. ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ. ಬೇರೆಯವರಿಗೆ ಅವಕಾಶ ಸಿಗಲಾರದು. ಬೆದರಿಸುವ, ಹುಷಾರ್ ಎನ್ನುವ ಮಾತುಗಳೇನಿದ್ದರೂ ಗಂಟಲಿನ ಒಳಗೆ, ನಾಲ್ಕು ಗೋಡರಯ ಒಳಗೆ, ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು. ದಿಕ್ಕು ಗೆಟ್ಟು ದಿಕ್ಕಾಪಾಲಾಗಿ ಹೋಗಿ ಬೆಂಗಳೂರು ಸೇರಿಕೊಂಡಿರುವರಿಗೆ ಇದು ಕೊನೆಯ ಎಚ್ಚರಿಕೆ. ನೀವೂ ಹಿಂತುರಿಗಿ ಬರುವುದು ಕನಸಿನ ಮಾತು ಎಂದು ಪೋಸ್ಟ್ ಹಾಕಿದ್ದರು.