KSOU ಹಗರಣ : ಸಿಬಿಐ ತನಿಖೆ ಆರಂಭ..!
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 300 ಕೋಟಿಗೂ ಅಧಿಕ ಹಣದ ದುರುಪಯೋಗಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಸಿಬಿಐ ತನಿಖೆಗೆ ವಹಿಸಲಾಗಿದೆ. ಈಗಾಗಲೇ ತನಿಖೆ ಶುರುವಾಗಿದ್ದು, ಅಪರಿಚಿತ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೆಎಸ್ಒಯು ಮೈಸೂರಿನಲ್ಲಿ ತನ್ನ ಅಧಿಕೃತ ಸಂಸ್ಥೆಯನ್ನು ಹೊಂದಿದ್ದು, ದೇಶ & ವಿದೇಶಗಳಲ್ಲಿ ಸಹಯೋಗದ ಸಂಸ್ಥೆಗಳನ್ನು ಹೊಂದಿದೆ. ಕೆಎಸ್ಒಯು ಸಹಯೋಗ ಸಂಸ್ಥೆಗಳೊಂದಿಗಿನ ಕಾರ್ಯಕ್ರಮದಲ್ಲಿ ಅಪರಿಚಿತ ಅಧಿಕಾರಿಗಳು 300 ಕೋಟಿಗೂ ಅಧಿಕ ಹಣದ ದುರುಪಯೋಗ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಇದೀಗ ದಾಖಲಾಗಿರುವ ಎಫ್ಐಆರ್ ನಲ್ಲಿ ಸಹಯೋಗ ಸಂಸ್ಥೆಗಳು ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ ಮತ್ತು ವಿಶ್ವವಿದ್ಯಾನಿಲಯಕ್ಕೆ ಜಮೆ ಮಾಡಬೇಕಾದ ಶುಲ್ಕವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕದಲ್ಲಿ ಜಮಾ ಮಾಡುತ್ತಿವೆ ಎಂಬ ಆರೋಪವಿದೆ. 2013-14 ಹಾಗೂ 2024-15 ರಲ್ಲಿ ಜಮೆಯಾದ 50 ಕೋಟಿ ಹಣವೂ ಬರೀ ಲೆಕ್ಕಪತ್ರದಲ್ಲಿ ಮಾತ್ರ ಇದ್ದು, ಹಣದ ರೂಪದಲ್ಲಿ ಇರಲಿಲ್ಲ. ಆಂತರಿಕ ಹಣಕಾಸು ಪರಿಶೋಧನ ವೇಳೆ ಹಣಕಾಸು ಅಕ್ರಮ ಎಸಗಿರುವುದು ಕಂಡು ಬಂದಿದೆ. ಆದರೆ ಅದಕ್ಕೆ ಯಾರು ಕಾರಣ ಎಂಬುದು ದೃಢಪಟ್ಟಿಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದು, ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.