ಶಿಕ್ಷಣ ಇಲಾಖೆಯ ವಿರುದ್ಧ ರೊಚ್ಚಿಗೆದ್ದ ಕೃಪಾ : ಹೈಕೋರ್ಟ್ ಮೆಟ್ಟಿಲೇರಲು ನಿರ್ಧಾರ..!
RTE ಶುಲ್ಕ ಮರುಪಾವತಿ ಮಾಡದೆ ಇರುವ ಶಿಕ್ಷಣ ಇಲಾಖೆ ವಿರುದ್ಧ ಕೃಪಾ ಮತ್ತೆ ಸಿಡಿದೆದ್ದಿದೆ. ಬೇಡಿಕೆಗಳನ್ನು ಈಡೇರಿಸದೆ ಇದ್ದಲ್ಲಿ ಕನ್ನಡ ರಾಜ್ಯೋತ್ಸವದ ದಿನವೇ ಕರಾಳ ದಿನವನ್ನಾಗಿ ಆಚರಣೆ ಮಾಡುವುದಾಗಿ ಖಾಸಗಿ ಶಾಲೆಗಳ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ.
ಇಂದು ಖಾಸಗಿ ಹೊಟೇಲ್ ನಲ್ಲಿ ಕೃಪಾ ಖಾಸಗಿ ಶಾಲೆಗಳ ಒಕ್ಕೂಟ ಸಭೆ ಸೇರಿ ಒಂದು ನಿರ್ಣಯ ತೆಗೆದುಕೊಂಡಿದ್ದಾರೆ. ಕೊನೆಯ ವಾರ್ನಿಂಗ್ ಒಳಗೆ ಒಂದು ನಿರ್ಧಾರ ತೆಗೆದುಕೊಳ್ಳದೆ ಇದ್ದರೆ ಕೋರ್ಟ್ ನಲ್ಲೇ ವಿಚಾರ ಬಗೆಹರಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಹತ್ತು ವರ್ಷಕ್ಕೊಮ್ಮೆ ಮಾನ್ಯತೆ ನವೀಕರಣದ ಆದೇಶ ಇದ್ರು ಕೂಡ, ಒಂದಿಲ್ಲೊಂದು ತಗಾದೆ ತೆಗೆದು ಕಿರಿಕಿರಿ ಮಾಡುವ ಆರೋಪವಿದೆ. 1995ರ ನಂತರದ ಶಾಲೆಗಳು ಕನ್ನಡವನ್ನು ಮಕ್ಕಳಿಗೆ ಕಲಿಸುವ ಶಾಲೆಗಳಿಗೆ ಅನುದಾನ ಕೊಡದೆ ವಂಚನೆ ಅಲಮಾಡಲಾಗುತ್ತಿದೆ. ಒಂದಲ್ಲ ಎರಡಲ್ಲ ಸುಮಾರು 29 ವರ್ಷಗಳಿಂದ ಅನುದಾನ ಕೊಡದೆ ಅದೆಷ್ಟೋ ಶಾಲೆಗಳು ಮುಂಚುವ ಹಂತಕ್ಕೆ ಬಂದು ನಿಂತಿವೆ.
3-4 ವರ್ಷ ಕಳೆದರು RTE ಶುಲ್ಕ ಮರುಪಾವತಿ ಮಾಡುತ್ತಿಲ್ಲ. ಇನ್ನೆರಡು ದಿನದೊಳಗೆ ಈ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದರೆ ನವೆಂಬರ್ 1ರಂದು ಕಪ್ಪು ಪಟ್ಟಿ ಧರಿಸಿ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತೀವಿ. ಅದರ ಜೊತೆಗೆ ಕೋರ್ಟ್ ಮೆಟ್ಟಿಲೇರಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೀವಿ. RTE ಸಮಸ್ಯೆ, ಸೀಟ್ ಸಮಸ್ಯೆ, ಖಾಸಗಿ ಶಾಲೆಗಳಿಗೆ ಅನುದಾನ ಕೊಡದೆ ಕಾಡಿಸುವುದು ಈ ಎಲ್ಲದಕ್ಕೂ ಬೇಗ ಪರಿಹಾರ ಸಿಗಬೇಕು. ಸಮನ್ವಯ ಸಭೆ ಕರೆದು ಅಂತಿಮ ತೀರ್ಮಾನ ಹೇಳಬೇಕು ಎಂದು ಕೃಪಾ ಒತ್ತಡ ಹಾಕಿದೆ. ಈ ತಿಂಗಳು ಡೆಡ್ ಲೈನ್ ನೀಡಿದೆ.