For the best experience, open
https://m.suddione.com
on your mobile browser.
Advertisement

KPSC ಮರು ಪರೀಕ್ಷೆಗೆ ನಿರ್ಧಾರ.. ಸಿಎಂ ಸಿದ್ದರಾಮಯ್ಯ ಆದೇಶ

03:20 PM Sep 02, 2024 IST | suddionenews
kpsc ಮರು ಪರೀಕ್ಷೆಗೆ ನಿರ್ಧಾರ   ಸಿಎಂ ಸಿದ್ದರಾಮಯ್ಯ ಆದೇಶ
Advertisement

Advertisement
Advertisement

ಬೆಂಗಳೂರು: ಇತ್ತಿಚೆಗಷ್ಟೇ ಕೆಪಿಎಸ್ಸಿ ಪರೀಕಗಷೆ ನಡೆದಿದೆ. ಆದರೆ ಆ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯೇ ಯಡವಟ್ಟಾಗಿತ್ತು. ಈ ಸಂಬಂಧ ಮರು ಪರೀಕ್ಷೆಗೆ ಅಭ್ಯರ್ಥಿಗಳು ಕೂಡ ಒತ್ತಾಯಿಸಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಮರುಪರೀಕ್ಷೆ ನಡೆಸಲು ಸೂಚನೆ ನೀಡಿದ್ದಾರೆ.

ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ, ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ. ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯನ್ನು ಅಮಾನತು ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ನಾವು ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆ ಮತ್ತು ನಂಬಿಕಾರ್ಹತೆಯನ್ನು ಎತ್ತಿಹಿಡಿದು, ಪರೀಕ್ಷಾರ್ಥಿಗಳ ಹಿತರಕ್ಷಿಸಲು ಬದ್ಧರಾಗಿದ್ದೇವೆ ಎಂದಿದ್ದಾರೆ.

Advertisement

* ಪ್ರಶ್ನೆಪತ್ರಿಕೆ ಕನ್ನಡ ಅನುವಾದದಲ್ಲಿ ಘೋರ ತಪ್ಪುಗಳು, ಒಟ್ಟು 58 ಪ್ರಶ್ನೆಗಳಲ್ಲಿ ತಪ್ಪಾಗಿದೆ.
* ನಿಯಮಗಳ ಪ್ರಕಾರ ಪರೀಕ್ಷೆಯ 1 ವಾರ ಮುಂಚೆ ಸಿದ್ಧಪಡಿಸಬೇಕು. ಆದರೆ ಏಪ್ರಿಲ್ ತಿಂಗಳಲ್ಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದೆ.
* ವಾರದ ಮಧ್ಯ ಕೆಲಸದ ದಿನ ಪರೀಕ್ಷೆ ನಿಗದಿ, ಸಾಮಾನ್ಯವಾಗಿ ಭಾನುವಾರ ನಡೆಯುತ್ತಿತ್ತು
* ಎಲ್ಲ ಹುಡುಗರಿಗೆ ದೂರದ ಊರುಗಳಲ್ಲಿ ಪರೀಕ್ಷೆ ನಿಗದಿ ಆಗಿದೆ. ಚಿತ್ರದುರ್ಗದವರಿಗೆ ಮಂಗಳೂರು, ಉಡುಪಿಯವರಿಗೆ ದಾವಣಗೆರೆ ಇತ್ಯಾದಿ
* ಪರೀಕ್ಷಾ ಕೇಂದ್ರದ ಒಳಗೆ ಬರುವುದರೊಳಗೆ ಪ್ರಶ್ನೆ ಪತ್ರಿಕೆ ಬಂಡಲ್ ಓಪನ್ ಆಗಿರೋ ಆರೋಪ, ಇದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ
* ಪ್ರಶ್ನೆ ಪತ್ರಿಕೆ ತಡವಾಗಿ ವಿತರಣೆ, ಈ ಸಂಬಂಧ ಬಳ್ಳಾರಿ, ಚಿಕ್ಕ ಬಳ್ಳಾಪುರದಲ್ಲಿ ಪ್ರತಿಭಟನೆ ನಡೆದಿದೆ ಹೀಗೆ ಅನೇಕ ಯಡವಟ್ಟುಗಳು ನಡೆದಿವೆ.

Advertisement

Tags :
Advertisement