Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಂದು ಟೀಂ ಇಂಡಿಯಾದ ಉಪನಾಯಕನಾಗಿದ್ದ ಕೆ ಎಲ್ ರಾಹುಲ್ ಈ ಬಾರಿ ತಂಡದಿಂದಾನೇ ಔಟ್..!

09:11 PM Apr 30, 2024 IST | suddionenews
Advertisement

ಟ20 ವೇಳೆ ಶ್ವಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿದ್ದಿ, ಕನ್ನಡಿಗ ಕೆ ಎಲ್ ರಾಹುಲ್ ಗೆ ಸ್ಥಾನವನ್ನೇ ನೀಡಿಲ್ಲ. ತಂಡಿದಿಂದ ಹೊರಗೆ ಉಳಿದಿದ್ದಾರೆ. ಈ ಬಾರಿಯ ಐಪಿಎಲ್ ಮ್ಯಾಚ್ ನೆಲ್ಲಾ ಯಾರೆಲ್ಲಾ ಉತ್ತಮ ಪ್ರದರ್ಶ‌ ನೀಡಿದ್ದಾರೆ ಅವರಿಗೆ ಮಾತ್ರ ಟಿ20 ವಿಶ್ವಕಪ್ ಟೀಂ ಇಂಡಿಯಾಗೆ ಸೇರಿಸಿಕೊಂಡಿದ್ದಾರೆ. ಆದರೆ ಕೆ ಎಲ್ ರಾಹುಲ್ ನ ಬಿಟ್ಟು ಹಾರ್ದಿಕ್ ಪಾಂಡ್ಯಾ ಸೇರಿಸಿಕೊಂಡಿದಕ್ಕೆ ಕ್ರಿಕೆಟ್ ಪ್ರೇಮಿಗಳು ಕೆಂಡಕಾರುತ್ತಿದ್ದಾರೆ.

Advertisement

ಈ ಬಾರಿಯ ಆಟದಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಿಲ್ಲ ಎನ್ನುವುದಾದರೇ, ಹಾರ್ದಿಕ್ ಪಾಂಡ್ಯಾಕ್ಕಿಂತ ರಾಹುಲ್ ಬೆಟರ್. ಆದರೆ ರಾಹುಲ್ ನ ಬಿಟ್ಟು ಹಾರ್ದಿಕ್ ಪಾಂಡ್ಯಾನ ಆಯ್ಕೆ ಮಾಡಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಈ ಬಾರಿಯ ಪಂದ್ಯದಲ್ಲಿ ಕೆ ಎಲ್ ರಾಹುಲ್ 9 ಪಂದ್ಯಗಳನ್ನಾಡಿದ್ದು, 378 ರನ್ ಗಳನ್ನು ಹೊಡೆದಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯಾ ಆಡಿದ 9 ಪಂದ್ಯದಲ್ಲಿ 197 ರನ್ ಹೊಡೆದಿದ್ದಾರೆ.

ರಾಹುಲ್ ಅವರ ನಿಧಾನಗತಿಯ ಬ್ಯಾಟಿಂಗ್ ಅವರ ದಾರಿಗೆ ಮುಳುವಾಗಿದೆ ಎಂದು ನಂಬಲಾಗಿದೆ. ಈ ಮಧ್ಯೆ, ಹಾರ್ದಿಕ್ ಪಾಂಡ್ಯ ಅವರ ಆಟವೂ ಹೇಳಿಕೊಳ್ಳುವಂತಹದ್ದಿಲ್ಲ. ಟೀಮ್ ಇಂಡಿಯಾದ ಉಪನಾಯಕ ಸ್ಥಾನವೂ ಚೇಂಜ್‌ ಆಗಿದೆ. ಅಂದು ಭಾರತ ತಂಡದ ಉಪನಾಯಕನಾಗಿದ್ದ ಕೆಎಲ್‌ ರಾಹುಲ್ ಇಂದು ಆ ಸ್ಥಾನವನ್ನು ಉಳಿಸಿಕೊಳ್ಳುವುದು ಬಿಡಿ, ತಂಡದಲ್ಲೂ ಸ್ಥಾನ ಪಡೆದಿಲ್ಲ. ಕೆಎಲ್‌ ರಾಹುಲ್‌ ಬದಲಿಗೆ ಹಾರ್ದಿಕ್ ಪಾಂಡ್ಯ ತಂಡದ ಉಪನಾಯಕ ಸ್ಥಾನವನ್ನು ಅಲಂಕರಿಸಿದ್ದಾರೆ. ಆದರೆ ಬಿಸಿಸಿಐ ನಿರ್ಧಾರವನ್ನು ಅರ್ಥ ಮಾಡಿಕೊಳುವುದಕ್ಕೆ ಕಷ್ಟ ಕಷ್ಟ ಎನ್ನುತ್ತಿದ್ದಾರೆ ಕ್ರಿಕೆಟ್ ಫ್ಯಾನ್ಸ್.

Advertisement

Advertisement
Tags :
KL RahulTeam indiavice-captainಉಪನಾಯಕಕೆ.ಎಲ್. ರಾಹುಲ್ಟೀ ಇಂಡಿಯಾ
Advertisement
Next Article