ಘರ್ಜಿಸಿದ ರಜತ್ ನನ್ನು ಬೋನಿಗೆ ಹಾಕಿದ ಕಿಚ್ಚ : ಧನರಾಜ್ ಗೆ ಇಂಥ ಶಿಕ್ಷೆನಾ..?
ಇವತ್ತು ಕಿಚ್ಚನ ಪಂಚಾಯ್ತಿಯಲ್ಲಿ ಯಾರಿಗೆಲ್ಲಾ ಕ್ಲಾಸ್ ಸಿಗಬಹುದು ಎಂಬುದು ಈಗಾಗಲೇ ಊಹೆ ಸತ್ಯವಾಗಿದೆ. ಹಾಗೇ ಯಾರಿಗೆಲ್ಲ ಶಿಕ್ಷೆಯಾಗಬಹುದು ಎಂಬುದು ಪಕ್ಕ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ನಿಯಮಗಳಿವೆ ಆ ನಿಯಮಗಳನ್ನು ಮುರಿಯುವಂತಿಲ್ಲ. ಮುರಿದರೆ ಅವರಿಗೆ ಕಿಚ್ಚನಿಂದ ಪಕ್ಕ ಪನೀಶ್ಮೆಂಟ್ ಇದ್ದೇ ಇರುತ್ತದೆ. ಈ ವಾರ ಅಂಥ ಪನೀಶ್ಮೆಂಟ್ ಸಿಕ್ಕಿರೋದು ಧನರಾಜ್ ಹಾಗೂ ರಜತ್ ಗೆ.
ಹೌದು ಉತ್ತಮ ಹಾಗೂ ಕಳಪೆ ಕೊಡುವ ಸಂದರ್ಭದಲ್ಲಿ ಧನರಾಜ್ ಹಾಗೂ ರಜತ್ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತು. ಧನರಾಜ್ ಗೆ ಹೊಡೆಯುವುದಕ್ಕೆ ಹೋಗಿದ್ದ ರಜತ್. ಮನೆಯವರೆಲ್ಲ ಸೇರಿ ಅನಾಹುತವಾಗುವುದನ್ನು ತಡೆದಿದ್ದರು. ಈ ಸಂಬಂಧ ಇಂದು ಪಂಚಾಯ್ತಿಯಲ್ಲಿ ವಿಷಯ ತೆಗೆದ ಸುದೀಪ್, ಧನರಾಜ್ ಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವ್ಯಾಕ್ರೀ ಅವರ ಕೆನ್ನೆ ಮುಟ್ಟಿ ಪ್ರವೋಕ್ ಮಾಡಿದ್ದು ಎಂದಿದ್ದಾರೆ. ಜಗಳ ಆಡೋದಕ್ಕೆ ನಿಮಗೆ ಐದು ನಿಮಿಷ ಸಮಯ ಕೊಡ್ತೀನಿ ಆಡಿ ಎಂದಿದ್ದಾರೆ. ಆಗ ಧನರಾಜ್ ಬೇಡ ಸರ್ ಎಂದಿದ್ದಾರೆ.
ಇನ್ನು ಇಬ್ಬರು ಮಾಡಿದ ತಪ್ಪಿಗೆ ಸುದೀಪ್ ದೊಡ್ಡ ಶಿಕ್ಷೆಯನ್ನೇ ಕೊಟ್ಟಿದ್ದಾರೆ. ರಜತ್ ನನ್ನು ಒಂದು ಬೋನ್ ಒಳಗೆ ಹಾಕಿದ್ದು, ಎಲ್ಲಿಯೇ ಹೋಗಬೇಕೆಂದರೂ ಆ ಬೋನನ್ನು ಧನರಾಜ್ ಅವರೇ ಎಳೆದುಕೊಂಡು ಹೋಗಬೇಕಾದ ಶಿಕ್ಷೆ ನೀಡಿದ್ದಾರೆ. ಈ ಇಬ್ಬರಿಗೆ ಇಂಥ ಶಿಕ್ಷೆ ಕೊಟ್ಟಿರುವಾಗ ಚೈತ್ರಾ ಹಾಗೂ ತ್ರಿವಿಕ್ರಂಗೆ ಯಾವ ಥರದ ಶಿಕ್ಷೆ ಕೊಡ್ತಾರೆ ನೋಡಬೇಕಿದೆ. ಯಾಕಂದ್ರೆ ಜೈಲಿನಿಂದ ಹೊರಬಂದು ಮೂಲ ನಿಯಮವನ್ನೇ ಮುರಿದಿದ್ದಾರೆ. ಚೈತ್ರಾಗೂ ಬಿಗ್ ಬಾಸ್ ಮನೆಯಲ್ಲಿ ಕೊಡುವ ಶಿಕ್ಷೆ ಅನುಭವಿಸಬೇಕೆಂಬ ಆಸೆಯಾಗಿದೆ.