For the best experience, open
https://m.suddione.com
on your mobile browser.
Advertisement

40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ನಿಧನ..!

12:35 PM Sep 19, 2024 IST | suddionenews
40  ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ನಿಧನ
Advertisement

Advertisement
Advertisement

ಬಿಜೆಪಿ ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ದ, ಗುತ್ತಿಗೆದಾರ ಸಂಘ್ ಅಧ್ಯಕ್ಷ ಡಿ ಕೆಂಪಣ್ಣ ಇಂದು ನಿಧನರಾಗಿದ್ದಾರೆ. ಇವರಿಗೆ 84 ವರ್ಷ ವಯಸ್ದಾಗಿತ್ತು. ಹೃದಯಘಾತದಿಂದಾಗಿ ಇಂದು ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಜ್ಯೋತಿಪುರ ನಿವಾಸದಲ್ಲಿಯೇ ನಿಧನರಾಗಿದ್ದಾರೆ. ಕೆಂಪಣ್ಣ ಅವರ ನಿಧನಕ್ಕೆ ಆಪ್ತರು, ಗಣ್ಯರು ಕಂಬನಿ ಮಿಡಿದಿದ್ದಾರೆ.

ಗುತ್ತಿಗೆದಾರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಅವರು, ಗುತ್ತಿಗೆದಾರರಿಗೆ ಸಮಸ್ಯೆ ಎಂದಾಗ ಇಳಿ ವಯಸ್ಸಿನಲ್ಲೂ ಅವರ ಜೊತೆಗೆ ನಿಂತು, ಸಮಸ್ಯೆ ಬಗೆಹರಿಸುತ್ತಿದ್ದರು. ಅವರಿಗಾಗಿ ಬಿಜೆಪಿ ಸರ್ಕಾರದ ವಿರುದ್ಧವೇ ಹೋರಾಟ ಮಾಡಿದ್ದರು. ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ 40% ಕಮೀಷನ್ ಆರೋಪ ಮಾಡಿದ್ದ ಕೆಂಪಣ್ಣ, ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಆ ಸಮಯದಲ್ಲಿ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದರು.

Advertisement
Advertisement

ಆ ಸಮಯದಲ್ಲಿ ವಿರೋಧ ಪಕ್ಷದವರಿಗೆ ಇದೊಂದು ದೊಡ್ಡ ಅಸ್ತ್ರವಾಗಿತ್ತು. ಅದರ ವಿರುದ್ಧ ದೊಡ್ಡ ಹೋರಾಟವನ್ನೇ ಮಾಡಿದ್ದರು. ಆದರೆ ಇದೀಗ ಕೆಂಪಣ್ಣ ನಿಧನ, ಗುತ್ತಿಗೆದಾರರಿಗೆ ದುಃಖವಾಗಿದೆ.

Advertisement
Tags :
Advertisement