Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಇದೆಲ್ಲ ಹಾಸನದಲ್ಲಿ ಇಟ್ಟುಕೋ : ತಮ್ಮದೇ ಪಕ್ಷದ ಮಾಜಿ ಶಾಸಕರ ಮೇಲೆ ಪ್ರತಾಪ್ ಸಿಂಹ ಕೆಂಡಾಮಂಡಲ..!

01:37 PM Feb 11, 2024 IST | suddionenews
Advertisement

ಮೈಸೂರು: ಲೋಕಸಭಾ ಚುನಾವಣೆಯ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್, ರಾಜಕೀಯ ಚಾಣಾಕ್ಯ ರಾಜ್ಯಕ್ಕೆ ಆಗಮಿಸಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಭರ್ಜರಿ ಸ್ಪರ್ಧೆ ಇದೆ. ಹೀಗಾಗಿ ಚುನಾವಣೆಯ ಬಗ್ಗೆ ಬಿಜೆಪಿ ನಾಯಕರ ಜೊತೆ ಮಹತ್ವ ಪೂರ್ಣ ಚರ್ಚೆ ನಡೆಸುವ ಸಾಧ್ಯತೆಯೂ ಇದೆ.

Advertisement

ಮೈಸೂರಿಗೆ ಅಮಿತ್ ಶಾ ಬರುವುದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿಯೇ ಸಂಸದರು ಮತ್ತು ಮಾಜಿ ಶಾಸಕರು ಕಿತ್ತಾಡಿಕೊಂಡಿರುವ ಪ್ರಸಂಗ ನಡೆದಿದೆ. ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದಲ್ಲಿ ಪರಸ್ಪರ ಮಾತಿಗೆ ಮಾತು ಬೆಳೆದು, ಸಂಸದ ಪ್ರತಾಪ್ ಸಿಂಹ ಹಾಗೂ ಹಾಸನ ಮಾಜಿ ಶಾಸಕ ಪ್ರೀತಂಗೌಡ ಕಿತ್ತಾಡಿಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಪ್ರೀತಂ ಗೌಡ ಹಾಗೂ ಪ್ರತಾಪ್ ಸಿಂಹ ಇಬ್ಬರಿಗೂ ಸ್ವಾಗತಕ್ಕೆ ನಿಲ್ಲುವಂತೆ ಪೊಲೀಸರು ಮನವಿ ಮಾಡಿದ್ದರು. ಇದಕ್ಕೆ ಮಾಜಿ ಶಾಸಕ ಪ್ರೀತಂ ಗೌಡ ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು. ಇದೆಲ್ಲವನ್ನು ಹಾಸನದಲ್ಲಿ ಇಟ್ಟುಕೋ ನಮ್ಮಲ್ಲಿ ನಡೆಯುವುದಿಲ್ಲ ಎಂದರು. ಈ ಮಾತಿಗೆ ಪ್ರೀತಂ ಗೌಡ ಕೋಪಿಸಿಕಿಂಡರು. ಅಲ್ಲಿಯೇ ಇದ್ದ ಸ್ಥಳೀಯ ನಾಯಕರು ಮಧ್ಯಪ್ರವೇಶ ಮಾಡಿ, ಮನಸ್ತಾಪವನ್ನು ದೂರ ಮಾಡಿದರು. ಆ ಜಗಳವನ್ನು ನಿಲ್ಲಿಸಿದರು.

Advertisement

ಗೃಹ ಸಚಿವ ಅಮಿತ್ ಶಾ, ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಲೋಕಸಭೆಯ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ರಾಜ್ಯ ಪ್ರವಾಸ ಕೈಗೊಂಡಿರುವ ಅಮಿತ್ ಶಾ, ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಜೊತೆಗೆ ಚುನಾವಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮೈತ್ರಿ ಅಭ್ಯರ್ಥಿಗಳ ಬಗ್ಗೆಯೂ ತೀರ್ಮಾನ ಮಾಡುವ ಸಾಧ್ಯತೆ ಇದೆ.

Advertisement
Tags :
hassanmysuruPratap simhaಕೆಂಡಾಮಂಡಲಪ್ರತಾಪ್ ಸಿಂಹಮಾಜಿ ಶಾಸಕಮೈಸೂರುಹಾಸನ
Advertisement
Next Article