For the best experience, open
https://m.suddione.com
on your mobile browser.
Advertisement

'ಕಾಟೇರ' ಅಬ್ಬರ ಬಲು ಜೋರು : ಮೊದಲ ದಿನವೇ ಕಲೆಕ್ಟ್ ಆಗಿದ್ದು ಎಷ್ಟು ಕೋಟಿ ಗೊತ್ತಾ..?

12:23 PM Dec 30, 2023 IST | suddionenews
 ಕಾಟೇರ  ಅಬ್ಬರ ಬಲು ಜೋರು   ಮೊದಲ ದಿನವೇ ಕಲೆಕ್ಟ್ ಆಗಿದ್ದು ಎಷ್ಟು ಕೋಟಿ ಗೊತ್ತಾ
Advertisement

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಅವರ 'ಕಾಟೇರ' ಸಿನಿಮಾ ರಿಲೀಸ್ ಆಗಿದೆ. ಹೆಸರಿಗೆ ತಕ್ಕ ಹಾಗೆ ದರ್ಶನ್ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಚಿಂದಿ ಉಡಾಯಿಸಿದೆ. ವರ್ಷಾಂತ್ಯದಲ್ಲಿ 'ಕಾಟೇರ' ಅಬ್ಬರ ಚಿಂದಿ ಎಬ್ಬಿಸಿದೆ. ಎರಡನೇ ದಿನವೂ ಬಹುತೇಕ ಶೋಗಳು ಹೌಸ್ ಫುಲ್ ಆಗಿವೆ.

Advertisement
Advertisement

ಸಿನಿಮಾ ರಿಲೀಸ್ ಗೂ ಮುನ್ನ ಥಿಯೇಟರ್ ಗಳ ಟಿಕೆಟ್ ಸೋಲ್ಡ್ ಆಗಿವೆ. ಈ ಮೂಲಕ ಮೊದಲ ದಿನವೇ ಕೋಟಿ ಕೋಟಿ ಹಣವನ್ನ 'ಕಾಟೇರ' ಲೂಟಿ ಮಾಡಿದೆ. ಮಾಹಿತಿ ಪ್ರಕಾರ ಒಂದೇ ದಿನಕ್ಕೆ 19.79 ಕೋಟಿ ಹಣ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಇನ್ನು ಎರಡನೇ ದಿನವೂ ಕಲೆಕ್ಷನ್ ಬಗ್ಗೆ ನಿರೀಕ್ಷೆಗಳು ಇದೆ.

ಇಲ್ಲಿನ ನೆಲ, ಜಲ, ಭಾಷೆಯ ಮೇಲೆ ಸಿನಿಮಾ ಮಾಡಲಾಗಿದೆ. ಉಳುವವನೇ ಭೂಮಿಯ ಒಡೆಯ ಕಾಯ್ದೆಗಳನ್ನು ಆಧಾರವಾಗಿಟ್ಟುಕೊಂಡು, ಕಮರ್ಷಿಯಲ್ ಆಗಿ ಸಿನಿಮಾ ತೆಗೆದಿದ್ದಾರೆ. ಇದು ದರ್ಶನ್ ಅವರ 56ನೇ ಸಿನಿಮಾವಾಗಿದ್ದು, ದರ್ಶನ್ ಅಭಿಮಾನಿಗಳು ಅಪ್ಪಿ, ಒಪ್ಪಿಕೊಂಡಿದ್ದಾರೆ. ಈಗಾಗಲೇ ಸಿಂಗಲ್ ಸ್ಕ್ರೀನ್, ಮಲ್ಟಿಫ್ಲೆಕ್ಸ್ ಗಳು ತುಂಬಿವೆ. 'ಕಾಟೇರ' ಅಪ್ಪಟ ಕನ್ನಡ ಸಿನಿಮಾ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದರೆ, ಇನ್ನು ಕಲೆಕ್ಷನ್ ಜೋರಾಗಿರುತ್ತಾ ಇತ್ತು. ಆದರೆ ಕನ್ನಡಿಗರಿಗಾಗಿ ಮಾಡಲಾಗಿದೆ. ಕನ್ನಡದ್ದೇ ಸಿನಿಮಾ ಇಷ್ಟು ದೊಡ್ಡಮಟ್ಟದ ಕಲೆಕ್ಷನ್ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಎರಡನೇ ದಿನವೂ 'ಕಾಟೇರ' ಕ್ರೇಜ್ ಕಡಿಮೆಯಾಗಿಲ್ಲ. ದರ್ಶನ್ ಅಭಿಮಾನಿಗಳು ಮುಗಿಬಿದ್ದು ನೋಡುತ್ತಿದ್ದಾರೆ. ಸಾಮಾನ್ಯ ಪ್ರೇಕ್ಷಕರಿಗೂ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟವಾಗಿದೆ.

Advertisement
Advertisement

Advertisement
Tags :
Advertisement