Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

KAS ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಪರೀಕ್ಷೆ ಮುಂದೂಡಲು ಒತ್ತಾಯ..!

03:57 PM Aug 27, 2024 IST | suddionenews
Advertisement

ಬಳ್ಳಾರಿ: ಇಂದು ನಡೆದ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಇದರ ಹಿನ್ನೆಲೆ ಪರೀಕ್ಷಾರ್ಥಿಗಳು ಕೆಪಿಎಸ್ಸಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬಳ್ಳಾರಿಯ ಸೆಂಟ್ ಜಾನ್ಸ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲು ಓಪನ್ ಆಗಿರುವ ಪ್ರಶ್ನೆ ಪತ್ರಿಕೆಯನ್ನು ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಪರೀಕ್ಷಾ ಕೇಂದ್ರಕ್ಕೆ ಬರುವ ಮುಂಚೆಯೇ ಪ್ರಶ್ನೆ ಪತ್ರಿಲೆ ಸೀಲ್ ಓಪನ್ ಆಗಿತ್ತು. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಗಳು ಪ್ರಶ್ನೆ ಮಾಡಿದರು ಆಮೇಲೆ ನೋಡೋಣಾ ಎಂದು ಕೊಠಡಿ ಮೇಲ್ವಿಚಾರಕರಯ ಸಮಜಾಯಿಷಿ ನೀಡಿದ್ದರಂತೆ. ಹೀಗಾಗಿ ಪರೀಕ್ಷೆ ಬರೆದು ಹೊರಗೆ ಬಂದ ಮೇಲೆ ಪರೀಕ್ಷಾರ್ಥಿಗಳು ಕಿಡಿಕಾರಿದ್ದಾರೆ. ಸೆಂಟ್ ಜಾನ್ ಪದವಿ ಪೂರ್ವ ಕಾಲೇಜಿನ ರೂಂ ನಂಬರ್ 18 ಮತ್ತು 19 ಕೊಠಡಿಯಲ್ಲಿ ಓಪನ್ ಆಗಿರುವ ಪ್ರಶ್ನೆ ಪತ್ರಿಕೆಗಳು ಬಂದಿರುವ ಬಗ್ಗೆ ಆರೋಪಿಸಿದ್ದಾರೆ. ಹೀಗಾಗಿಯೇ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಇನ್ನು ಬೆಳಗಾವಿಯಲ್ಲೂ ಪರೀಕ್ಷೆಯಲ್ಲಿ ಯಡವಟ್ಟಾಗಿರುವುದು ಕಂಡು ಬಂದಿದೆ. ಕೆಎಎಸ್ ಎ ಮತ್ತು ಬಿ ವೃಂದದ ಪರೀಕ್ಷೆ ವೇಳೆ ಯಡವಟ್ಟಾಗಿದೆ. ಪ್ರಶ್ನೆ ಪತ್ರಿಕೆ ನೀಡುವುದಕ್ಕೆ 15 ನಿಮಿಷ ತಡ ಮಾಡಿದ್ದಾರಂತೆ. ಹೀಗಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಪ್ರಶ್ನೆ ಪತ್ರಿಕೆ ಅದಲು ಬದಲಾಗಿದೆ ಎಂದು ಅಭ್ಯರ್ಥಿಗಳು ಕಿಡಿಕಾರಿದ್ದು, ಕೆಲ ಕಾಲ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷಬ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

Advertisement

Advertisement
Tags :
allegationbengaluruchitradurgaKASKAS ಪ್ರಶ್ನೆ ಪತ್ರಿಕೆpostponeQuestion paper leaksuddionesuddione newsಒತ್ತಾಯಚಿತ್ರದುರ್ಗಪರೀಕ್ಷೆ ಮುಂದೂಡಲುಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಸೋರಿಕೆ ಆರೋಪ
Advertisement
Next Article