For the best experience, open
https://m.suddione.com
on your mobile browser.
Advertisement

ಬೆಂಗಳೂರಿನಲ್ಲಿ KAS ಆಫೀಸರ್ ಹೆಂಡತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!

03:37 PM May 11, 2024 IST | suddionenews
ಬೆಂಗಳೂರಿನಲ್ಲಿ kas ಆಫೀಸರ್ ಹೆಂಡತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
Advertisement

ಬೆಂಗಳೂರು: ಹೈಕೋರ್ಟ್ ವಕೀಲೆಯಾಗಿದ್ದ ಚೈತ್ರಾ ಬಿ.ಗೌಡ ಎಂಬುವವರು ಸಾವನ್ನಪ್ಪಿದ್ದಾರೆ. ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದರಿಂದ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಚೈತ್ರಾಗೆ ಇನ್ನು 35 ವರ್ಷ ವಯಸ್ಸಾಗಿತ್ತಷ್ಟೆ.

Advertisement
Advertisement

ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಣ್ಣಯ್ಯ ಲೇ ಔಟ್ ನಲ್ಲಿ ವಾಸವಾಗಿದ್ದ ಚೈತ್ರಾ, ಹೈಕೋರ್ಟ್ ನಲ್ಲಿ ಅಡ್ವೋಕೇಟ್ ಆಗಿ ಕೆಲಸ ಮಾಡುತ್ತಿದ್ದರು. ಇವರ ಪತಿ ಕೂಡ ಐಎಎಸ್ ಆಫೀಸರ್ ಆಗಿದ್ದವರು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಕಾರ್ಯ ನರ್ವಹಿಸುತ್ತಿದ್ದಾರೆ ಚೈತ್ರಾ ಪತಿ.

ಚೈತ್ರಾ ಸಾವಿಗೆ ಕಾರಣ ಏನೆಂಬುದು ಇನ್ನು ತಿಳಿದಿಲ್ಲ. ಚೈತ್ರಾ ವಕೀಲೆ ಮಾತ್ರ ಅಲ್ಲ, ಮಾಡೆಲ್ ಕೂಡ ಆಗಿದ್ದರು. ಆದರೆ ಇಂದು ಈ ರೀತಿ ಮೃತದೇಹ ಪತ್ತೆಯಾಗಿದೆ. ಮನೆಯವರ ಮಾಹಿತಿ ಪ್ರಕಾರ ದಂಪತಿಯ ನಡುವೆ ವೈಮನಸ್ಸಿತ್ತು ಎನ್ನಲಾಗಿದೆ. ಆದರೆ ಚೈತ್ರಾ ಸಾವಿಗೆ ಇದೇ ಕಾರಣ ಎಂಬುದು ಇನ್ನು ತಿಳಿದಿಲ್ಲ. ಸದ್ಯಕ್ಕೆ ಸಂಜಯನಗರ ಪೊಲೀಸರು ಸ್ಥಳಕ್ಕೆ ಬಂದು, ಮೃತದೇಹವನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Advertisement
Tags :
Advertisement