Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ದಿನಾಂಕ ಪ್ರಕಟ

07:01 PM Apr 15, 2024 IST | suddionenews
Advertisement

ಬೆಂಗಳೂರು: 2024ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ದಿನಾಂಕ ಪ್ರಕಟವಾಗಿದೆ. ಜೂನ್ 30ರಂದು ಪರೀಕ್ಷೆಗೆ ದಿನಾಂಕ ನಿಗದಿ ಮಾಡಲಾಗಿದೆ. ಅಂದು ರಾಜ್ಯಾದ್ಯಂತ ಟಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.

Advertisement

ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜು ಸಲ್ಲಿಕೆ ಮಾಡಬೇಕಾಗಿದೆ. ಮೇ 15ರಂದು ಟಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಸೂಚನೆ ಹಾಗೂ ಅಭ್ಯರ್ಥಿಗಳಿಗೆ ನೀಡಲಾದ ಮಾರ್ಗಸೂಚಿಗಳನ್ನು ಸರಿಯಾಗಿ ಓದಿ, ಅರ್ಥೈಸಿಕೊಂಡು, ಅರ್ಜಿಯನ್ನು ಕ್ರಮಬದ್ಧವಾಗಿ ತುಂಬಬೇಕಾಗಿದೆ. https://schooleduction.Karnataka.gov.in ನಲ್ಲಿ ಅರ್ಜಿಯನ್ನು ನೀಡಲಾಗಿದೆ. ಈ ವೆಬ್ಸೈಟ್ ಮೂಲಕ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಶಾಲಾ ಶಿಕ್ಷಣ ಇಲಾಖೆಯಿಂದ ಪ್ರತಿವರ್ಷವೂ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದೀಗ ಈ ಪರೀಕ್ಷೆಗೆ ಇಲಾಖೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಎರಡು ರೀತಿಯ ಪತ್ರಿಕೆಯ ಪರೀಕ್ಷೆ ಇರುತ್ತದೆ. ಪತ್ರಿಕೆ 1: 1 ರಿಂದ 5ನೇ ತರಗತಿಗೆ ಬೋಧನೆ ಮಾಡುವ ಶಿಕ್ಷಕರಿಗೆ, ಪತ್ರಿಕೆ 2: 6ರಿಂದ 8ನೇ ತರಗತಿ ಬೋಧನೆ ಮಾಡುವ ಶಿಕ್ಷಕರಿಗಿರುತ್ತದೆ.

Advertisement

Advertisement
Tags :
bangaloreDate AnnouncedKarnatakaTeacher Eligibility Testಅರ್ಹತಾ ಪರೀಕ್ಷೆಕರ್ನಾಟಕ ಶಿಕ್ಷಕರದಿನಾಂಕ ಪ್ರಕಟಬೆಂಗಳೂರು
Advertisement
Next Article