ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಕೆಪಿಟಿಸಿಎಲ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಬಹುದು. ಒಟ್ಟು 2,975 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ ಮಾಡಲಾಗಿದೆ. ಇನ್ನು ಎರಡು ದಿನದ ಒಳಗೆ ಅರ್ಜಿ ಸಲ್ಲಿಸಬೇಕಿದೆ. ನವೆಂಬರ್ 20 ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿದೆ. ಅರ್ಜಿ ಶುಲ್ಕ ಪಾವತಿಸಲು ದಿನಾಂಕ 25ರವರೆಗೂ ಸಮಯಾವಕಾಶವಿದೆ.
ಕಿರಿಯ ಸ್ಟೇಷನ್ ಪರಿಚಾರಕ, ಕಿರಿಯ ಪವರ್ ಮ್ಯಾನ್ ಹುದ್ದೆ ಸೇರಿದಂತೆ 2,975 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಅರ್ಜಿ ಹಾಕಿದವರಿಗೆ ಇಲಾಖೆಯಿಂದ ಸ್ಪರ್ಧೆಯನ್ನು ನೀಡಲಾಗುತ್ತದೆ. ಇಲಾಖೆ ನೀಡುವ ಸ್ಪರ್ಧೆಯಲ್ಲಿ ಮೂರರಲ್ಲಿಯಾದರೂ ಪಾಸ್ ಆಗಬೇಕು. ಮೂರು ಸ್ಪರ್ಧೆಯಲ್ಲಿ ಪಾಸ್ ಆದರೆ ಮುಂದಿನ ಹಂತವನ್ನು ತಲುಪುವುದಕ್ಕೆ ಸುಲಭವಾಗುತ್ತದೆ.
ಇನ್ನು ಈ ಹುದ್ದೆಗೆ ಎಸ್ಎಸ್ಎಲ್ಸಿ ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಹೀಗಾಗಿ ಇಲ್ಲಿ ಎಸ್ಎಸ್ಎಲ್ಸಿ ಅಂಕ ಬಹುಮುಖ್ಯವಾಗುತ್ತದೆ. ಎಸ್ಎಸ್ಎಲ್ಸಿಯಲ್ಲಿ ಗರಿಷ್ಠ ಅಂಕವನ್ನು ಪಡೆದು, ಜೊತೆಗೆ ಇಲಾಖೆ ನಡೆಸುವ ಟೆಸ್ಟ್ ನಲ್ಲಿ ಪಾಸಾದರೆ ಒಂದು ಹಂತಕ್ಕೆ ಉದ್ಯೋಗದ ಹಾದಿ ಸುಲಭವಾಗಿರುತ್ತದೆ. ಈ ಕೆಲಸಗಳ ಜೊತೆಗೆ ಬ್ಯಾಕ್ ಲಾಗ್ ಹುದ್ದೆಗಳನ್ನೂ ಸಹ ಭರ್ತಿ ಮಾಡಲಾಗುತ್ತಿದೆ. ಹೀಗಾಗಿ ಅದಕ್ಕೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಉದ್ಯೋಗ ಹುಡುಕುತ್ತಿರುವ, ಅದರಲ್ಲೂ ಎಸ್ಎಸ್ಎಲ್ಸಿ ಪಾಸ್ ಆದವರಿಗೆ ಇದೊಂದು ಸುವರ್ಣವಕಾಶವೇ ಸರಿ. ಈ ಅವಕಾಶವನ್ನು ಬಳಸಿಕೊಂಡು, ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಸರ್ಕಾರಿ ಕೆಲಸವನ್ನು ಪಡೆಯಬಹುದಾಗಿದೆ. ಅರ್ಜಿ ಹಾಕಲು ಕೇವಲ ಇನ್ನೆರಡು ದಿನಗಳು ಮಾತ್ರ ಬಾಕಿ ಇದೆ.