Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯಲ್ಲಿ ನೇರ ನೇಮಕಾತಿ ಆರಂಭ..!

06:53 PM Sep 16, 2024 IST | suddionenews
Advertisement

 

Advertisement

ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ 47 ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಸಂಗ್ರಹಣೆ ಸಲಹೆಗಾರ, ಪರಿಸರ ಸಲಹೆಗಾರ, ಸಾಮಾಜಿಕ ಅಭಿವೃದ್ಧಿ ಸಲಹೆಗಾರ, ಕಾನೂನು ಸಲಹೆಗಾರ ಹಾಗೂ ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ ಸೇರಿದಂತೆ ವಿವಿಧ ಹುದ್ದೆಗಳನ್ನು ಹೊರಗುತ್ತಿಗೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕದಲ್ಲಿಯೇ ಹುದ್ದೆಗಳು ಖಾಲಿ ಇವೆ. 47 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿರಬೇಕು.

Advertisement

BCA, BE, BTech, MCA, MSW, MA, MBA, M.COM ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆಯ ಮೂಲಕ ಪಡೆದಿರಬೇಕಾಗುತ್ತದೆ. ಇನ್ನು ಈಗಾಗಲೇ ಇದಕ್ಕೆ ಸಂಬಂಧಿಸಿದ ವೃತ್ತಿಯ ಅನುಭವ ಪಡೆದವರಿಗೆ ಮೊದಲ ಆದ್ಯತೆ ಇರಲಿದೆ. ಈ ಹುದ್ದೆಗೆ ಅರ್ಜಿಬಸಲ್ಲಿಸುವ ಅಭ್ಯರ್ಥಿಗಳಿಗೆ 50 ವರ್ಷ ವಯಸ್ಸು ಮೀರಿರಬಾರದು. ನಿಮ್ಮ ಡಾಕ್ಯುಮೆಂಟ್ಸ್ ನಲ್ಲಿ ವಯಸ್ಸನ್ನು ನೋಡಿಕೊಂಡು ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಇನ್ನು ವೇತನ ಶ್ರೇಣಿಯೂ ಹುದ್ದೆಗಳಿಗೆ ಅನುಗುಣವಾಗಿ ಇರಲಿದೆ. ಅಂದ್ರೆ 15 ಸಾವಿರದಿಂದ 75 ಸಾವಿರದ ತನಕ ಇರಲಿದೆ. ಅರ್ಜಿ ಸಲ್ಲಿಸಲು ಈಗಾಗಲೇ ದಿನಾಂಕ ಶುರುವಾಗಿದ್ದು, ಅಕ್ಟೋಬರ್ 23 ಕೊನೆಯ ದಿನಾಂಕವಾಗಿದೆ. https://english.swachhamevajayate.org/ ಈ ವೆಬ್ಸೈಟ್ ನಲ್ಲಿ ನಿಮಗೆ ಬೇಕಾದ ಮಾಹಿತಿ ಲಭ್ಯವಿದೆ.ಅರ್ಹ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ.

Advertisement
Tags :
bengaluruchitradurgaKarnatakaPanchayat Raj Departmentrecruitmentsuddionesuddione newsಆರಂಭಕರ್ನಾಟಕಚಿತ್ರದುರ್ಗನೇರ ನೇಮಕಾತಿಪಂಚಾಯತ್ ರಾಜ್ ಇಲಾಖೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article