Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬೇರೆ ಭಾಷೆಯವರಿಗೂ ಕನ್ನಡ ಕಲಿಸುವಂತಾಗಬೇಕು : ಕನ್ನಡ ರಾಜ್ಯೋತ್ಸವದ ದಿನ ಸಿಎಂ ಕರೆ

12:02 PM Nov 01, 2024 IST | suddionenews
Advertisement

 

Advertisement

ಬೆಂಗಳೂರು: ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ. 69ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಕನ್ನಡಿಗರು ಆಚರಣೆ ಮಾಡುತ್ತಿದ್ದಾರೆ. ನವೆಂಬರ್ ಪೂರ್ತಿ ಕನ್ನಡದ ಹಬ್ಬ ಇರಲಿದೆ. ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಅವರು ಕನ್ನಡದ ಬಗ್ಗೆ ಕರೆ ನೀಡಿದ್ದಾರೆ.

ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆದಿದೆ. ಈ ವೇಳೆ ದ್ವಜಾರೋಹಣ ನೆರವೇರಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರು, ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ. ರಾಷ್ಟ್ರ ಧ್ವಜ ಹಾಗೂ ಕನ್ನಡದ ಧ್ವಜವನ್ನು ಈ ವೇಳೆ ಹಾರಿಸಿದ್ದಾರೆ. ಇದೇ ವೇಳೆ ಹಲವು ಶಾಲೆಗಳಿಂದ ಬಂದಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಕನ್ನಡ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡಿದರು.

Advertisement

 

ಇದೆ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಹಾಗೂ ಕನ್ನಡಿಗರಿಗೆ ಹೀಯಾಳಿಸುವಂತ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡ ದ್ರೋಹ ಆಗಿದೆ. ಅಂತವಹ ವಿರುದ್ಧ ಸರ್ಕಾರ ಮುಲಾಜಿಲ್ಲದೆ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಕರ್ನಾಟಕ ಎಂದು ನಾಮಕರಣವಾಗಿ 51 ವರ್ಷ ತುಂಬುತ್ತಿದೆ. ಕನ್ನಡವನ್ನು ವ್ಯಾವಹಾರಿಕ ಭಾಷೆ ಮಾಡುವುದರ ಜೊತೆಗೆ ಬೇರೆ ಭಾಷೆಯವರ ಜೊತೆಗೂ ಕನ್ನಡದಲ್ಲಿಯೇ ಮಾತನಾಡುತ್ತೇವೆ ಎಂದು ಶಪಥ ಮಾಡಬೇಕು. ಬೇರೆ ಭಾಷೆಯವರಿಗೂ ಕನ್ನಡ ಕಲಿಸುವ ಪ್ರಯತ್ನವಾಗಬೇಕು ಎಂದಿದ್ದಾರೆ.

ಇದೆ ವೇಳೆ ಇಡೀ ದೇಶದಲ್ಲೇ ಕರ್ನಾಟಕ ಅತ್ಯಧಿಕ ತೆರಿಗೆ ಕಟ್ಟುತ್ತಿರುವ ಎರಡನೇ ರಾಜ್ಯವಾಗಿದೆ. 4 ಲಕ್ಷ ಕೋಟಿ ತೆರಿಗೆ ಕಟ್ಟಿದರೆ ಕೇಂದ್ರದಿಂದ ನಮಗೆ ಬರುವುದು 50-60 ಸಾವಿರ ಕೋಟ ಎಂದು ಕೇಂದ್ರದ ವಿರುದ್ಧ ಗರಂ ಆಗಿದ್ದಾರೆ.

Advertisement
Tags :
bengaluruChief Minister SiddaramaiahchitradurgaKannada rajyotsavasuddionesuddione newsಕನ್ನಡ ರಾಜ್ಯೋತ್ಸವಚಿತ್ರದುರ್ಗಬೆಂಗಳೂರುಸಿ ಎಂ ಸಿದ್ದರಾಮಯ್ಯಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article