For the best experience, open
https://m.suddione.com
on your mobile browser.
Advertisement

ಅತ್ಯಾಚಾರ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಜಾನಿ ಮಾಸ್ಟರ್ ಅರೆಸ್ಟ್..!

03:17 PM Sep 19, 2024 IST | suddionenews
ಅತ್ಯಾಚಾರ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಜಾನಿ ಮಾಸ್ಟರ್ ಅರೆಸ್ಟ್
Advertisement

Advertisement
Advertisement

ಬೆಂಗಳೂರು: ಅತ್ಯಾಚಾರ ಆರೋಪ ಕೇಳಿ ಬಂದಾಗಲೇ ತಲೆ ಮರೆಸಿಕೊಂಡಿದ್ದ ಜಾನಿ ಮಾಸ್ಟರ್ ಬಂಧನವಾಗಿದೆ. ಇವರು ಖ್ಯಾತ ನೃತ್ಯ ಸಂಯೋಜಕರಾಗಿದ್ದಾರೆ. 21 ವರ್ಷದ ಡ್ಯಾನ್ಸರ್ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ದೂರಿನ ಆಧಾರದ ಮೇಲೆ, ಜಾನಿ ಮಾಸ್ಟರ್ ಬಂಧನವಾಗಿದೆ. ಬೆಂಗಳೂರಿನಲ್ಲಿ ಪೊಲಿಒಸರು ಬಂಧಿಸಿದ್ದಾರೆ.

ಜಾನಿ ಮಾಸ್ಟರ್ ರಾಷ್ಟ್ರಪ್ರಶಸ್ತಿ ವಿಜೇತರಾಗಿದ್ದಾರೆ. ಆದರೆ ಈಗ ಮಾಡಿರುವ ಕೆಲಸಕ್ಕೆ ಬಹಳಷ್ಟು ಜನರಿಂದ ನಿಂದನೆ ಎದುರಿಸುತ್ತಿದ್ದಾರೆ. ಅತ್ಯಾಚಾರ ಆರೋಪ ಕೇಳಿ ಬಂದಾಗ ಮೊದಲಿಗೆ ಇದು ಸುಳ್ಳೆಂದೆ ವಾದಿಸಿದ್ದರು. ಚಿತ್ರರಂಗವೂ ಸಂತ್ರಸ್ತೆಯ ಪರವಾಗಿ ನಿಂತಾಗ ಜಾನಿ ಮಾಸ್ಟರ್ ತಲೆ ಮರೆಸಿಕೊಂಡಿದ್ದರು. ಟ್ರಾನ್ಸಿಟಿ ವಾರೆಂಟ್ ಮೇಲೆ ಅರೆಸ್ಟ್ ಮಾಡಲಾಗಿದೆ.

Advertisement
Advertisement

ಯುವತಿ ಇತ್ತೀಚೆಗೆ ಸೈಬರಾಬಾದ್ ಪೊಲೀಸರಿಗೆ, ಜಾನಿ ಮಾಸ್ಟರ್ ವಿರುದ್ಧ ದೂರು ದಾಖಲಾಗಿತ್ತು. 2019ರಲ್ಲಿ ತನ್ನನ್ನು ರಿಯಾಲಿಟಿ ಶೋ ಒಂದರಲ್ಲಿ ನೋಡಿ, ಆಕೆಗೆ ಅಸಿಸ್ಟೆಂಟ್ ಕೋರಿಯೋಗ್ರಾಫರ್ ಅವಕಾಶ ಕೊಡಿಸುವುದಾಗಿ ಹೇಳಿದ್ದರಂತೆ. ಅಸಿಸ್ಟೆಂಟ್ ಕೊರಿಯೋಗ್ರಾಫರ್ ಕೆಲಸ ನೀಡಿದ ಬಳಿಕ ಯುವತಿಯನ್ನು ಲೈಂಗಿಕ ತೃಷೆಗೆ ಬಳಸಿಕಿಂಡಿದ್ದಾರೆ. ಅಲ್ಲದೆ ನಟಿ ಕೊಟ್ಟಿರುವ ದೂರಿನಂತೆ ಜಾನಿ ಮಾಸ್ಟರ್ ಜೊತೆಗೆ ಸೇರಿ ಅವರ ಪತ್ನಿಯೂ ಹಲ್ಲೆ ಮಾಡಿದ್ದರಂತೆ.

ಪ್ರಕರಣ ಬೆಳಕಿಗೆ ಬಂದ ಬಳಿಕ ಸಂತ್ರಸ್ತ ಯುವತಿಗೆ ಚಿತ್ರರಂಗದ ಹಲವು ಗಣ್ಯರಿಂದ ಬೆಂಬಲ ಸಿಕ್ಕಿದೆ. ನಟ, ನಿರ್ದೇಶಕ, ನಟಿಯರು ಕೂಡ ಸಂತ್ರಸ್ತೆಯ ಪರವಾಗಿ ನಿಂತಾಗ, ಕೇಸ್ ಸ್ಟ್ರಾಂಗ್ ಆಗಿದೆ. ಹೀಗಾಗಿ ಜಾನಿ ಮಾಸ್ಟರ್ ಅನ್ನು ಬಂಧಿಸಿಲಾಗಿದೆ.

ಜಾನಿ ಮಾಸ್ಟರ್ ದಕ್ಷಿಣ ಭಾರತದ ಖ್ಯಾತ ಕೊರಿಯೋಗ್ರಾಫರ್. ದಕ್ಷಿಣ ಭಾಗದ ಎಲ್ಲಾ ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ್ದಾರಡ. ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಹಲವರ ಜೊತೆಗೆ ವರ್ಕ್ ಮಾಡಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಲ್ಲಿಯೂ ಗುರುತಿಸಿಕೊಂಡಿದ್ದು, ಅಪ್ಪುಗೆ ಕೊರಿಯೋಗ್ರಫಿ ಮಾಡಿದ್ದಾರೆ.

Advertisement
Tags :
Advertisement